ಆದಾಯ ತೆರಿಗೆ ಇಲಾಖೆಯ ಅಡಿಯಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ವ್ಯಾಪಾರ ಅಥವಾ ಇತರ ವೃತ್ತಿಯಲ್ಲಿ ಪಡೆದ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಹೊಸ TDS ನಿಬಂಧನೆಯ ಅನ್ವಯಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಪರ್ಕ್ವಿಸಿಟ್‌ಗಳು ನಗದು ರೂಪದಲ್ಲಿ ಅಥವಾ ಭಾಗಶಃ ಈ ಎರಡೂ ರೂಪಗಳಲ್ಲಿರಬಹುದು ಎಂದು ಐಟಿ ಇಲಾಖೆ ಹೇಳಿದೆ. ವಿವರವಾದ ಮಾರ್ಗಸೂಚಿಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಸಿಬಿಡಿಟಿ ಹೇಳಿದೆ. CBDT ನಿಬಂಧನೆಯ ಅಡಿಯಲ್ಲಿ, ವೈದ್ಯರು ಸ್ವೀಕರಿಸುವ ಉಚಿತ ವೈದ್ಯಕೀಯ ಮಾದರಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಉಳಿಸಿಕೊಂಡಿರುವ ಉಡುಗೊರೆಗಳಂತಹ ಪ್ರಯೋಜನಗಳ ಮೇಲೆ TDS ಇರಲಿದೆ.
ತಮ್ಮ ಕೊನೆಯ ಬಜೆಟ್ ಮಂಡನೆ ಸಂದರ್ಭದಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಆದಾಯ ಕಡಿಮೆಯಾಗುವುದನ್ನು ಪರಿಶೀಲಿಸಲು ಪ್ರಯೋಜನಗಳು ಅಥವಾ ಪರ್ಕ್ವಿಸಿಟ್‌ಗಳ ಮೇಲೆ ಟಿಡಿಎಸ್‌ನಲ್ಲಿ ನಿಬಂಧನೆಗಳನ್ನು ಘೋಷಿಸಿದ್ದರು. ಆದರೂ ಕೆಲವು ಅನುಮಾನಗಳಿದ್ದವು.

"ಈ ಹೊಸ ಮಾರ್ಗಸೂಚಿ ಜನರಿಗೆ ಯಾವುದೇ ಪ್ರಯೋಜನ ಅಥವಾ ಪರ್ಕ್ವಿಸಿಟ್ ಅನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುತ್ತದೆ. ಅಂತಹ ಪ್ರಯೋಜನ ಅಥವಾ ಪರ್ಕ್ವಿಸಿಟ್ ಅನ್ನು ಒದಗಿಸುವ ಮೊದಲು, ಪ್ರಯೋಜನ ಅಥವಾ ಪರ್ಕ್ವೈಸಿಟ್ನ ಮೌಲ್ಯದ 10 ಪ್ರತಿಶತ ಅಥವಾ ಒಟ್ಟು ಮೌಲ್ಯದ ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಬೇಕು," ಎಂದು ಸಿಬಿಡಿಟಿ ತನ್ನ ಸೂಚನೆಯಲ್ಲಿ ತಿಳಿಸಿದೆ.
ಅಧಿಸೂಚನೆಯಲ್ಲಿ, ಹಣಕಾಸು ಕಾಯಿದೆ 2022 ರ ಸೆಕ್ಷನ್ 28 (iv) ರ ಅಡಿಯಲ್ಲಿ ತೆರಿಗೆದಾರರು ತಾವು ಒದಗಿಸುವ ಪ್ರಯೋಜನ ಅಥವಾ ಪರ್ಕ್ವಿಸಿಟ್ ಮೊತ್ತವು ತೆರಿಗೆಗೆ ಅನ್ವಯವಾಗಲಿದೆಯೇ ಎಂದು ಪರಿಶೀಲಿಸುವ ಅಗತ್ಯವಿಲ್ಲ ಎಂದು CBDT ಹೇಳಿದೆ. "ಮೊತ್ತವು ಸ್ವೀಕರಿಸುವವರ ಕೈಯಲ್ಲಿ ತೆರಿಗೆಗೆ ಒಳಪಟ್ಟಿದೆಯೇ ಅಥವಾ ಯಾವ ಸೆಕ್ಷನ್ ಅಡಿಯಲ್ಲಿ ತೆರಿಗೆಗೆ ಒಳಪಡುತ್ತದೆ ಎಂಬುದನ್ನು ಪರಿಶೀಲಿಸುವ ಅಗತ್ಯ ಕೂಡಾ ಇಲ್ಲ," ಎಂದು ನೋಟಿಸ್ ಹೇಳಿದೆ.
ವೈದ್ಯರಿಗೆ ನೀಡಲಾಗುವ ಪ್ರಯೋಜನ
ಆಸ್ಪತ್ರೆಯ ಉದ್ಯೋಗಿಯಾಗಿರುವ ವೈದ್ಯರಿಗೆ ಕಂಪನಿಯಿಂದ ಉಚಿತ ಮಾದರಿಗಳನ್ನು ವಿತರಿಸಲು ಸೆಕ್ಷನ್ 194 ಆರ್ ಅನ್ವಯಿಸುತ್ತದೆ ಎಂದು ಸಿಬಿಡಿಟಿ ಅಧಿಸೂಚನೆ ಹೇಳಿದೆ. ಆಸ್ಪತ್ರೆಯು ತರುವಾಯ ಈ ಪ್ರಯೋಜನ/ಅನುಕೂಲತೆಯನ್ನು ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ನೀಡಲಾದ ಪರ್ಕ್ವಿಸಿಟ್ ಎಂದು ಪರಿಗಣಿಸಬಹುದು. ಹಾಗೆಯೇ ಕಾಯಿದೆಯ ಸೆಕ್ಷನ್ 192 ರ ಅಡಿಯಲ್ಲಿ ತೆರಿಗೆಯನ್ನು ಕಡಿತಗೊಳಿಸಬಹುದು. ಉದ್ಯೋಗಿ ಅಥವಾ ವೈದ್ಯರ ಸಂಬಳದಿಂದಲೇ ಈ ಪರ್ಕ್ವಿಸಿಟ್ ತೆರಿಗೆ ಕಡಿತವಾಗಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications