ಬರ್ಗರ್ ಕಿಂಗ್ ಐಪಿಒಗೆ ಭರ್ಜರಿ ಪ್ರತಿಕ್ರಿಯೆ ಬಂದಿತ್ತು. ನಿರೀಕ್ಷೆಯಂತೆಯೇ ಷೇರು ಮಾರುಕಟ್ಟೆಯಲ್ಲಿ ಡಿಸೆಂಬರ್ 14ನೇ ತಾರೀಕಿನ ಲಿಸ್ಟಿಂಗ್ ಅದ್ಭುತವಾಗಿಯೇ ಆಯಿತು. 60 ರುಪಾಯಿಗೆ ವಿತರಣೆ ಮಾಡಿದ್ದ ಷೇರು, ಮೊದಲ ದಿನಾಂತ್ಯಕ್ಕೆ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ 135 ರುಪಾಯಿಯೊಂದಿಗೆ ವಹಿವಾಟು ಮುಗಿಸಿತ್ತು. ಇದೀಗ ಎರಡನೇ ದಿನದ ವಹಿವಾಟಿನಲ್ಲಿ 20% ಏರಿಕೆ ಕಂಡಿದೆ.
ಎರಡನೇ ದಿನವಾದ ಮಂಗಳವಾರ ಎನ್ ಎಸ್ ಇಯಲ್ಲಿ 147 ರುಪಾಯಿಯೊಂದಿಗೆ ವ್ಯವಹಾರ ಆರಂಭಿಸಿದ ಬರ್ಗರ್ ಕಿಂಗ್, ಅದಕ್ಕಿಂತ ಎರಡು ರುಪಾಯಿ ಕಡಿಮೆ, ಅಂದರೆ 145 ರುಪಾಯಿ ತಲುಪಿತು. ಆ ನಂತರದಲ್ಲಿ ಏರುತ್ತಲೇ ಸಾಗಿ ಬೆಳಗ್ಗೆ 11.56ರ ಹೊತ್ತಿಗೆ, ಅಂದರೆ ಈ ವರದಿ ಸಿದ್ಧವಾಗುವ ವೇಳೆಗೆ 20% ಏರಿಕೆ ಕಂಡು, 162 ರುಪಾಯಿಯಲ್ಲಿ ವಹಿವಾಟು ನಡೆಸುತ್ತಿತ್ತು.

ಯಾವುದೇ ಕಂಪೆನಿ ಷೇರಿಗೆ ಬೆಲೆ ಏರಿಕೆಗೆ ಅಂತ ದಿನದಲ್ಲಿ ಒಂದು ಮಿತಿ ನಿಗದಿ ಆಗಿರುತ್ತದೆ. ಅದನ್ನು ಅಪ್ಪರ್ ಸರ್ಕ್ಯೂಟ್ ಎನ್ನಲಾಗುತ್ತದೆ. ಒಂದು ದಿನದಲ್ಲಿ ಆ ಮಟ್ಟವನ್ನು ಮುಟ್ಟಿದ ನಂತರ ಮೇಲೆ ಹೋಗುವುದಕ್ಕೆ ಅವಕಾಶ ನೀಡುವುದಿಲ್ಲ. ಬರ್ಗರ್ ಕಿಂಗ್ ಮಂಗಳವಾರದಂದು ಅಪ್ಪರ್ ಸರ್ಕ್ಯುಟ್ ತಲುಪಿ, ಬೆಲೆ ಸ್ಥಿರವಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications