ಯುಗಾದಿಗೆ ಮೋದಿ ಗಿಫ್ಟ್‌! ವೇತನ ಶೇ.24 ರಷ್ಟು ಹೆಚ್ಚಳ.. ಭತ್ಯೆ, ಪಿಂಚಣಿಯೂ ಏರಿಕೆ.. ಪರಿಷ್ಕೃತ ವೇತನ ಎಷ್ಟು?

ಯುಗಾದಿಗೆ ಬೊಂಬಾಟ್ ಗಿಫ್ಟ್‌ ಕೊಟ್ಟ ಮೋದಿ.. ಇವರಿಗೆಲ್ಲ ಡಬಲ್ ಸಂಭ್ರಮ..! ಹೌದು, ಹಾಲಿ ಹಾಗೂ ಮಾಜಿ ಸಂಸದರಿಗೆ ಯುಗಾದಿಗೂ ಮುನ್ನವೇ ಗುಡ್‌ನ್ಯೂಸ್‌ ಸಿಕ್ಕಿದೆ. ಕೇಂದ್ರ ಸರ್ಕಾರ ಸಂಸತ್ ಸದಸ್ಯರ ವೇತನವನ್ನು ಶೇ.24 ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ದೈನಂದಿನ ಭತ್ಯೆಗಳು ಮತ್ತು ಪಿಂಚಣಿ ಪ್ರಯೋಜನಗಳನ್ನು ಸಹ ಹೆಚ್ಚಿಸಲಾಗಿದೆ.ಈ ಪರಿಷ್ಕೃತ ವೇತನ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಬನ್ನಿ, ಸಂಸದರ ಪರಿಷ್ಕೃತ ವೇತನ ಎಷ್ಟು? ಎಂಬುವುದನ್ನು ತಿಳಿಯೋಣ.

ಪರಿಷ್ಕೃತ ವೇತನ ಹೆಚ್ಚಳದ ಬಗ್ಗೆ ಎರಡು ವರ್ಷಗಳ ಹಿಂದೆಯೇ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ ಇದೀಗ ಜಾರಿಗೆ ಬರಲಿದೆ.ವೇತನದ ಹೆಚ್ಚಳದ ಜೊತೆಗೆ ದಿನಭತ್ಯೆ,ಪಿಂಚಣಿ ಮತ್ತು ಇತರೆ ಮೊತ್ತವನ್ನು ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಲಾಗಿದೆ.

ಯುಗಾದಿಗೆ ಮೋದಿ ಗಿಫ್ಟ್‌! ವೇತನ, ಪಿಂಚಣಿಯಲ್ಲಿ ಶೇ.24 ರಷ್ಟು ಹೆಚ್ಚಳ

ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವಾಲಯ ಸೋಮವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಸಂಸದರ ಮಾಸಿಕ ವೇತನವನ್ನು 1 ಲಕ್ಷ ರೂ.ಗಳಿಂದ 1.24 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.ಮತ್ತು ಅವರ ದೈನಂದಿನ ಭತ್ಯೆಗಳು ಮತ್ತು ಪಿಂಚಣಿ ಪ್ರಯೋಜನಗಳನ್ನು ಸಹ ಹೆಚ್ಚಿಸಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಅಧಿಸೂಚನೆಯ ಪ್ರಕಾರ ಹಾಲಿ ಸಂಸದರ ದಿನಭತ್ಯೆಯನ್ನು 2,000 ದಿಂದ 2,500ಕ್ಕೆ ಹೆಚ್ಚಳವನ್ನು ಮಾಡಲಾಗಿದೆ. ಈ ಪರಿಷ್ಕೃತ ವೇತನ ಹೆಚ್ಚಳದ ಬಗ್ಗೆ ಎರಡು ವರ್ಷಗಳ ಹಿಂದೆಯೇ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ ಇದೀಗ ಜಾರಿಗೆ ಬರಲಿದೆ.

ವೇತನದ ಹೆಚ್ಚಳದ ಜೊತೆಗೆ ದಿನಭತ್ಯೆ, ಪಿಂಚಣಿ ಹಾಗೂ ಹೆಚ್ಚುವರಿ ಪಿಂಚಣಿ ಮೊತ್ತವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವಾಲಯ ಸದಸ್ಯರು ಈಗ ತಿಂಗಳಿಗೆ 31,000 ಪಿಂಚಣಿಯನ್ನು ಪಡೆದುಕೊಳ್ಳುತ್ತಾರೆ.

