ನವದೆಹಲಿ, ಅ. 25: ಭಾರತದಲ್ಲಿ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ, ಅಂದರೆ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಕ್ವಾರ್ಟರ್ ಅವಧಿಯಲ್ಲಿ 48 ಲಕ್ಷದಷ್ಟು ಹೊಸ ಡೀಮ್ಯಾಟ್ ಖಾತೆಗಳು ತೆರೆಯಲಾಗಿವೆ ಎಂದು ಹೇಳಲಾಗುತ್ತಿದೆ. ಇದು ಷೇರುಪೇಟೆ ವ್ಯವಹಾರದ ಬಗ್ಗೆ ಆಸಕ್ತರಾದವರು ಮತ್ತು ಷೇರುಗಳ ಮೇಲೆ ಹೂಡಿಕೆ ಮಾಡಬಯಸುವ ಒಂದು ದೊಡ್ಡ ಗುಂಪೇ ಮಾರುಕಟ್ಟೆಗೆ ಧುಮುಕಿದೆ.
ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಏಕೈಕ ಡೆಪಾಸಿಟರಿ ಸಂಸ್ಥೆ ಎನಿಸಿರುವ ಸಿಡಿಸಿಎಲ್ ನೀಡಿರುವ ಮಾಹಿತಿ ಪ್ರಕಾರ ಜುಲೈನಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ 48 ಲಕ್ಷ ಡೀಮ್ಯಾಟ್ ಅಕೌಂಟ್‌ಗಳನ್ನು ತೆರೆಯಲಾಗಿದೆ. ಸಿಡಿಸಿಎಲ್ ಅಂತೂ 7 ಕೋಟಿ ಡಿಮ್ಯಾಟ್ ಖಾತೆಗಳನ್ನು ನೊಂದಣಿ ಮಾಡಿದ ಮೊದಲ ಡೆಪಾಸಿಟರಿ ಎನಿಸಿದೆ.
ಸಿಡಿಎಸ್‌ಎಲ್‌ನ ಒಟ್ಟು ಆದಾಯ ವಾರ್ಷಿಕವಾಗಿ ಶೇ. 7ರಷ್ಟು ಹೆಚ್ಚಾಗಿ 316 ಕೋಟಿ ರೂ ಆಗಿದೆ. ಆದಾಯ ಹೆಚ್ಚಾದರೂ ನಿವ್ವಳ ಆದಾಯ ಶೇ. 8ರಷ್ಟು ಇಳಿಕೆಯಾಗಿ 138ಕ್ಕೆ ಬಂದಿದೆ. ಇದು 2022-23ರ ಹಣಕಾಸು ವರ್ಷದ ಮೊದಲಾರ್ಧದ ಅವಧಿಯ ಅಂಕಿ ಅಂಶ.

ಏನಿದು ಡೀಮ್ಯಾಟ್ ಖಾತೆ?
ಡೀಮ್ಯಾಟ್ ಎಂದರೆ ಡೀಮೆಟಿರಿಯಲೈಸ್ಡ್ ಪದದ ಕಿರುನಾಮ. ಕಾಗದಪತ್ರಗಳಿಲ್ಲದ ಸಂಪೂರ್ಣ ಎಲೆಕ್ಟ್ರಾನಿಕ್ ಆಗಿ ಕಾರ್ಯನಿರ್ವಹಣೆ ಮಾಡುತ್ತದೆ ಡೀಮ್ಯಾಟ್ ಖಾತೆ. ಮುಂಚೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಷೇರ್ ಸರ್ಟಿಫಿಕೇಟ್, ಅಥವಾ ಷೇರುಪತ್ರ ಸಿಗುತ್ತಿತ್ತು. ಈಗ ಎಲ್ಲವೂ ಡಿಜಿಟಲ್ ಆಗಿ ಸೇವ್ ಆಗಿರುತ್ತದೆ. ಷೇರುಪೇಟೆಯಲ್ಲಿ ವ್ಯಾಪಾರ ಮಾಡಬೇಕೆಂದರೆ ಡೀಮ್ಯಾಟ್ ಖಾತೆ ಇರುವುದು ಕಡ್ಡಾಯ.
ಹೇಗೆ ತೆರೆಯುವುದು?
ಡೀಮ್ಯಾಟ್ ಖಾತೆ ತೆರೆಯಲು ಅರ್ಜಿ ಸಿಗುತ್ತವೆ. ಈಗಾಗಲೇ ಇರುವ ಬ್ಯಾಂಕ್ ಖಾತೆಯನ್ನು ನೀವು ಡೀಮ್ಯಾಟ್ ಅಕೌಂಟ್ ಆಗಿ ಪರಿವರ್ತಿಸಬಹುದು. ಹಾಗೆ ಮಾಡುವುದಕ್ಕೂ ಅರ್ಜಿ ತುಂಬಿಸಿ ಸಲ್ಲಿಸಬೇಕಾಗುತ್ತದೆ. ಡೀಮ್ಯಾಟ್ ಖಾತೆ ತೆರೆದರೆ ಕೇವಲ ಷೇರು ವಹಿವಾಟು ಮಾತ್ರವಲ್ಲ, ಬಾಂಡ್, ಮ್ಯುಚುವಲ್ ಫಂಡ್ ಇತ್ಯಾದಿಯನ್ನೂ ಖರೀದಿಸುವುದೋ, ಮಾರುವುದೋ ಮಾಡಬಹುದು.

ಸಿಡಿಎಸ್‌ಎಲ್ ಮತ್ತು ಎನ್‌ಎಸ್‌ಡಿಲ್ ಸಂಸ್ಥೆಗಳು ಈ ಡೀಮ್ಯಾಟ್ ಖಾತೆ ಸೇವೆಗಳನ್ನು ಒದಗಿಸುತ್ತವೆ. ಬ್ಯಾಂಕ್ ಇತ್ಯಾದಿ ಹಣಕಾಸು ಸಂಸ್ಥೆಗಳು ಈ ಡೆಪಾಸಿಟರಿ ಪಾರ್ಟಿಸಿಪೆಂಟ್‌ಗಳಾಗಿ ಡೀಮ್ಯಾಟ್ ಅಕೌಂಟ್‌ಗಳಿಗೆ ಸೇವೆ ತಲುಪಿಸುತ್ತವೆ.


Click it and Unblock the Notifications