ಯು.ಎಸ್. ಜತೆಗೆ ಮತ್ತೆ ವ್ಯಾಪಾರ ಮಾತುಕತೆ ಆರಂಭಿಸಲಿದೆ ಚೀನಾ

ಚೀನಾ ಹಾಗೂ ಯುಎಸ್ ಮಧ್ಯದ ವ್ಯಾಪಾರ ಪ್ರತಿನಿಧಿಗಳು ಶೀಘ್ರದಲ್ಲೇ ಫೋನ್ ಮೂಲಕ ಸಭೆ ನಡೆಸಲಿದ್ದು, ದರ ಸಮರವನ್ನು ಬಗೆಹರಿಸುವ ನಿಟ್ಟಿನಲ್ಲಿ ಒಪ್ಪಂದದ ಚರ್ಚೆ ಮಾಡಲಿದ್ದಾರೆ ಎಂದು ವಾಣಿಜ್ಯ ಸಚಿವಾಲಯದ ವಕ್ತಾರರು ಗುರುವಾರ ತಿಳಿಸಿದ್ದಾರೆ. ಈ ಚರ್ಚೆ ಯಾವ ಸಮಯದಲ್ಲಿ ನಡೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ವಕ್ತಾರ ಗಾವ್ ಫೆಂಗ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ವ್ಯಾಪಾರ ಒಪ್ಪಂದ ಈ ವರ್ಷದ ಜನವರಿಯಲ್ಲಿ ಆಗಿತ್ತು. ಬೀಜಿಂಗ್ ನ ತಂತ್ರಜ್ಞಾನ ಮಹತ್ವಾಕಾಂಕ್ಷೆಯಿಂದ 2018ರಲ್ಲಿ ಪರಸ್ಪರ ದೇಶಗಳ ವಸ್ತುಗಳ ಮೇಲೆ ಹೆಚ್ಚುವರಿಯಾಗಿ ತೆರಿಗೆ ಹಾಕುತ್ತಿದ್ದವು. ಅವುಗಳನ್ನು ಕೊನೆ ಮಾಡಲು ಎರಡೂ ಸರ್ಕಾರಗಳು ಒಪ್ಪಂದ ಮಾಡಿಕೊಂಡಿದ್ದವು.

ಕಳೆದ ಜನವರಿಯ ವೇಳೆ ಆರು ತಿಂಗಳ ನಂತರ ಮಾತುಕತೆ ನಡೆಸಲು ನಿರ್ಧರಿಸಿದ್ದವು. ಆದರೆ ಕೊರೊನಾ ಕಾರಣಕ್ಕೆ ಮುಂದಕ್ಕೆ ಹೋಗಿತ್ತು. ಕಳೆದ ವಾರ ಆನ್ ಲೈನ್ ನಲ್ಲಿ ಸಭೆ ನಿಗದಿಯಾಗಿತ್ತು. ಆ ನಂತರ ಮುಂದಕ್ಕೆ ಹೋಯಿತು. "ಸದ್ಯದಲ್ಲೇ ಎರಡು ಕಡೆಯವರು ಸಭೆ ನಡೆಸಲು ಒಪ್ಪಿಕೊಳ್ಳಲಾಗಿದೆ" ಎಂದು ಗಾವ್ ಹೇಳಿದ್ದಾರೆ.

ಯು.ಎಸ್. ಜತೆಗೆ ಮತ್ತೆ ವ್ಯಾಪಾರ ಮಾತುಕತೆ ಆರಂಭಿಸಲಿದೆ ಚೀನಾ

ಯು.ಎಸ್. ಹಾಗೂ ಚೀನಾ ಎರಡೂ ದೇಶಗಳು ಪರಸ್ಪರ ದೇಶಗಳ ವಸ್ತುಗಳ ಮೇಲೆ ಭಾರೀ ತೆರಿಗೆ ಹಾಕುತ್ತಿದ್ದವು. ನೂರು ಕೋಟಿ ಡಾಲರ್ ಮೊತ್ತದ ವಸ್ತುಗಳಿಗೆ ಈಗಲೂ ಎರಡು ದೇಶಗಳು ತೆರಿಗೆ ಹಾಕುತ್ತಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+