ಇದರ ಜೊತೆಗೆ ಐದು ವರ್ಷಗಳನ್ನು ಮೀರಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಹೆಚ್ಚುವರಿ ಪಿಂಚಣಿಯನ್ನು ಕೂಡ ತಿಂಗಳಿಗೆ 2,000 ದಿಂದ 2,500ಕ್ಕೆ ಹೆಚ್ಚಳವನ್ನು ಮಾಡಲಾಗಿದೆ.ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿ ಕಾಯ್ದೆಯಡಿ ಈ ಇದನ್ನು ಪರಿಷ್ಕರಣೆ ಮಾಡಲಾಗಿದೆ.

ಸಂಸದರ ವೇತನದಲ್ಲಿ 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಣದುಬ್ಬರ ಸೂಚ್ಯಂಕವನ್ನು ಆಧರಿಸಿ ಪರಿಷ್ಕರಣೆ ಆಗಿದ್ದು, ಇದು 2018ರ ನಂತರವೇ ಮೊದಲ ಬಾರಿಗೆ ವೇತನ ಮತ್ತು ಭತ್ಯೆಗಳಲ್ಲಿ ಬದಲಾವಣೆಗಳನ್ನು ತರಲಿದೆ.

ಸಂಸದರಿಗೆ ಯಾವೆಲ್ಲ ಭತ್ಯೆ ಲಭ್ಯ..?

2018ರಲ್ಲಿ ಕೊನೆಯ ಬಾರಿ ಸಂಸದರ ವೇತನ ಮತ್ತು ಇನ್ನಿತರ ಭತ್ಯೆಗಳನ್ನು ಪರಿಷ್ಕರಿಸಲಾಗಿತ್ತು.ಆಗ ಸಂಸದರ ಮೂಲ ವೇತನವನ್ನು ತಿಂಗಳಿಗೆ 1 ಲಕ್ಷ ಎಂದು ನಿಗದಿಪಡಿಸಲಾಗಿತ್ತು. ಇದರ ಜೊತೆಗೆ, ಕಚೇರಿ ವೆಚ್ಚಗಳು, ಮತದಾರರೊಂದಿಗೆ ಸಂವಹನ ಮತ್ತು ಇತರೆ ಉದ್ದೇಶಗಳ ಖರ್ಚಿಗೆ 70,000 ಕ್ಷೇತ್ರ ಭತ್ಯೆಯನ್ನು ಕೂಡ ನೀಡಲಾಗಿದೆ.

ಸಂಬಳ ಮತ್ತು ದಿನಭತ್ಯೆಯನ್ನು ಹೊರತುಪಡಿಸಿ, ಸಂಸದರು ತಿಂಗಳಿಗೆ 70,000 ಕ್ಷೇತ್ರ ಭತ್ಯೆಯನ್ನು ಪಡೆಯುತ್ತಾರೆ.ಇದು ವರ್ಷಕ್ಕೆ 8.4 ಲಕ್ಷ ಮತ್ತು ಕಚೇರಿ ವೆಚ್ಚ 60,000, ಇದು ವರ್ಷಕ್ಕೆ ಒಟ್ಟು 7.2 ಲಕ್ಷ. ಹೆಚ್ಚುವರಿಯಾಗಿ, ಸಂಸದರು ವಿವಿಧ ಪ್ರಯಾಣ ಮತ್ತು ಇತರ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ, ಇದನ್ನು ಪ್ರತಿ ಸಂಸದರಿಗೆ ವರ್ಷಕ್ಕೆ 10 ಲಕ್ಷ ಎಂದು ಅಂದಾಜು ಮಾಡಲಾಗಿದೆ.

ಅನೇಕ ಭಾರತೀಯರು ಹಣದುಬ್ಬರದ ಒತ್ತಡಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಸಂಸದರ ವೇತನವನ್ನು ಹೆಚ್ಚಿಸುವ ನಿರ್ಧಾರ ಬಂದಿದೆ. ಒಟ್ಟು 788 ಸಂಸದರೊಂದಿಗೆ (ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 245), ಎಲ್ಲಾ ಸಂಸದರ ಸಂಚಿತ ವೆಚ್ಚವು ಈಗ ವರ್ಷಕ್ಕೆ ಸುಮಾರು 3,386.82 ಕೋಟಿ ತಲುಪಿದೆ. ಈ ವೆಚ್ಚವು ಸಂಬಳ, ಭತ್ಯೆಗಳು, ಕಚೇರಿ ವೆಚ್ಚಗಳು ಮತ್ತು ಅಂದಾಜು ಪ್ರಯಾಣ ಮತ್ತು ಇತರ ಸವಲತ್ತುಗಳನ್ನು ಮಾತ್ರ ಒಳಗೊಂಡಿದೆ.

ಜನಸಾಮಾನ್ಯರು ಬೆಲೆ ಏರಿಕೆಯಿಂದ ಸಂಕಷ್ಟ ಪಡುತ್ತಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಾಸಕ ಸಂಸದರ ವೇತನ ಏರಿಕೆಯನ್ನು ಮಾಡುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+