ದೇಶದಲ್ಲಿ ಹಣದುಬ್ಬರವು ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಹಣದುಬ್ಬರದ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜೋಳ ಹಾಗೂ ಇಂಧನದ ತೆರಿಗೆ ಕಡಿತ ಮಾಡುವ ಚಿಂತನೆ ಮಾಡಿದೆ ಎಂದು ವರದಿಯಾಗಿದೆ.
ಫೆಬ್ರವರಿಯ ಹಣದುಬ್ಬರ ಡೇಟಾವನ್ನು ಬಿಡುಗಡೆ ಮಾಡಿದ ಬಳಿಕವೇ ಸರ್ಕಾರವು ಕೆಲವು ವಸ್ತುಗಳ ತೆರಿಗೆ ಕಡಿತವನ್ನು ಮಾಡುವ ನಿರ್ಧಾರ ಕೈಗೊಳ್ಳಬಹುದು. ದೇಶದ ವಾರ್ಷಿಕ ರಿಟೇಲ್ ಹಣದುಬ್ಬರ ದರವು ಜನವರಿಯಲ್ಲಿ ಶೇಕಡ 6.52ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ರಿಟೇಕ್ ಹಣದುಬ್ಬರವು ಶೇಕಡ 5.72 ಆಗಿತ್ತು.
"ಆಹಾರ ಹಣದುಬ್ಬರವು ಹಲವಾರು ತಿಂಗಳುಗಳ ಕಾಲ ಹೆಚ್ಚಳವಾಗಿಯೇ ಉಳಿದಿದೆ. ಹಾಲು, ಜೋಳ, ಸೋಯಾ ಎಣ್ಣೆಯ ಬೆಲೆಯು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹಣದುಬ್ಬರವು ಏರಿಕೆಯಾಗಲು ಹಾಲು, ಜೋಳ, ಸೋಯಾ ಎಣ್ಣೆ ಬೆಲೆ ಏರಿಕೆಯೇ ಪ್ರಮುಖ ಕಾರಣವಾಗಿದೆ," ಎಂದು ಮೂಲಗಳು ಮಾಹಿತಿ ನೀಡಿದೆ.

"ಜೋಳ ಮೊದಲಾದ ಆಹಾರ ಉತ್ಪನ್ನಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರವು ನಿರ್ಧಾರ ಮಾಡುವ ಚಿಂತನೆ ಮಾಡುತ್ತಿದೆ. ಈಗಾಗಲೇ ಈ ಆಹಾರ ಉತ್ಪನ್ನಗಳಿಗೆ ಶೇಕಡ 60ರಷ್ಟು ಸುಂಕವನ್ನು ವಿಧಿಸಲಾಗುತ್ತದೆ. ಇನ್ನು ಇಂಧನದ ತೆರಿಗೆಯನ್ನು ಕೂಡಾ ಕಡಿತ ಮಾಡಲು ಸರ್ಕಾರ ಚಿಂತನೆ ನಡೆಸಿದೆ," ಎಂದು ವರಿದಿಯು ಉಲ್ಲೇಖ ಮಾಡಿದೆ. ಆದರೆ ಈ ವರದಿಗಳ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಜಾಗತಿಕ ತೈಲ ಬೆಲೆ ಇಳಿಕೆ
ಜಾಗತಿಕವಾಗಿ ಇಂಧನ ಬೆಲೆಯು ಕಡಿಮೆಯಾಗುತ್ತಿದೆ. ಕೆಲವು ತಿಂಗಳುಗಳಿಂದ ಸ್ಥಿರವಾಗುತ್ತಿದೆ. ಆದರೆ ಇಂಧನ ಸಂಸ್ಥೆಗಳು ಈವರೆಗೆ ಬೆಲೆ ಇಳಿಕೆಯನ್ನು ಮಾಡಿಲ್ಲ. ಬದಲಾಗಿ ಸಂಸ್ಥೆಗಳು ಈ ಹಿಂದೆ ಸಂಸ್ಥೆಗೆ ಉಂಟಾದ ನಷ್ಟವನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತಿದೆ. ಭಾರತವು 2-3ರಷ್ಟು ಇಂಧನವನ್ನು ಆಮದು ಮಾಡುತ್ತಿದೆ. ಈಗ ಇಂಧನ ಆಮದು ಸುಂಕ, ತೆರಿಗೆ ಕಡಿತ ಮಾಡಿದರೆ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುವ ನಿರೀಕ್ಷೆಯಿದೆ.
ಜನವರಿ ರಿಟೇಲ್ ಹಣದುಬ್ಬರವು ಆರ್‌ಬಿಐ ಟಾರ್ಗೆಟ್ ಮಿತಿಗಿಂತ ಅಧಿಕವಾಗಿದೆ. ಅಂದರೆ ಶೇಕಡ 6ರಕ್ಕೂ ಅಧಿಕವಾಗಿದೆ. ಅಕ್ಟೋಬರ್ ಬಳಿಕ ಮೊದಲ ಬಾರಿಗೆ ಹಣದುಬ್ಬರವು ಶೇಕಡ 6ಕ್ಕಿಂತ ಅಧಿಕವಾಗಿದೆ. ಕೇಂದ್ರ ಬ್ಯಾಂಕ್ ಹಲವಾರು ಸಲಹೆಗಳ್ನನು ನೀಡಿದೆ ಎಂದು ಮೂಲವು ತಿಳಿಸಿದೆ. "


Click it and Unblock the Notifications