ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ಬಳಸಿಕೊಂಡು ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆಯಿಂದ ಹಣ ಎಗರಿಸಿದ ತಂಡವನ್ನು ಕೇಂದ್ರೀಯ ತನಿಖಾ ದಳವು ಬಂಧನ ಮಾಡಿದೆ. ಈ ತಂಡವು ಜನರ ಆಧಾರ್ ಕಾರ್ಡ್ ಮಾಹಿತಿಯನ್ನು ಬಳಕೆ ಮಾಡಿಕೊಂಡು, ಪಿಎಫ್ ಖಾತೆಯಿಂದ ಹಣವನ್ನು ತೆಗೆಯುವ ವಂಚನೆಯನ್ನು ಮಾಡುತ್ತಿತ್ತು.
ಈ ಘಟನೆಯಿಂದಾಗಿ ಪಿಎಫ್ ಖಾತೆಗಳ ಭದ್ರತೆಯ ಬಗ್ಗೆ ಕಳವಳವು ವ್ಯಕ್ತವಾಗಿತ್ತು. ಇಂತಹ ಮೋಸದ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಅಧಿಕ ಜಾಗರೂಕರಾಗಿರುವಂತೆಯೂ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ತಿಳಿಸಿದೆ. ಈಗ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ರೀತಿ ಹಣ ಎಗರಿಸುವ ತಂಡವನ್ನು ಬಂಧನ ಮಾಡಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ.

ಲಿಂಕ್ ಮಾಡದ ಇಪಿಎಫ್-ಆಧಾರ್ ಖಾತೆಗಳನ್ನು ದುರ್ಬಳಕೆ ಮಾಡಿದ ಗ್ಯಾಂಗ್
ಸಿಬಿಐ ಅಧಿಕಾರಿಗಳ ಪ್ರಕಾರ, ಬಂಧಿತ ವ್ಯಕ್ತಿ, ಪ್ರಿಯಾಂಶು ಕುಮಾರ್ ತನ್ನ ಸಹಚರರೊಂದಿಗೆ ತಮ್ಮ ಇಪಿಎಫ್ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಈ ವಂಚನೆಯನ್ನು ನಡೆಸುತ್ತಾ ಬಂದಿದೆ. ತಮ್ಮ ಸಂಸ್ಥೆಗಳಲ್ಲಿ ಈ ವಿಶಿಷ್ಟ ಗುರುತಿನ ದಾಖಲೆಯ ಸಂಖ್ಯೆಯನ್ನು ನೋಂದಾಯಿಸುವ ಮೂಲಕ, ಗ್ಯಾಂಗ್ ಆಧಾರ್ ವಿವರಗಳನ್ನು ಮ್ಯಾನಿಪುಲೇಟ್ ಮಾಡುತ್ತಿದೆ.
ನಿಜವಾದ ಫಲಾನುಭವಿಗಳು ಕ್ಲೈಮ್ ಮಾಡುವಂತೆಯೇ ಬೇರೆಯವರ ಪಿಎಫ್ ಖಾತೆಗಳಿಂದ ಹಣವನ್ನು ಮೋಸದಿಂದ ಕ್ಲೈಮ್ ಮಾಡಿದೆ. ಈ ಗ್ಯಾಂಗ್ 11 ಪಿಎಫ್ ಖಾತೆಗಳಿಂದ 39 ನಕಲಿ ಕ್ಲೈಮ್‌ಗಳ ಮೂಲಕ ಸುಮಾರು 1.83 ಕೋಟಿ ರೂಪಾಯಿಯನ್ನು ಎಗರಿಸಿದೆ. ಗ್ಯಾಂಗ್ ವಿವಿಧ ನಗರಗಳಲ್ಲಿ ಸಂಸ್ಥೆಗಳನ್ನು ಸ್ಥಾಪನೆ ಮಾಡಿದೆ. ಅಲ್ಲಿ ಬೇರೆಯವರ ಯುಎಎನ್ (ಯುನಿವರ್ಸಲ್ ಖಾತೆ ಸಂಖ್ಯೆ) ಅನ್ನು ನೋಂದಾಯಿಸಿದೆ.
ಈ ಫಲಾನುಭವಿಗಳು ತಮ್ಮ ಸಂಸ್ಥೆಯ ಉದ್ಯೋಗಿಗಳು ಎಂಬಂತೆ ಗ್ಯಾಂಂಗ್ ಬಿಂಬಿಸಿಕೊಂಡಿದೆ. ಆಧಾರ್ ಮಾಹಿತಿಯನ್ನು ಮ್ಯಾನಿಪುಲೇಟ್ ಮಾಡುವ ಮೂಲಕ ಗ್ಯಾಂಗ್ ಯಶಸ್ವಿಯಾಗಿ ಇತರರ ಪಿಎಫ್ ಖಾತೆಗಳಿಂದ ಹಣವನ್ನು ಹಿಂತೆಗೆದುಕೊಂಡಿದೆ. ತನಿಖೆಯ ಸಮಯದಲ್ಲಿ, ಸಿಬಿಐ ಬಿಹಾರ, ಜಾರ್ಖಂಡ್ ಮತ್ತು ದೆಹಲಿಯ ಎಂಟು ಪ್ರದೇಶಗಳಿಂದ ದಾಖಲೆಗಳು, ಮೊಬೈಲ್ ಫೋನ್‌ಗಳು, ಎಟಿಎಂ ಕಾರ್ಡ್‌ಗಳು, ಚೆಕ್‌ಬುಕ್‌ಗಳು ಮತ್ತು ಪಾಸ್‌ಬುಕ್‌ಗಳಂತಹ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ.
