ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1, 2023ರಂದು ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಕೇಂದ್ರ ವಿತ್ತ ಸಚಿವೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಸಾಮಾನ್ಯವಾಗಿ ಬಜೆಟ್ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಲವಾರು ಏರಿಳಿತ ಕಂಡುಬರುತ್ತದೆ. 2023ರ ಕೇಂದ್ರ ಬಜೆಟ್ ಬಳಿಕ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡುಬರುತ್ತಿದೆ.
ಈ ನಡುವೆ ಷೇರು ಮಾರುಕಟ್ಟೆಯ ಬಗ್ಗೆ ಹಲವಾರು ಊಹಾಪೋಹಗಳು ಹರಡುತ್ತಿದೆ. ಸ್ಟಾಕ್ ಮಾರುಕಟ್ಟೆಯ ಬಳಿಕ ಹಲವಾರು ವದಂತಿಗಳು ಹರಡಿದೆ. ಜನರಿಗೆ ಬೇರೆ ಬೇರೆ ರೀತಿಯ ಸಲಹೆಗಳು ಕೇಳಿಬರುತ್ತಿದೆ. ಯುವ ಮಿಲೇನಿಯಲ್‌ಗಳು ಸ್ಟಾಕ್ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪೋರ್ಟ್‌ಫೋಲಿಯೊವನ್ನು ತೆರೆಯುವಾಗ ಎಚ್ಚರಿಕೆಯಿಂದ ಕಾರ್ಯನಿರ್ವಹಣೆ ಮಾಡುವುದು ಮುಖ್ಯವಾಗುತ್ತದೆ.
ಯುವ ಜನರು ಹೂಡಿಕೆ ಮಾಡಿ ಅಧಿಕ ರಿಟರ್ನ್ ಅನ್ನು ಪಡೆಯಲು ಬಯಸುತ್ತಾರೆ. ಅದು ಕೂಡಾ ಈ ದುಬಾರಿ ಯುಗದಲ್ಲಿ ಹೂಡಿಕೆಯಿಂದ ಅಧಿಕ ರಿಟರ್ನ್ ಅನ್ನು ಪಡೆಯುವುದು ಯಾರಿಗಾದರೂ ಅತೀ ಮುಖ್ಯವಾಗಿರುತ್ತದೆ. ಆದರೆ ಹೂಡಿಕೆ ಮಾಡುವಾಗ ಅದರ ಬಗ್ಗೆ ಸರಿಯಾದ ಸಂಶೋಧನೆ ಮಾಡುವುದು ಅತೀ ಮುಖ್ಯವಾಗಿದೆ. ವದಂತಿಗಳ ಆಧಾರದಲ್ಲಿ ಹೂಡಿಕೆ ಮಾಡಿದರೆ ನಷ್ಟ ಉಂಟಾಗಬಹುದು. ಆದ್ದರಿಂದಾಗಿ ಜನರು ಸಂಶೋಧನೆ ಆಧಾರದಲ್ಲಿ ಹೂಡಿಕೆಯನ್ನು ಮಾಡುವುದು ಉತ್ತಮ. ಈ ಬಗ್ಗೆ ಇಲ್ಲಿದೆ ಮಾಹಿತಿ.. ಮುಂದೆ ಓದಿ...
ಸಂಶೋಧನೆ ಆಧಾರದಲ್ಲಿ ಸಲಹೆ
ಮಿಲೇನಿಯಲ್‌ಗಳು ಅಂದರೆ 1980ರಿಂದ 1990ರಲ್ಲಿ ಜನಿಸಿದವರು ಆಗಿದ್ದಾರೆ. ಈ ಯುವಜನರು ಸ್ಟಾಕ್‌ಗಳ ಸಂಶೋಧನೆಯ ಮೇಲೆ ಆದ್ತೆ ನೀಡುತ್ತಿಲ್ಲ. ಆದರೆ ಇಕ್ವಿಟಿ ಸಂಶೋಧನೆಯು ಅತೀ ಮುಖ್ಯವಾಗಿದೆ. ಇದರಿಂದಾಗಿ ನೀವು ಹೂಡಿಕೆಯನ್ನು ಹಿಂಪಡೆಯಬಹುದು ಅಥವಾ ಹೂಡಿಕೆಯನ್ನು ಮಾಡುವ ನಿರ್ಧಾರವನ್ನು ಮಾಡಬಹುದು. ಈಕ್ವಿಟಿ ರಿಸರ್ಚ್ ತಜ್ಞರುಗಳು ಸ್ಟಾಕ್‌ಗಳ ಬಗ್ಗೆ ವಿಶ್ಲೇಷನೆ ಮಾಡುತ್ತದೆ. ಇದರಿಂದಾಗಿ ಗಳಿಕೆಯನ್ನು ಹೆಚ್ಚಳ ಮಾಡಲು ಸಹಾಯಕವಾಗಲಿದೆ. ಹಾಗೆಯೇ ಈ ಸ್ಟಾಕ್‌ಗಳ ಬಗ್ಗೆ ಸಂಶೋಧನೆಯು ನಿಮಗೆ ಹೂಡಿಕೆ ಮಾಡಲು ಸಹಾಯಕವಾಗಲಿದೆ. ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ತನ್ನ ಸಲಹೆಯ ಮೂಲಕ, ಈಕ್ವಿಟಿ ಸಂಶೋಧನೆಯೊಂದಿಗೆ ನೀವು ಉತ್ತಮ ಸ್ಟಾಕ್ ಖರೀದಿಸಲು ಸಹಾಯ ಮಾಡುತ್ತದೆ.
