ಬೈಜೂಸ್ ನಿಂದ ಆಕಾಶ್ ಎಜುಕೇಷನ್ 7300 ಕೋಟಿ ರು.ಗೂ ಹೆಚ್ಚು ಮೊತ್ತಕ್ಕೆ ಖರೀದಿ

ಭಾರತದ ಅತಿ ದೊಡ್ಡ ಆನ್ ಲೈನ್ ಎಜುಕೇಷನ್ ಸ್ಟಾರ್ಟ್ ಅಪ್ ಬೈಜೂಸ್ ನಿಂದ ಆಕಾಶ್ ಎಜುಕೇಷನಲ್ ಸರ್ವೀಸ್ ಪ್ರೈ. ಲಿಮಿಟೆಡ್ 100 ಕೋಟಿ ಯುಎಸ್ ಡಿಗೆ ಖರೀದಿ ಮಾಡಲಿದೆ ಎಂಬ ಬಗ್ಗೆ ಬ್ಲೂಮ್ ಬರ್ಗ್ ನಿಂದ ಜನವರಿ 12ರಂದು ವರದಿ ಆಗಿದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ 7300 ಕೋಟಿ ರುಪಾಯಿಗೂ ಹೆಚ್ಚಿದೆ.

ಬ್ಲ್ಯಾಕ್ ಸ್ಟೋನ್ ಗ್ರೂಪ್ ಬೆಂಬಲದ ಆಕಾಶ್ ಎಜುಕೇಷನಲ್ ಸರ್ವೀಸಸ್ ನಡೆಸುವ ಆಕಾಶ್ ಇನ್ ಸ್ಟಿಟ್ಯೂಟ್ ನಿಂದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳಿವೆ.

ವರದಿ ಪ್ರಕಾರ, ಇದು ವಿಶ್ವದಲ್ಲೇ ಅತಿ ದೊಡ್ಡ ಎಡ್ ಟೆಕ್ ಖರೀದಿಯಾಗಿದ್ದು, ಇನ್ನು ಎರಡ್ಮೂರು ತಿಂಗಳಲ್ಲಿ ಅಂತಿಮವಾಗಲಿದೆ. ಆಕಾಶ್ ಸ್ಥಾಪಕರಾದ ಚೌಧರಿ ಕುಟುಂಬ ಸಂಪೂರ್ಣ ಹೊರಬರಲಿದೆ. ಬ್ಲ್ಯಾಕ್ ಸ್ಟೋನ್ ನೊಂದಿಗೆ ಆಕಾಶ್ ನಲ್ಲಿನ 37.5% ಈಕ್ವಿಟಿ ಪಾಲನ್ನು ಬೈಜೂಸ್ ಗಾಗಿ ಖರೀದಿಸಲಿದೆ.

ಬೈಜೂಸ್ ನಿಂದ ಆಕಾಶ್ ಎಜುಕೇಷನ್ 7300 ಕೋಟಿ ರು.ಗೆ ಖರೀದಿ

ಬೈಜೂಸ್ ನಿಂದಾಗಲಿ ಅಥವಾ ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ಈ ಬಗ್ಗೆ ಯಾವುದೇ ಅಧಿಕೃತ ಖಾತ್ರಿ ಬಂದಿಲ್ಲ. ಈ ಹಿಂದೆ, 2020ರ ಆಗಸ್ಟ್ ನಲ್ಲಿ WhiteHat Jr ಅನ್ನು ಖರೀದಿಸುತ್ತಿರುವುದಾಗಿ ಬೈಜೂಸ್ ಘೋಷಣೆ ಮಾಡಿತ್ತು. ಮಕ್ಕಳಿಗೆ ಆನ್ ಲೈನ್ ಮೂಲಕ ಕೋಡಿಂಗ್ ತರಗತಿ ನಡೆಸುವ ಬಗ್ಗೆ WhiteHat Jr ಗಮನ ಕೇಂದ್ರೀಕರಿಸುತ್ತದೆ.

ಡಿಸೆಂಬರ್ ಮೊದಲ ವಾರದಲ್ಲಿ ಹೊರಬಿದ್ದ ಸುದ್ದಿಯ ಪ್ರಕಾರ, ಅತಿ ದೊಡ್ಡ ಈಕ್ವಿಟಿ ಹೂಡಿಕೆದಾರರಾದ ಟಿ ರೋಬ್ ಪ್ರೈಸ್ ಮತ್ತು ಬ್ಲ್ಯಾಕ್ ರಾಕ್ ನಿಂದ $ 200 ಮಿಲಿಯನ್ ಬಂದಿತ್ತು. ಆ ಮೂಲಕ ಬೆಂಗಳೂರಲ್ಲಿ ಮುಖ್ಯಕಚೇರಿ ಇರುವ ಕಂಪೆನಿಯ ಮೌಲ್ಯ 1200 ಕೋಟಿ ಯುಎಸ್ ಡಿ ಆಯಿತು.

ಭಾರತದ ಎರಡನೇ ಅತ್ಯಂತ ಮೌಲ್ಯಯುತ ಸ್ಟಾರ್ಟ್ ಅಪ್ ಗೆ ಮಾರ್ಕ್ ಝುಕರ್ ಬರ್ಗ್ ಅವರ ಚಾನ್ ಝುಕರ್ ಬರ್ಗ್ ಅಭಿಯಾನ, ಟೈಗರ್ ಗ್ಲೋಬಲ್ ಮ್ಯಾನೇಜ್ ಮೆಂಟ್ ಮತ್ತು ಬಾಂಡ್ ಕ್ಯಾಪಿಟಲ್ ಬೆಂಬಲ ಇದೆ.

ಬೈಜೂ ಸ್ಥಾಪಕರಾದ ರವೀಂದ್ರನ್ 2011ರಲ್ಲಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಆರಂಭಿಸಿದರು. ಸದ್ಯಕ್ಕೆ 7 ಕೋಟಿ ಬಳಕೆದಾರರು ದೇಶಾದ್ಯಂತದ 1700 ನಗರಗಳಲ್ಲಿ ಇದೆ. ಈ ಆಪ್ ಮೂಲಕ ಕಿಂಡರ್ ಗಾರ್ಟನ್ ನಿಂದ ಹನ್ನೆರಡನೇ ತರಗತಿ ತನಕ ಶೈಕ್ಷಣಿಕ ಮಾಹಿತಿ ರೂಪಿಸಿದೆ. ತಿಂಗಳಲ್ಲಿ 50 ಲಕ್ಷ ಬಳಕೆದಾರರು ಸೇರ್ಪಡೆ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+