ಪ್ಯಾನ್- ಆಧಾರ್ ದುರ್ಬಳಕೆ ತಡೆಯುವುದು ಹೇಗೆ?
1. ನೀವು ಎಲ್ಲ ಸೈಟ್‌ಗಳಲ್ಲಿ ಅಥವಾ ಫಾರ್ಮ್‌ಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸದಿರಿ. ಎಲ್ಲಿ ನಿಮ್ಮ ಗುರುತಿನ ಪುರಾವೆ ಮುಖ್ಯವಾಗಿರುತ್ತದೆಯೋ ಅಲ್ಲಿ ಆಧಾರ್, ಪ್ಯಾನ್ ಬದಲಾಗಿ ಬೇರೆ ಕಾರ್ಡ್‌ಗಳನ್ನು ಬಳಕೆ ಮಾಡಿ. ಅಂದರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮೊದಲಾದವುಗಳನ್ನು ನಿಮ್ಮ ಗುರುತಿನ ಪುರಾವೆಯಾಗಿ ಬಳಕೆ ಮಾಡಿಕೊಳ್ಳಿ.
2. ಅಧಿಕೃತವಾದ ಅಧಿಕಾರಿಗಳಿಗೆ ಅಥವಾ ಅಧಿಕೃತವಾದ ಸಂಸ್ಥೆಗಳಿಗೆ ಮಾತ್ರ ನೀವು ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡಿ. ಹಾಗೆಯೇ ನೀವು ಈ ದಾಖಲೆಗಳನ್ನು ನೀಡುವ ಸಂದರ್ಭದಲ್ಲಿ ದಾಖಲೆ ನೀಡಿದ ದಿನಾಂಕವನ್ನು ಉಲ್ಲೇಖಿಸಿ ಸಹಿ ಮಾಡಿ .
3. ಸಾಮಾಜಿಕ ಜಾಲತಾಣದಲ್ಲಿ, ಆನ್‌ಲೈನ್ ಪೋರ್ಟಲ್‌ಗಳಲ್ಲಿ ನಿಮ್ಮ ಪೂರ್ಣ ಹೆಸರನ್ನು ಹಾಕುವುದನ್ನು ತಪ್ಪಿಸಿ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರನ್ನು ಹಾಕದಿರುವುದು ಉತ್ತಮ.
4. ಸರ್ಕಾರವು ಯಾವುದೇ ಒಂದು ದಾಖಲೆಗೆ ಅಥವಾ ಪೋರ್ಟಲ್‌ಗೆ ಆಧಾರ್ - ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿಲ್ಲವಾದ್ದಲ್ಲಿ, ನೀವಾಗಿಯೇ ಎಲ್ಲಿಯೂ ಲಿಂಕ್ ಮಾಡಿಕೊಳ್ಳಬೇಡಿ ಯಾವುದೇ ಪೋರ್ಟಲ್‌ನಲ್ಲಿ ಆಧಾರ್ - ಪ್ಯಾನ್ ಕಾರ್ಡ್ ಲಿಂಕ್ ಆಗಿದ್ದರೆ, ಕೂಡಲೇ ಡಿ-ಲಿಂಕ್ ಮಾಡಿಕೊಳ್ಳಿ.
5. ನಿಮ್ಮ ಹೆಸರಲ್ಲಿ ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗಿದೆಯೇ ಅಥವಾ ನಿಮ್ಮ ಹೆಸರಲ್ಲಿ ಯಾರಾದರೂ ಸಾಲವನ್ನು ಪಡೆದಿದ್ದಾರೆಯೇ ಎಂದು ತಿಳಿಯಲು ಕ್ರೆಡಿಟ್ ರಿಪೋರ್ಟ್ ಅನ್ನು ಆಗಾಗೆ ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ.
6. ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ - ಪ್ಯಾನ್ ಕಾರ್ಡ್ ಫೋಟೋವನ್ನು ಇಟ್ಟುಕೊಳ್ಳುವುದು ಸುರಕ್ಷಿತವಲ್ಲ. ನಿಮ್ಮ ಫೋನ್ ಕಳೆದುಹೋದಲ್ಲಿ ನಿಮ್ಮ ಫೋನ್‌ನಲ್ಲಿರುವ ನಿಮ್ಮ ಪ್ರಮುಖ ದಾಖಲೆಗಳನ್ನು ಸುಲಭವಾಗಿ ದುರ್ಬಳಕೆ ಮಾಡಲು ಸಾಧ್ಯವಾಗಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications