ಕರ್ನಾಟಕ ಮೂಲದ ಪ್ರಮುಖ ಹಣಕಾಸು ಸಂಸ್ಥೆ ಕೆನರಾ ಬ್ಯಾಂಕ್ ತನ್ನ ತ್ರೈಮಾಸಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡಿದೆ. ಆದಾಯ ಗಳಿಕೆಯಲ್ಲಿ ಸರಿ ಸುಮಾರು ಶೇ 65ರಷ್ಟು ಹೆಚ್ಚಳ ಗಳಿಸಿದರೂ ಸೋಮವಾರದಂದು ಬಿಎಸ್ಇಯಲ್ಲಿ ಶೇ 17.75ರಷ್ಟು ಕುಸಿತ ಕಂಡಿದೆ. ಇದಕ್ಕೂ ಮುನ್ನ ಶೇ 4.72ರಷ್ಟು ಕುಸಿತದೊಂದಿಗೆ 214.5 ರು ನಂತೆ ವಹಿವಾಟು ಆರಂಭಗೊಂಡು, ನಿರಂತರ ಇಳಿಮುಖ ಕಂಡಿತು. ದಿನದ ಅಂತ್ಯಕ್ಕೆ 200.55 ರು ನಂತೆ ಶೇ 8.75ರಷ್ಟು ಇಳಿಕೆ ಕಂಡು 18.80 ರು ಕಳೆದುಕೊಂಡಿದೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೆನರಾ ಬ್ಯಾಂಕ್ ಮಾರ್ಚ್ 31ಕ್ಕೆ ಅಂತ್ಯ ಕಂಡ ತ್ರೈಮಾಸಿಕದಂತೆ 1,666.22 ಕೋಟಿ ರು ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,010.87 ಕೋಟಿ ರು ಮಾತ್ರ ಗಳಿಸಿತ್ತು.
2021-22ರ ಜನವರಿ -ಮಾರ್ಚ್ ಅವಧಿಯಲ್ಲಿ ಒಟ್ಟಾರೆ ಆದಾಯ ಏರಿಕೆಯಾಗಿ 22,323.11 ಕೋಟಿ ರು ಗಳಿಸಿದೆ. 2020-21ರ ಅವಧಿಯಲ್ಲಿ 21,040.63 ಕೋಟಿ ರು ಗಳಿಸಿತ್ತು ಎಂದು ಷೇರುಪೇಟೆಗೆ ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಅನುತ್ಪಾದಕ ಆಸ್ತಿ(NPAs) ಅಥವಾ ಕೆಟ್ಟ ಸಾಲಗಳ ಪ್ರಮಾಣ ಶೇ 7.51ರಷ್ಟು ಕುಸಿತ ಕಂಡಿದೆ. 2021ರ ಅವಧಿಯಲ್ಲಿ ಶೇ 8.93ರಷ್ಟು ಪ್ರಮಾಣವಿತ್ತು.

ಒಟ್ಟಾರೆ, ಎನ್ ಪಿಎ 60,287.84 ಕೋಟಿ ರು ನಿಂದ 55,651.58 ಕೋಟಿ ರುಗೆ ಇಳಿದಿದೆ. ತ್ರೈಮಾಸಿಕದಲ್ಲಿ 18,668.02 ಕೋಟಿ ರು ಆಗಿದ್ದು, ಈ ಮುಂಚೆ 24,442.07 ಕೋಟಿ ರು ನಷ್ಟಿತ್ತು. ಬ್ಯಾಂಕ್ ತನ್ನ ಷೇರುದಾರರಿಗೆ 6.50 ರು ಪ್ರತಿ ಷೇರಿನಂತೆ ಡಿವಿಡೆಂಡ್ ಘೋಷಿಸಿದೆ.
ಷೇರು ಖರೀದಿಸಿ: ಕೆನರಾಬ್ಯಾಂಕಿನ ಷೇರು ಬೆಲೆ 205.25 ರು ನಂತೆ ಇದ್ದು, 282 ರು ಟಾರ್ಗೆಟ್ ದರದಂತೆ ಬ್ಯಾಂಕಿನ ಷೇರು ಖರೀದಿಸಬಹುದು ಎಂದು ಎಮ್ಕೆ ಗ್ಲೋಬಲ್ ಸಲಹೆ ನೀಡಿದೆ. 1906ರಲ್ಲಿ ಸ್ಥಾಪನೆಯಾದ ಕೆನರಾಬ್ಯಾಂಕ್ ಮಾರುಕಟ್ಟೆ ಮೌಲ್ಯ 37235.02 ಕೋಟಿ ರು ನಷ್ಟಿದೆ. 31-ಡಿಸೆಂಬರ್-2021 ರಂತೆ ಕಂಪನಿಯಲ್ಲಿ ಪ್ರವರ್ತಕರು 62.93 ಶೇಕಡಾ ಪಾಲನ್ನು ಹೊಂದಿದ್ದಾರೆ, ಆದರೆ ಎಫ್‌ಐಐಗಳು ಶೇಕಡಾ 7.62, ಡಿಐಐಗಳು ಶೇಕಡಾ 13.83 ರಷ್ಟು ಒಡೆತನ ಹೊಂದಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications