ಕೆನರಾ ಬ್ಯಾಂಕ್ ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಮತ್ತು ಅರ್ಧ ವರ್ಷದ ತನ್ನ ಹಣಕಾಸು ವರದಿಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 2023 ರ ನಿವ್ವಳ ಲಾಭವು 3,606 ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ವರ್ಷ ಅಂದರೆ ಸೆಪ್ಟೆಂಬರ್ 2022 ರ ನಿವ್ವಳ ಲಾಭವು 2,525 ಕೋಟಿ ರೂಪಾಯಿ ಆಗಿದೆ.
ಕಾರ್ಯಾಚರಣಾ ಲಾಭವು 7,616 ಕೋಟಿ ರೂಪಾಯಿಗಳಷ್ಟಿದ್ದು, ಇದು ಹಣಕಾಆಸು ವರ್ಷ 2024ರ ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 10.30 ರಷ್ಟು ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ಆದಾಯವು ಶೇಕಡ 19.76 ರಷ್ಟು ಏರಿಕೆಯಾಗಿ 8,903 ಕೋಟಿ ರೂಪಾಯಿಗೆ ತಲುಪಿದೆ. ಈ ನಡುವೆ ನಿವ್ವಳ ಬಡ್ಡಿಯ ಮಾರ್ಜಿನ್ 19 ಮೂಲಾಂಕ ಏರಿಕೆಯಾಗಿ, ಶೇಕಡ 3.02ಕ್ಕೆ ಸುಧಾರಿಸಿದೆ.

ತ್ರೈಮಾಸಿಕದಲ್ಲಿ ವೆಚ್ಚ ಮತ್ತು ಆದಾಯದ ಅನುಪಾತವು 53 ಬೇಸಿಸ್ ಪಾಯಿಂಟ್‌ಗಳಷ್ಟು ಕುಸಿದು ಶೇಕಡ 43.68 ಕ್ಕೆ ಇಳಿದಿದೆ ಎಂದು ಬ್ಯಾಂಕ್ ವರದಿ ಮಾಡಿದೆ. ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಎನ್‌ಪಿಎ ಅನುಪಾತವು 78 ಬೇಸಿಸ್ ಪಾಯಿಂಟ್‌ಗಳಷ್ಟು ಕೆಳಗೆ ಇಳಿದು ಶೇಕಡ 1.41ಕ್ಕೆ ತಲುಪಿದ್ದರೆ, ಅದರ ಒಟ್ಟು ಎನ್‌ಪಿಎ ಅನುಪಾತವು 161 ಬೇಸಿಸ್ ಪಾಯಿಂಟ್‌ಗಳಷ್ಟು ಇಳಿದು, ಶೇಕಡ 4.76 ಕ್ಕೆ ತಲುಪಿದೆ ಎಂದು ಕೆನರಾ ಬ್ಯಾಂಕ್ ವರದಿ ಮಾಡಿದೆ.
ಬ್ಯಾಂಕಿನ ಪ್ರಾವಿಷನ್ ಕವರೇಜ್ ಅನುಪಾತವು (ಪಿಸಿಆರ್) ಸೆಪ್ಟೆಂಬರ್ 2023 ರ ವೇಳೆಗೆ 337 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡ 88.73 ಕ್ಕೆ ಏರಿದೆ. ಬ್ಯಾಂಕ್ ಪ್ರಕಾರ, ಈಕ್ವಿಟಿ ಮೇಲಿನ ಆದಾಯವು Q2FY23 ರಲ್ಲಿದ್ದ ಶೇಕಡ 17.37 ರಿಂದ Q2FY24 ಕ್ಕೆ ಶೇಕಡ 22.51 ಕ್ಕೆ ಸುಧಾರಿಸಿದೆ. ಅದರ ಸ್ವತ್ತುಗಳ ಮೇಲಿನ ಆದಾಯವು ಶೇಕಡ 1 ರಷ್ಟು ಏರಿಕೆಯಾಗಿದೆ.
ಬ್ಯಾಂಕ್ ಪ್ರಕಾರ, ದೇಶೀಯ ಡೆಪಾಸಿಟ್‌ಗಳು ಸೆಪ್ಟೆಂಬರ್ 2023 ರ ವೇಳೆಗೆ ವರ್ಷದಿಂದ ವರ್ಷಕ್ಕೆ ಶೇಕಡ 8.22 ರಷ್ಟು ಜಿಗಿದು 11,43,394 ಕೋಟಿ ರೂಪಾಯಿಗೆ ತಲುಪಿದೆ. ಸೆಪ್ಟೆಂಬರ್ 2023 ರ ಹೊತ್ತಿಗೆ, ಅದರ ಜಾಗತಿಕ ವ್ಯಾಪಾರವು 21,56,181 ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿದೆ ಅಥವಾ ಶೇಕಡ 10.12 ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗಿದೆ.
ಬ್ಯಾಂಕ್ ಪ್ರಕಾರ, ಪ್ರಾವಿಷನ್ ಕವರೇಜ್ ರೆಷಿಯೋ (ಪಿಸಿಆರ್) ಸೆಪ್ಟೆಂಬರ್ 2022 ರಲ್ಲಿ ಶೇಕಡ 85.36 ರಿಂದ ಸೆಪ್ಟೆಂಬರ್ 2023 ರಲ್ಲಿ ಶೇಕಡ 88.73ಕ್ಕೆ ತಲುಪಿದೆ. ಸೆಪ್ಟೆಂಬರ್ 30, 2023 ರಂತೆ, ಬ್ಯಾಂಕ್ 9518 ಬ್ರ್ಯಾಂಚ್‌ಗಳನ್ನು ಹೊಂದಿದೆ. ಇದರಲ್ಲಿ 10553 ಎಟಿಎಂಗಳು, 3059 ಗ್ರಾಮೀಣ, 2717 ಅರೆ-ನಗರ, 1895 ನಗರ, ಮತ್ತು 1847 ಮೆಟ್ರೋ ಶಾಖೆಗಳು ಸೇರಿದೆ. ಹೆಚ್ಚುವರಿಯಾಗಿ, ಬ್ಯಾಂಕ್ ನಾಲ್ಕು ಸಾಗರೋತ್ತರ ಶಾಖೆಗಳನ್ನು ಹೊಂದಿದೆ. ಗಿಫ್ಟ್ ಸಿಟಿ (ಗಾಂಧಿನಗರ), ದುಬೈ, ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿ ತಲಾ ಒಂದು ಶಾಖೆಯಿದೆ.


Click it and Unblock the Notifications