ಹೂಡಿಕೆ ಮೇಲೆ ಬಜೆಟ್ ಪ್ರಭಾವ
ಬಜೆಟ್ ಬಳಿಕ ಹೂಡಿಕೆದಾರರಿಗೆ ಅತೀ ನಿರ್ಣಾಯಕವಾಗಿ ಸಮಯವಾಗಿದೆ. ಅತೀ ಉತ್ತಮವಾಗಿ ಹೂಡಿಕೆ ಮಾಡಲು ತಿಳಿದಿರುವವರಿಗೂ ಕೂಡಾ ಬಜೆಟ್‌ನ ಬಳಿಕ ಹೂಡಿಕೆ ಸ್ಥಿತಿ ಶೋಚನೀಯವಾಗಿದೆ. ನಿಗದಿತ ಅವಧಿಯಲ್ಲಿ ಹೂಡಿಕೆಯನ್ನು ಮಾಡುವವರಿಗೆ ವೈಯಕ್ತಿಕ ಸ್ಟಾಕ್‌ಗಳ ಮೇಲೆ ಬಜೆಟ್ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ವೃತ್ತಿಪರರ ಸಹಾಯವನ್ನು ಪಡೆಯುವುದು ಅತೀ ಮುಖ್ಯವಾಗಿದೆ. ಅದ್ಕಕಾಗಿ ಮೋತಿಲಾಲ್ ಓಸ್ವಾಲ್ ಅನುಭವಿ ಮತ್ತು ಉತ್ತಮ ವಿಶ್ಲೇಷಕರ ಸಂಶೋಧನಾ ಡೆಸ್ಕ್ ಅನ್ನು ಹೊಂದಿದೆ. ಈ ತಜ್ಞರುಗಳು ಹಲವಾರು ವರ್ಷಗಳಿಂದ ಬಜೆಟ್ ಮತ್ತು ಅದರ ಪ್ರಭಾವಗಳ ಬಗ್ಗೆ ತಿಳಿದಿದ್ದಾರೆ.
ಡಿಜಿಟಲ್ ಇಕ್ವಿಟಿ ಸಂಶೋಧನಾ ವರದಿ
ಬ್ರೋಕರೇಜ್ ತನ್ನ ಎಲ್ಲಾ ಸಂಶೋಧನೆ ಬೆಂಬಲಿತ ಸಲಹೆಯನ್ನು "ಫೈಜಿಟಲ್" ವಿಧಾನದೊಂದಿಗೆ ಸಂಯೋಜನೆ ಮಾಡಿದೆ. ಬ್ರೋಕರೇಜ್ ಸಂಸ್ಥೆಯು ನೇರವಾಗಿ ಮತ್ತು ಡಿಜಿಟಲ್ ಎರಡು ರೀತಿಯ ಸೇವೆಯನ್ನು ನೀಡುತ್ತದೆ. ಇನ್ನು ಹೂಡಿಕೆದಾರರಿಗೆ ಖರೀದಿ ಮತ್ತು ಮಾರಾಟಗಳ ಬಗ್ಗೆ ಮಾಹಿತಿ ನೀಡಲು ಡಿಜಿಟಲ್ ಇಕ್ವಿಟಿ ಸಂಶೋಧನಾ ವರದಿಗಳ ಸರಣಿಯನ್ನು ಬ್ರೋಕರೇಜ್ ಬಿಡುಗಡೆ ಮಾಡಿದೆ. ಹೂಡಿಕೆದಾರರ ಅಗತ್ಯಗಳು, ಪರಿಹಾರಗಳು, ಮುಂತಾದವುಗಳ ಬಗ್ಗೆ ಮೋತಿಲಾಲ್ ಓಸ್ವಾಲ್ ಸಲಹೆಯನ್ನು ನೀಡುತ್ತದೆ. ಒಟ್ಟಾಗಿ ಮೋತಿಲಾಲ್ ಓಸ್ವಾಲ್ ಸ್ಟಾಕ್‌ಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಸಹಾಯ ಮಾಡಲಿದೆ.


Click it and Unblock the Notifications