ಬಜೆಟ್ ದಿನ: ಷೇರುಪೇಟೆ ಭರ್ಜರಿ ಆರಂಭ, ಸೆನ್ಸೆಕ್ಸ್ ಅಂಕ ಜಿಗಿತ
ಮೇಡ್ ಇನ್ ಇಂಡಿಯಾ ಟ್ಯಾಬ್ ಹಿಡಿದು ಕಾಗದ ರಹಿತ ಬಜೆಟ್ ಮಂಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಜ್ಜಾಗಿ ಸಂಸತ್ ಪ್ರವೇಶಿಸಿದ್ದಾರೆ.
ಬಜೆಟ್ ದಿನದಂದು ಷೇರುಪೇಟೆ ಉತ್ತಮ ಆರಂಭ ಪಡೆದುಕೊಂಡಿದೆ. ಸೆನ್ಸೆಕ್ಸ್ 401.77 ಅಂಶಗಳು ಏರಿಕೆ ಕಂಡಿದ್ದು, 46,687.54 ಅಂಕಗಳನ್ನು ಹೊಂದಿದೆ. ನಿಫ್ಟಿ 13,700 ಅಂಕಗಳಷ್ಟಿದೆ.

ಕಳೆದ ಐದು ವಹಿವಾಟು ಸೆಷನ್ಸ್ ಗಳಲ್ಲಿ ಶೇ 7ರಷ್ಟು ಕುಸಿತ ಕಂಡಿತ್ತು. ಈಗ ಬಜೆಟ್ ಮಂಡನೆಯಾಗುತ್ತಿದ್ದಂತೆ ಷೇರುಪೇಟೆ ಚೇತರಿಕೆ ಕಾಣುವ ಲಕ್ಷಣಗಳಿವೆ.
ಏರಿಕೆ ಕಂಡಿರುವ ಕಂಪನಿಗಳ ಷೇರುಗಳು: ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಿಪಿಸಿಎಲ್ ಮತ್ತು ಐಒಸಿ ಸೇರಿವೆ.
ಇಳಿಕೆ ಕಂಡಿರುವ ಷೇರುಗಳು: ಯುಪಿಎಲ್, ಟೆಕ್ ಮಹೀಂದ್ರಾ, ಡಾ. ರೆಡ್ಡೀಸ್ ಲ್ಯಾಬ್ಸ್, ಸಿಪ್ಲಾ ಮತ್ತು ಟಾಟಾ ಮೋಟಾರ್ಸ್ ಸೇರಿವೆ. ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಮತ್ತು ಎಚ್‌ಡಿಪಿಸಿ ಬ್ಯಾಂಕ್ ಇವು ಅತ್ಯಂತ ಸಕ್ರಿಯ ಷೇರುಗಳಾಗಿವೆ.


Click it and Unblock the Notifications