ಯುಐಡಿಎಐನ ಬೆಂಗಳೂರಿನ ಪ್ರಾದೇಶಿಕ ಕಚೇರಿ 2022ರ ಮೇ 27ರಂದು ಹೊರಡಿಸಿದ್ದ ಮಾಧ್ಯಮ ಪ್ರಕಟಣೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿ, ಚರ್ಚೆ ಆರಂಭವಾದ ಬೆನ್ನಲ್ಲೇ ಈ ಕುರಿತಂತೆ ತಪ್ಪು ಸಂದೇಶ ಹರಡಬಾರದು ಎಂಬ ಉದ್ದೇಶದಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದೆ.
ಫೋಟೋಶಾಪ್ ಮಾಡಲಾದ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವ ಯತ್ನದ ಹಿನ್ನೆಲೆಯಲ್ಲಿ ಅವರು ಈ ಪ್ರಕಟಣೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ. ಜನರು ತಮ್ಮ ಆಧಾರ್‌ನ ನಕಲು ಪ್ರತಿ (ಫೋಟೊಕಾಪಿ)ಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಎಂದು ಪ್ರಕಟಣೆಯು ಸಲಹೆ ನೀಡಿದೆ, ಏಕೆಂದರೆ ಅದು ದುರುಪಯೋಗ ಆಗುವ ಸಾಧ್ಯತೆಗಳಿವೆ ಎಂದು. ಅದಕ್ಕೆ ಪರ್ಯಾಯವಾಗಿ ಆಧಾರ್ ಸಂಖ್ಯೆಯ ಕೇವಲ ಕೊನೆಯ ನಾಲ್ಕು ಅಂಕಿಗಳು ಕಾಣುವ ಅರೆಮುಚ್ಚಿದ (ಮಾಸ್ಕಡ್ ) ಆಧಾರ್ ಅನ್ನು ಬಳಸಬಹುದು.
ಆದರೆ ಆ ಪತ್ರಿಕಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅದನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆಯಲಾಗಿದೆ. ಯುಐಡಿಎಐ ನೀಡಿದ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಯುಐಡಿಎಐ ಆಧಾರ್ ಸಂಖ್ಯೆಗಳನ್ನು ಬಳಕೆ ಮಾಡುವಾಗ ಮತ್ತು ಹಂಚಿಕೊಳ್ಳುವಾಗ ಸಾಮಾನ್ಯ ಜ್ಞಾನವನ್ನು ಬಳಕೆ ಮಾಡಲು ಮಾತ್ರ ಸಲಹೆ ನೀಡಲಾಗುತ್ತದೆ.

ಆಧಾರ್ ಗುರುತಿನ ದೃಢೀಕರಣ ಪೂರಕ ವ್ಯವಸ್ಥೆಯು, ಆಧಾರ್ ಹೊಂದಿರುವವರ ಗುರುತು ಮತ್ತು ಗೋಪ್ಯತೆಯನ್ನು ರಕ್ಷಿಸಲು ಮತ್ತು ಸಾಕಷ್ಟು ಮುಂಜಾಗ್ರತಾ ವೈಶಿಷ್ಟ್ಯ ಕ್ರಮಗಳನ್ನು ಹೊಂದಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಲಾಗಿದೆ.
"ನಿಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ ಏಕೆಂದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಪರ್ಯಾಯವಾಗಿ, ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ 4-ಅಂಕಿಗಳನ್ನು ಮಾತ್ರ ಪ್ರದರ್ಶಿಸುವ masked ಆಧಾರ್ ಅನ್ನು ಬಳಸಿ'' ಎಂದು ಯುಐಡಿಎಐ ತಿಳಿಸಿತ್ತು.
Masked ಆಧಾರ್ ಕಾರ್ಡ್ ಕುರಿತಂತೆ ಪ್ರಾಧಿಕಾರ ನೀಡಿದ ಅಧಿಕೃತ ಪ್ರಕಟಣೆಯಂತೆ, ''ಮಾಸ್ಕ್ ಆಧಾರ್ ಆಯ್ಕೆಯು ನಿಮ್ಮ ಡೌನ್‌ಲೋಡ್ ಮಾಡಿದ ಇ-ಆಧಾರ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಮಾಸ್ಕ್ ಮಾಡಲು ಅನುಮತಿಸುತ್ತದೆ. ಮಾಸ್ಕ್ಡ್ ಆಧಾರ್ ಸಂಖ್ಯೆಯು ಆಧಾರ್ ಸಂಖ್ಯೆಯ ಮೊದಲ 8 ಅಂಕೆಗಳನ್ನು "xxxx-xxxx" ನಂತಹ ಕೆಲವು ಅಕ್ಷರಗಳೊಂದಿಗೆ ಬದಲಿಸುವುದನ್ನು ಸೂಚಿಸುತ್ತದೆ ಆದರೆ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳು ಮಾತ್ರ ಗೋಚರಿಸುತ್ತವೆ.
ಇ-ಆಧಾರ್ ಡೌನ್‌ಲೋಡ್ ಮಾಡಲು ದಯವಿಟ್ಟು ಇಂಟರ್ನೆಟ್ ಕೆಫೆ/ಕಿಯೋಸ್ಕ್‌ನಲ್ಲಿ ಸಾರ್ವಜನಿಕ ಕಂಪ್ಯೂಟರ್ ಬಳಸುವುದನ್ನು ತಪ್ಪಿಸಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಡೌನ್‌ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಪ್ರತಿಗಳನ್ನು ನೀವು ಕಂಪ್ಯೂಟರ್‌ನಿಂದ ಶಾಶ್ವತವಾಗಿ ಡಿಲೀಟ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.


Click it and Unblock the Notifications