ವ್ಯಾಪಾರ ರಹಸ್ಯಕ್ಕೆ ಸಂಬಂಧಿಸಿದಂತೆ ಯು.ಎಸ್.ನಲ್ಲಿನ ಎಪಿಕ್ ಸಿಸ್ಟಮ್ ಎಂಬ ಮೆಡಿಕಲ್ ಸಾಫ್ಟ್ ವೇರ್ ಕಂಪೆನಿಯು ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್) ವಿರುದ್ಧ ಹೂಡಿದ್ದ ಮೊಕದ್ದಮೆಯಲ್ಲಿ ಪರಿಹಾರವಾಗಿ 14 ಕೋಟಿ ಅಮೆರಿಕನ್ ಡಾಲರ್ ಮೊತ್ತವನ್ನು ಹಾನಿಗೆ ಪರಿಹಾರವಾಗಿ ಪಾವತಿಸಬೇಕಿದೆ. ಅಂದ ಹಾಗೆ, ಎಪಿಕ್ ಸಿಸ್ಟಮ್ಸ್ ನಿಂದ ಟಿಸಿಎಸ್ ವಿರುದ್ಧ 28 ಕೋಟಿ ಡಾಲರ್ ಪರಿಹಾರಕ್ಕೆ ದಾವೆ ಹೂಡಲಾಗಿತ್ತು.
ಶಿಕಾಗೋದಲ್ಲಿನ ಕೋರ್ಟ್ ಈಗಿನ ಆದೇಶ ನೀಡಿದೆ ಎಂದು ಟಿಸಿಎಸ್ ನಿಂದ ಶುಕ್ರವಾರ ಸ್ಟಾಕ್ ಎಕ್ಸ್ ಚೇಂಜ್ ಗೆ ಮಾಹಿತಿ ನೀಡಲಾಗಿದೆ. ಎಪಿಕ್ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ನಂಬುತ್ತೇವೆ. ಆದ್ದರಿಂದ ಪರ್ಯಾಯ ಮಾರ್ಗಗಳಿವೆಯೇ ಎಂದು ಪರಿಶೀಲಿಸುತ್ತಿರುವುದಾಗಿ ಟಿಸಿಎಸ್ ಹೇಳಿದೆ.
ವರದಿಗಳ ಪ್ರಕಾರ, 2014ನೇ ಇಸವಿಯಲ್ಲಿ ಎಪಿಕ್ ನಿಂದ ಟಿಸಿಎಸ್ ವಿರುದ್ಧ ದಾವೆ ಹೂಡಲಾಯಿತು. ಐಟಿ ಸೇವೆ ಒದಗಿಸುವ ಟಿಸಿಎಸ್ ನಿಂದ ಎಪಿಕ್ ಸಿಸ್ಟಮ್ಸ್ ನ ಬೌದ್ಧಿಕ ಆಸ್ತಿಯನ್ನು ಕಳುವು ಮಾಡಲಾಗಿದೆ ಎಂದು ದೂರಲಾಗಿತ್ತು. 2016ನೇ ಇಸವಿಯಲ್ಲಿ ಬಂದ ಆದೇಶದ ಪ್ರಕಾರ, 940 ಮಿಲಿಯನ್ ಡಾಲರ್ ಅಂದರೆ, 94 ಕೋಟಿ ಅಮೆರಿಕನ್ ಡಾಲರ್ ಎಪಿಕ್ ಸಿಸ್ಟಮ್ಸ್ ಗೆ ಟಿಸಿಎಸ್ ಪಾವತಿಸಬೇಕು ಎಂದಾಯಿತು.

2017ರಲ್ಲಿ ವಿಸ್ಕಾನ್ಸಿನ್ ಕೋರ್ಟ್ ನ್ಯಾಯಾಧೀಶರು ಈ ಮೊತ್ತವನ್ನು 42 ಕೋಟಿ ಡಾಲರ್ ಗೆ ಇಳಿಕೆ ಮಾಡಿದೆ. 2018ನೇ ಇಸವಿಯ ಜನವರಿಯಲ್ಲಿ 44 ಕೋಟಿ ಡಾಲರ್ ಮೊತ್ತದ ಲೆಟರ್ ಆಫ್ ಕ್ರೆಡಿಟ್ ಅನ್ನು ಎಪಿಕ್ ಸಿಸ್ಟಮ್ಸ್ ಗೆ ದೊರೆಯುವಂತೆ ಮಾಡುವುದಾಗಿ ಟಿಸಿಎಸ್ ಹೇಳಿತು.
ಆರಂಭಿಕವಾಗಿ ಟಿಸಿಎಸ್ ಮಾಡಿದ್ದ ಮನವಿಯನ್ನು ಪರಿಗಣಿಸಿದ ವಿಸ್ಕಾನ್ಸಿನ್ ನ್ಯಾಯಾಧೀಶರು ಕಳೆದ ವರ್ಷ ಮಾರ್ಚ್ ನಲ್ಲಿ ಪರಿಹಾರ ಮೊತ್ತವನ್ನು ಕಡಿಮೆ ಮಾಡಿದರು ಹಾಗೂ ತೀರ್ಪನ್ನು ಎತ್ತಿಹಿಡಿದರು. ಆ ನಂತರ ಟಿಸಿಎಸ್ ನಿಂದ ಶಿಕಾಗೋದ ಸೆವೆಂತ್ ಸರ್ಕ್ಯೂಟ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.
ಎಪಿಕ್ ಎಂಬುದು ಖಾಸಗಿ ಕಂಪೆನಿ. ವಿಸ್ಕಾನ್ಸಿನ್ ನ ವೆರೂನಾದಲ್ಲಿ ಈ ಕಂಪೆನಿ ಇದೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ದಾಖಲೆಗಳ ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಈ ಕಂಪೆನಿ ಒದಗಿಸುತ್ತದೆ. ಇದರ ಜತೆಗೆ ಯುನೈಟೆಡ್ ಸ್ಟೇಟ್ಸ್ ಪೂರ್ತಿ ಇತರ ಹೆಲ್ತ್ ಕೇರ್ ವ್ಯವಸ್ಥೆಗಳನ್ನು ಮಾಡಿಕೊಡುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications