ಚಿನ್ನದ ಮೇಲೆ ದಿನಕ್ಕೆ 10 ರೂ ಹೂಡಿಕೆ ಮಾಡುವ ಸುಲಭ ವಿಧಾನ

ಹಿಂದೆಲ್ಲಾ ಹೂಡಿಕೆ ಮಾಡಬೇಕೆಂದರೆ ಹೇಗಪ್ಪಾ ಎಂದು ಆಲೋಚಿಸಬೇಕಿತ್ತು. ದೊಡ್ಡ ಮೊತ್ತವಾದರೆ ಚೀಟಿಗೋ, ಸಣ್ಣ ಮೊತ್ತವಾದರೆ ಪಿಗ್ಗಿಗೋ ಹಣ ಹೂಡಿಕೆ ಮಾಡುತ್ತಿದ್ದರು. ಈಗ ಡಿಜಿಟಲ್ ಯುಗದಲ್ಲಿ ಹೂಡಿಕೆಗೆ ಬಹಳ ಅವಕಾಶಗಳಿವೆ. ಈಗ ಚಿನ್ನದ ಮೇಲಿನ ಹೂಡಿಕೆಯ ಟ್ರೆಂಡ್ ಶುರುವಾಗಿದೆ.

ಚಿನ್ನ ಕೊಳ್ಳುವ ಆಸೆ ಎಲ್ಲರಿಗೂ ಇದ್ದದ್ದೇ. ಆದರೆ, ಗ್ರಾಮ್‌ಗೆ 5 ಸಾವಿರ ರೂ ಆಜುಬಾಜಿನ ಬೆಲೆಯ ಚಿನ್ನವನ್ನು ಕೊಳ್ಳುವುದು ಬಹಳ ಕಷ್ಟ. ಹೀಗಾಗಿ, ಚಿನ್ನ ಕೊಳ್ಳಲು ಬಹಳ ಮಂದಿ ಹಿಂದೇಟು ಹಾಕುತ್ತಾರೆ. ಆದರೆ, ಈಗ ಚಿನ್ನದ ಮೇಲೆ ಹೂಡಿಕೆ ಮಾಡುವುದು ಬಹಳ ಸುಲಭ.

ಒಡವೆ ಅಂಗಡಿಗಳಲ್ಲಿ ಜನರು ಚಿನ್ನದ ಚೀಟಿ ಕಟ್ಟುತ್ತಾರೆ. ತಿಂಗಳಿಗೆ 1 ಸಾವಿರ ರೂನಂತೆ ಹಣ ಕಟ್ಟಿ ಒಂದು ವರ್ಷದ ಬಳಿಕ ಚಿನ್ನ ಪಡೆಯುತ್ತಾರೆ. ಅದೂ ಕೂಡ ಹೂಡಿಕೆಗೆ ಸುಲಭ ಮಾರ್ಗ. ಆದರೆ, ಡಿಜಿಟಲ್ ಮಾರ್ಗದಲ್ಲಿ ಹೂಡಿಕೆ ಇನ್ನೂ ಸುಲಭ ಮತ್ತು ಸರಳ. ಇಲ್ಲಿ ನೀವು ದಿನಕ್ಕೆ 10 ರೂಪಾಯಿಂತೆಯೇ ಹಣ ಹೂಡಿಕೆ ಮಾಡಬಹುದು.

ದಿನಕ್ಕೆ ಹತ್ತಿಪ್ಪತ್ತು ರೂಪಾಯಿ ಎಂದರೆ ಯಾರಿಗೂ ಹೊರೆಯಾಗುವುದಿಲ್ಲ. ಒಂದು ಕಪ್ ಚಹಾಗೆ ವ್ಯಯಿಸುವ ಹಣವನ್ನು ಚಿನ್ನಕ್ಕೆ ವ್ಯಯಿಸುವುದು ದೊಡ್ಡ ಸಂಗತಿ ಅಲ್ಲ. ಈಗಂತೂ ಅಟೊ ಪೇ ಆಪ್ಷನ್ ಬಂದಿರುವುರಿಂದ ನೀವು ಮರೆತರೂ ಆ್ಯಪ್‌ಗಳು ತನ್ನಂತಾನೇ ಹಣವನ್ನು ನಿಮ್ಮ ಖಾತೆಯಿಂದ ನಿಯಮಿತವಾಗಿ ಕಡಿತ ಮಾಡುತ್ತಾ ಹೋಗುತ್ತವೆ.

ನೀವು ಹಣ ಹೊಂದಿಸಿ ಒಡವೆ ಖರೀದಿಸುವುದಕ್ಕಿಂತ ಪರಿಶುದ್ಧ ಚಿನ್ನದ ಮೇಲೆ ಹೂಡಿಕೆ ಮಾಡುವುದು ಲಾಭಕಾರಿ. ಹೂಡಿಕೆ ದೃಷ್ಟಿಯಿಂದಲೂ ಚಿನ್ನದ ಮೇಲೆ ಹಣ ಹಾಕಬಹುದು. ಚಿನ್ನದ ಮೇಲೆ ಹೂಡಿಕೆ ಮಾಡಿದರೆ ನಷ್ಟವಂತೂ ಇರುವುದಿಲ್ಲ. ಹಿಂದಿನ ಬೆಲೆ ಏರಿಕೆಯನ್ನು ಗಮನಿಸಿದರೆ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 10ರಷ್ಟಾದರೂ ಹೆಚ್ಚಾಗುತ್ತಾ ಬಂದಿರುವುದನ್ನು ಕಾಣಬಹುದು.

ಈಗ ಚಿನ್ನದ ಮೇಲಿನ ಹೂಡಿಕೆಗೆ ಹಲವು ಮಾರ್ಗಗಳಿಗೆ. ದೇಸಿಎಂಎಲ್ (Desiml) ಮತ್ತು ಗುಲ್ಲಕ್ (Gullak) ಎಂಬೆರಡು ಮೈಕ್ರೋ ಫೈನಾನ್ಸಿಂಗ್ ಪ್ಲಾಟ್‌ಫಾರ್ಮ್‌ಗಳು ಹೂಡಿಕೆ ವಿಚಾರದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಸಣ್ಣ ಉಳಿತಾಯಕ್ಕೆ ಈ ಪ್ಲಾಟ್‌ಫಾರ್ಮ್‌ಗಳು ಹೇಳಿ ಮಾಡಿಸಿದಂತಿವೆ. ದೇಸಿಎಂಎಲ್ ಮತ್ತು ಗುಲ್ಲಕ್‌ನಲ್ಲಿ ನೀವು ಎಷ್ಟು ಬೇಕಾದರೂ ಹಣವನ್ನು ಉಳಿತಾಯವಾಗಿ ಇಡಬಹುದು. ದೇಸಿಎಂಎಲ್ ನಿಮ್ಮ ಹಣವನ್ನು ಬೇರೆ ಹಣಕಾಸು ಸ್ವತ್ತುಗಳ ಮೇಲೆ ಹೂಡಿಕೆ ಮಾಡುತ್ತದೆ. ಗುಲ್ಲಕ್ ಸಂಸ್ಥೆ ಡಿಜಿಟಲ್ ಗೋಲ್ಡ್ ಮೇಲೆ ಹೂಡಿಕೆ ಮಾಡುತ್ತದೆ.

ಗುಲ್ಲಕ್‌ನಲ್ಲಿ 10 ರೂನಿಂದ ಆರಂಭಿಸಿ

ಗುಲ್ಲಕ್‌ನಲ್ಲಿ 10 ರೂನಿಂದ ಆರಂಭಿಸಿ

ಗುಲ್ಲಕ್ ಮೊಬೈಲ್ ಅಪ್ಲಿಕೇಶನ್ ಆಗಿ ಲಭ್ಯ ಇದ್ದು, ನಿಮಗೆ ಆಟೊ ಪೇ ಆಪ್ಷನ್ ಒದಗಿಸುತ್ತದೆ. ಇದರಲ್ಲಿರುವ ಎಸ್‌ಐಪಿ ಸ್ಕೀಮ್ ಮೂಲಕ ನೀವು ಡಿಜಿಟಲ್ ಗೋಲ್ಡ್ ಮೇಲೆ ದಿನಕ್ಕೆ ಕನಿಷ್ಠ 10 ರೂನಿಂದ ಹೂಡಿಕೆ ಆರಂಭಿಸಬಹುದು.

ಆಟೊ ಪೇ ಆಗಿ ನೀವು ಎಷ್ಟು ಹಣವಾದರೂ ಯಾವ ಅವಧಿಗಾದರೂ ನಿಗದಿ ಮಾಡಬಹುದು. ಬೇಕೆಂದರೆ ಒಟ್ಟಿಗೆ ಹಣ ಸಿಕ್ಕರೆ ಅದನ್ನೂ ಸೇರಿಸಬಹುದು.

ನೀವು ಯಾವಾಗ ಬೇಕಾದರೂ ನಿಮ್ಮ ಸೇವಿಂಗ್ಸ್ ಹಣವನ್ನು ಹಿಂಪಡೆಯಬಹುದು. ಅಥವಾ ಆಟೊ ಪೇಯನ್ನು ನಿಮಗೆ ಬೇಕಾದ ಅವಧಿಯವರೆಗೂ ನಿಲ್ಲಿಸಿ ನಂತರ ಮುಂದುವರಿಸಬಹುದು. ಇವೆಲ್ಲಾ ಆಯ್ಕೆಗಳು ಲಭ್ಯ ಇರುತ್ತವೆ.

ನೀವು ಹೂಡುವ ಹಣವು ಚಿನ್ನಕ್ಕೆ ಜಮೆಯಾಗುತ್ತಾ ಹೋಗುತ್ತದೆ. ಆವತ್ತವತ್ತಿನ ಚಿನ್ನದ ದರ ಅನ್ವಯ ಆಗುತ್ತದೆ. ಚಿನ್ನದ ಬೆಲೆ ಹೆಚ್ಚಾಗುತ್ತಿರುವ ಟ್ರೆಂಡ್ ಇದ್ದಾಗ ನೀವು ತಾತ್ಕಾಲಿಕವಾಗಿ ಹೂಡಿಕೆ ನಿಲ್ಲಿಸಬಹುದು. ಈ ಅವಕಾಶವೂ ಇರುತ್ತದೆ.

