ಆನ್‌ಲೈನ್ ವಂಚನೆಗಳು ಹೆಚ್ಚಳವಾಗುತ್ತಿದೆ. ತಮ್ಮನ್ನು ತಾವು ಕಂಪನಿಯ ಅಧಿಕಾರಿಗಳೆಂದು ಹೇಳಿಕೊಂಡು ವಂಚಕರು ಹಣವನ್ನು ಲಾಂಡರಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. 15000 ಭಾರತೀಯರನ್ನು ವಂಚಿಸಲು ಇತ್ತೀಚೆಗೆ ಭಾರತೀಯನೋರ್ವ ಚೀನೀಯರಿಗೆ ಸಹಾಯ ಮಾಡಿದ್ದ, ಈಗ ಚೀನಾದ ವ್ಯಕ್ತಿಯೋರ್ವ 9 ದಿನದಲ್ಲಿ 1,400 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ.
ಗುಜರಾತ್ ಪೊಲೀಸರು ನಕಲಿ ಫುಟ್ಬಾಲ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿ ಜನರನ್ನು ವಂಚನೆ ಮಾಡುತ್ತಿದ್ದ, ಚೀನಾದ ಪ್ರಜೆಯನ್ನು ಒಳಗೊಂಡ ಆನ್‌ಲೈನ್ ಬೆಟ್ಟಿಂಗ್ ಹಗರಣವನ್ನು ಬಹಿರಂಗಪಡಿಸಿದ್ದಾರೆ. ಆ್ಯಪ್ ಉತ್ತರ ಗುಜರಾತ್‌ನಲ್ಲಿ ಸುಮಾರು 1,200 ಸಂತ್ರಸ್ತರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಅದು ಕೂಡಾ ಕೇವಲ ಒಂಬತ್ತು ದಿನಗಳಲ್ಲಿ ಸುಮಾರು 1,400 ಕೋಟಿ ರೂಪಾಯಿಯ ವಂಚನೆ ಮಾಡಿದ್ದಾರೆ.

ಪ್ರಕರಣದ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ. ತನಿಖೆಯ ಸಮಯದಲ್ಲಿ, ಇದು ಚೀನಾದ ಶೆನ್ಜೆನ್ ಪ್ರದೇಶದ ನಿವಾಸಿಯಾದ ವೂ ಉಯಾನ್ಬೆ ಈ ಪ್ರಕರಣದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗುಜರಾತ್‌ನ ಪಠಾಣ್ ಮತ್ತು ಬನಸ್ಕಾಂತ ಜಿಲ್ಲೆಯಲ್ಲಿ ಹಗರಣವನ್ನು ನಡೆಸಲಾಗಿದೆ ಎಂದು ಶಂಕೆ ಇದೆ.
700-crore fraud: 15,000 ಜನರಿಗೆ 700 ಕೋಟಿ ರೂ. ವಂಚಿಸುವ ಚೀನೀಯರಿಗೆ ಭಾರತೀಯ ಸಾಥ್ ನೀಡಿದ್ದು ಹೇಗೆ?
ಅಪರಾಧ ತನಿಖಾ ವಿಭಾಗದ (ಸಿಐಡಿ) ಅಪರಾಧ ವಿಭಾಗವು ಕಳೆದ ವರ್ಷ ಜೂನ್‌ನಲ್ಲಿ ವಂಚನೆಯ ಬಗ್ಗೆ ಮೊದಲು ಎಚ್ಚರಿಕೆ ನೀಡಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಜನರನ್ನು ಗುರಿಯಾಗಿಸಿಕೊಂಡು, ಕೆಲವು ವಂಚಕರು ದಾನಿ ಡೇಟಾ ಹೆಸರಿನ ಅಪ್ಲಿಕೇಶನ್ ಮೂಲಕ ಈ ವಂಚನೆಯನ್ನು ಮಾಡಲಾಗಿದೆ ಎಂಬ ಮಾಹಿತಿ ಸಿಐಡಿಗೆ ಲಭಿಸಿದೆ.
