ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರತಿಬಾರಿಯೂ ಬಜೆಟ್ ಮಂಡಿಸುವ ಸಚಿವರ ದಿರಿಸು ಕೂಡ ಗಮನ ಸೆಳೆಯುತ್ತದೆ. ಈ ಬಾರಿ ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣದ ಗರಿ ಗರಿ ಸೀರೆಯೊಂದಿಗೆ ಬಜೆಟ್ ಮಂಡಿಸಲಿದ್ದಾರೆ. ಬಿಳಿ ಬಣ್ಣದ ಬೆಡಗು ಮತ್ತು ಚಿನ್ನದ ಬಣ್ಣದ ಅಂಚು ಅವರ ಸೀರೆಗೆ ಮೆರಗು ನೀಡಲಿದೆ. ಅದಕ್ಕೆ ಹೊಂದುವ ನೀಲಿ ಅಂಚಿನ ರವಿಕೆ ಧರಿಸಿದ್ದಾರೆ.
ಅದಕ್ಕೆ ಚಿನ್ನದ ಸರ, ಬಳೆಗಳು ಮತ್ತು ಪುಟಾಣಿ ಕಿವಿಯೋಲೆಯ ಅಲಂಕಾರ ಮಾಡಿಕೊಂಡಿದ್ದಾರೆ. ಪ್ರತಿ ಬಾರಿಯೂ ಹಳೆಯ ಸಂಪ್ರದಾಯವನ್ನು ಮುರಿಯುವ ಮತ್ತು ಹೊಸ ಸಂಪ್ರದಾಯವನ್ನು ಆರಂಭಿಸುವ ನಡೆಯನ್ನು ನಿರ್ಮಲಾ ಅನುಸರಿಸಿಕೊಂಡು ಬಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅವರು ಬಜೆಟ್ ಪತ್ರಗಳನ್ನು ಒಳಗೊಂಡ ಬೃಹತ್ ಸೂಟ್‌ಕೇಸ್ ಹೊತ್ತು ತರುವ ಬದಲು, ರಾಷ್ಟ್ರೀಯ ಸಂಕೇತ ಅಶೋಕ ಸ್ತಂಬದ ಚಿತ್ರವುಳ್ಳ ಕೆಂಪು ಬಣ್ಣದ 'ಬಹಿ ಖಾತಾ'ದ ಕಡತ ತಂದು ಅದರಲ್ಲಿ ಬಜೆಟ್ ಮಂಡಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ 73 ವರ್ಷಗಳ ಸಂಪ್ರದಾಯವೊಂದನ್ನು ಕೈಬಿಡಲಾಗಿದೆ. ಇದೇ ಪ್ರಥಮ ಸಲ ಕೇಂದ್ರ ಬಜೆಟ್ ಸಂಪೂರ್ಣ ಕಾಗದ ರಹಿತವಾಗುತ್ತಿದೆ. ಅಂದರೆ, 2021-22ನೇ ಸಾಲಿನ ಬಜೆಟ್ ಅನ್ನು ಕಾಗದಗಳಲ್ಲಿ ಮುದ್ರಣ ಮಾಡಿಲ್ಲ.

ಮೇಡ್ ಇನ್ ಇಂಡಿಯಾ ಟ್ಯಾಬ್ಲೆಟ್ ಗ್ಯಾಡ್ಜೆಟ್‌ನಲ್ಲಿ ಸಂಪೂರ್ಣ ಬಜೆಟ್ ಪ್ರತಿಯನ್ನು ಅಡಕ ಮಾಡಲಾಗಿದೆ. ಕೆಂಪು ಬಣ್ಣದ ಕಡತದಲ್ಲಿ ನಿರ್ಮಲಾ ಸೀತಾರಾಮನ್ ಟ್ಯಾಬ್ಲೆಟ್ ಹೊತ್ತು ಸಂಸತ್ ಪ್ರವೇಶಿಸಿದ್ದಾರೆ. ಹೀಗಾಗಿ ಸಾಫ್ಟ್ ಕಾಪಿ ಓದುವ ಮೂಲಕ ಬಜೆಟ್ ಮಂಡನೆಯಾಗಲಿದೆ. ಮಂಡನೆಯಾದ ನಂತರ ಸರ್ಕಾರ ಬಿಡುಗಡೆ ಮಾಡಿರುವ ಆಪ್‌ನಲ್ಲಿ ಸಹ ಬಜೆಟ್‌ನ ಸಾಫ್ಟ್ ಕಾಪಿ ಲಭ್ಯವಾಗಲಿದೆ. ಸಂಸದರಿಗೂ ಸಾಫ್ಟ್ ಕಾಪಿ ನೀಡಲಾಗುತ್ತದೆ.
More From GoodReturns

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

ಏಪ್ರಿಲ್ 1ರಿಂದ ಈ ರಾಜ್ಯದ ಸರ್ಕಾರಿ ಜನರಿಗೆ ಹೊಸ ಪಿಂಚಣಿ...ಕೊನೆಯ ಸಂಬಳದ 50%ನಷ್ಟು ಖಚಿತ! ಈ ಗುಡ್ನ್ಯೂಸ್ ಯಾರಿಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

SBI Credit Card: ಎಸ್ಬಿಐ ಗ್ರಾಹಕರೇ ಇಲ್ಲಿ ಗಮನಿಸಿ! ಏಪ್ರಿಲ್ 1 ರಿಂದ ಈ ನಿಯಮ ಚೇಂಜ್

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ



Click it and Unblock the Notifications