ಗುಲ್ಲಕ್‌ನಲ್ಲಿ ಹೇಗೆ ತೊಡಗಿಸಬಹುದು?

ಗುಲ್ಲಕ್‌ನಲ್ಲಿ ಹೇಗೆ ತೊಡಗಿಸಬಹುದು?

ಮೊದಲು ನಿಮ್ಮ ಬಳಿ ಯುಪಿಐ ಆ್ಯಪ್ ಇರಬೇಕು. ಗುಲ್ಲಕ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಆಟೊ ಪೇ ಸೆಟಪ್ ಮಾಡಬೇಕು. ಮ್ಯಾನುಯಲ್ ಆಗಿಯೂ ನೀವು ಹೂಡಿಕೆ ಮಾಡಬಹುದು. ಆಟೊ ಪೇ ಅಳವಡಿಸಿಕೊಂಡರೆ ತನ್ನಂತಾನೆ ಹಣ ಕಡಿತವಾಗುವುದರಿಂದ ನಮಗೆ ಅರಿವಿಲ್ಲದೆಯೇ ಸೇವಿಂಗ್ಸ್ ಸೃಷ್ಟಿಯಾಗುತ್ತಾ ಹೋಗುತ್ತದೆ.

ನೀವು ಹೂಡಿಕೆಯನ್ನು ನಿಲ್ಲಿಸಿದರೆ ಹಣದ ನಗದು ರೂಪದಲ್ಲಿ ನೀವು ಹಣವನ್ನು ವಾಪಸ್ ಪಡೆಯಬಹುದು. ಅಥವಾ ಹೂಡಿಕೆಯ ಮೊತ್ತಕ್ಕೆ ಅನುಗುಣವಾದ 24 ಕ್ಯಾರಟ್ ಚಿನ್ನವನ್ನು ಮನೆಗೆ ಡೆಲಿವರಿಯಾಗುವಂತೆ ಮಾಡಬಹುದು.

ಪೇಟಿಎಂನಲ್ಲೂ ಲಭ್ಯ

ಪೇಟಿಎಂನಲ್ಲೂ ಲಭ್ಯ

ಪೇಟಿಎಂನಲ್ಲೂ ಗೋಲ್ಡ್ ಸ್ಕೀಮ್ ಇದೆ. ಪೇಟಿಎಂ ಗೋಲ್ಡ್‌ನಲ್ಲಿ ನೀವು ಎಷ್ಟು ಬೇಕಾದರೂ ಹಣ ತೊಡಗಿಸಿಕೊಳ್ಳಬಹುದು. ಅದರಲ್ಲೂ ಕೂಡ ಆಯಾ ದಿನದ ಚಿನ್ನದ ದರ ಅನ್ವಯ ಆಗುತ್ತದೆ. ಪೇಟಿಎಂನಲ್ಲಿ ಅಟೊ ಪೇ ಮತ್ತು ಮ್ಯಾನುಯಲ್ ಎರಡೂ ಅವಕಾಶ ಇರುತ್ತದೆ.

ಚಿನ್ನ ಬೇಡವೆಂದರೂ ಬೇರೆ ಹಲವು ಎಸ್‌ಐಪಿಗಳು ಈಗಿನ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯ ಇವೆ. ಬ್ಯಾಂಕ್‌ನಲ್ಲಿ ಠೇವಣಿಯಿಂದ ಸಿಗುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಎಸ್‌ಐಪಿಗಳು ಒದಗಿಸಬಲ್ಲುವು. ಚಿನ್ನದಿಂದ ಹೆಚ್ಚು ರಿಟರ್ನ್ ಸಿಗುತ್ತದೆ. ಹೀಗಾಗಿ, ಹೂಡಿಕೆ ಸ್ವತ್ತಾಗಿ ಚಿನ್ನ ಈಗಲೂ ಅನೇಕರಿಗೆ ಪ್ರಮುಖ ಆಯ್ಕೆ. ಚಿನ್ನವನ್ನು ಹೂಡಿಕೆಯಾಗಿ ಕಾಣಲು ಮನಸ್ಸಾಗುತ್ತಿಲ್ಲವೆಂದರೂ ಒಡವೆಯಾಗಿಯೂ ಅದನ್ನು ಬಳಸಬಹುದು. ಈ ಒಡವೆ ನಿಮಗೆ ಆಪತ್ಕಾಲದಲ್ಲಿ ಸಾಲಕ್ಕೆ ಸುಲಭ ಮಾರ್ಗ ಒದಗಿಸುತ್ತದೆ. ಹೀಗಾಗಿ, ಯಾವ ದೃಷ್ಟಿಯಿಂದ ನೋಡಿದರೂ ಚಿನ್ನದ ಮೇಲಿನ ಹೂಡಿಕೆ ಯಾವತ್ತೂ ಮೋಸ ಮಾಡದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+