ಆಗ್ರಾ ಪೊಲೀಸರು ತಮ್ಮ ವಿಚಾರಣೆಯನ್ನು ಪ್ರಾರಂಭಿಸಿದಾಗ ಉತ್ತರ ಗುಜರಾತ್‌ನ ಸಂಪರ್ಕವು ತಿಳಿದುಬಂದಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಿಐಡಿ ಅಧಿಕಾರಿಯು ಪ್ರಕರಣದ ಕುರಿತು ವಿವರಿಸಿದ್ದಾರೆ. ತಮ್ಮ ವಿಚಾರಣೆಯ ಸಮಯದಲ್ಲಿ ಚೀನಾದ ಪ್ರಜೆ 2020 ರಿಂದ 2022 ರವರೆಗೆ ಭಾರತದಲ್ಲಿದ್ದ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಈ ಚೀನಾದ ಪ್ರಜೆ ಪಟಾನ್ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾನೆ. ಚೀನಾದ ವ್ಯಕ್ತಿ ಗುಜರಾತ್‌ನಲ್ಲಿ ತನ್ನ ಸಹವರ್ತಿಗಳೊಂದಿಗೆ ಸೇರಿಕೊಂಡು ಕಳೆದ ವರ್ಷ ಮೇ ತಿಂಗಳಲ್ಲಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ಆಟವಾಡಿ ಉತ್ತಮ ಆದಾಯವನ್ನು ಗಳಿಸಬಹುದು ಎಂದು ಭರವಸೆ ನೀಡಿ ವಂಚನೆ ಮಾಡಿದ್ದಾರೆ.
15 ರಿಂದ 75 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ಚೀನಾದ ವ್ಯಕ್ತಿ ವೂ ಉಯಾನ್ಬೆ ಪ್ರತಿದಿನ ಸರಾಸರಿ 200 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಮುಖ್ಯವಾಗಿ ಫುಟ್ಬಾಲ್ ಆಟಗಾರರನ್ನು ಬಲಿಪಶುವನ್ನಾಗಿಸಲಾಗಿದೆ. ಫುಟ್ಬಾಲ್ ಆಡಲು ಆಟ ಹಾಕಿದ ಗೇಮರ್‌ಗಳ ಮೊತ್ತವನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ.
ಹವಾಲಾ ಜಾಲಗಳ ಮೂಲಕ ಕದ್ದ ಹಣವನ್ನು ವರ್ಗಾವಣೆ ಮಾಡಲು ಸಹಾಯ ಮಾಡಿದ ಒಂಬತ್ತು ವ್ಯಕ್ತಿಗಳನ್ನು ಸಿಐಡಿಯ ಸೈಬರ್ ಸೆಲ್ ಬಂಧಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಪಟಾನ್‌ನಲ್ಲಿ ಐಟಿ ಕಾಯ್ದೆಯಡಿ ವಂಚನೆ ಮತ್ತು ಉಲ್ಲಂಘನೆಗಾಗಿ ಎಫ್‌ಐಆರ್ ದಾಖಲಿಸಿದ ನಂತರ ಗುಜರಾತ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಆದರೂ ಕೂಡಾ ಉಯಾನ್ಬೆ ಭಾರತವನ್ನು ತೊರೆದು ಚೀನಾಕ್ಕೆ ಹೋಗಿದ್ದಾನೆ.
ಸಿಐಡಿಯು ಉಯಾನ್ಬೆ ವಿರುದ್ಧ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಆದರಿಂದಾಗಿ ಆತನ ಹಸ್ತಾಂತರದ ಕಾನೂನು ಪ್ರಕ್ರಿಯೆಗಳು ಇನ್ನೂ ಬಾಕಿ ಉಳಿದಿವೆ. ಇನ್ನು ಉಯಾನ್ಬೆ ವಂಚನೆಗಾಗಿ ಅನೇಕ ಅಪ್ಲಿಕೇಶನ್‌ಗಳನ್ನು ಸಾಧನಗಳಾಗಿ ಬಳಸುತ್ತಾ ಬಂದಿದ್ದಾರೆ ಎಂಬ ಆರೋಪಗಳಿದೆ. ಮಾರ್ಚ್‌ನಲ್ಲಿ ಸಿಐಡಿಯ ಅಪರಾಧ ವಿಭಾಗವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಿತ್ತು.


Click it and Unblock the Notifications