For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆ ಮತ್ತೆ ಕುಸಿತ: ಎಚ್‌ಡಿಎಫ್‌ಸಿ ಲೈಫ್‌ಗೆ ನಷ್ಟ

|

ಆರಂಭಿಕವಾಗಿ ಮಾರುಕಟ್ಟೆಯಲ್ಲಿ ಲಾಭದೊಂದಿಗೆ ವಹಿವಾಟಿಗೆ ಇಳಿದಿದ್ದ ಷೇರುಗಳು ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ನಷ್ಟವನ್ನು ಕಂಡಿದೆ. ತಾಂತ್ರಿಕ, ಬ್ಯಾಂಕ್, ಆಟೋ ಮೊಬೈಲ್, ಕನ್ಸ್ಯೂಮರ್ ಸ್ಟಾಕ್‌ಗಳು ನಷ್ಟವನ್ನು ಕಂಡಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 100 ಅಂಕ ಅಥವಾ ಶೇಕಡ 0.19ರಷ್ಟು ಕುಸಿತ ಕಂಡಿದ್ದು, 53,134ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 25 ಅಂಕ ಅಥವಾ ಶೇಕಡ 0.15ರಷ್ಟು ಕುಸಿದು 15,811ಕ್ಕೆ ವಹಿವಾಟು ಅಂತ್ಯ ಮಾಡಿದೆ. ವಹಿವಾಟಿನ ಮಧ್ಯದಲ್ಲಿ ಸೆನ್ಸೆಕ್ಸ್ ಸುಮಾರು 812 ಅಂಕ ಕುಸಿತ ಕಂಡಿದ್ದವು. ನಿಫ್ಟಿ ಮಿಡ್ ಕ್ಯಾಪ್ 100 ಶೇಕಡ 0.27ರಷ್ಟು ಹಾಗೂ ಸ್ಮಾಲ್ ಕ್ಯಾಪ್ ಶೇಕಡ 0.07ರಷ್ಟು ಕೆಳಕ್ಕೆ ಕುಸಿತ ಕಂಡಿದೆ. ಇನ್ನು 15 ಸೆಕ್ಟರ್ ಗೇಜ್‌ಗಳಲ್ಲಿ 11 ನಷ್ಟವನ್ನು ಕಂಡಿದೆ.

ಷೇರು ಪೇಟೆ ಶುಭಾರಂಭ: ಮತ್ತೆ ಎಲ್‌ಐಸಿ ಸ್ಟಾಕ್ ಜಿಗಿತಷೇರು ಪೇಟೆ ಶುಭಾರಂಭ: ಮತ್ತೆ ಎಲ್‌ಐಸಿ ಸ್ಟಾಕ್ ಜಿಗಿತ

ನಿಫ್ಟಿ ಐಟಿ, ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ನಿಫ್ಟಿ ಎಫ್‌ಎಂಸಿಜಿ ಹಾಗೂ ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್ಸ್ ಕ್ರಮವಾಗಿ ಶೇಕಡ 0.70, ಶೇಕಡ 0.37, ಶೇಕಡ 0.36, ಶೇಕಡ 0.16 ಮತ್ತು ಶೇಕಡ 0.13ರಷ್ಟು ಕೆಳಕ್ಕೆ ಕುಸಿದಿದೆ. ಇನ್ನು ನಿಫ್ಟಿ ಹೆಲ್ತ್‌ಕೇರ್, ನಿಫ್ಟಿ ಮೆಟಲ್ ಹಾಗೂ ನಿಫ್ಟಿ ಆಯಿಲ್ & ಗ್ಯಾಸ್ ಕ್ರಮವಾಗಿ 0.ಶೇಕಡ 34, ಶೇಕಡ 0.30, ಶೇಕಡ 18 ಏರಿಕೆಯಾಗಿದೆ.

 ಎಚ್‌ಡಿಎಫ್‌ಸಿ ಲೈಫ್ ಷೇರು ಕುಸಿತ

ಎಚ್‌ಡಿಎಫ್‌ಸಿ ಲೈಫ್ ಷೇರು ಕುಸಿತ

ನಿಫ್ಟಿಯಲ್ಲಿ ಎಚ್‌ಡಿಫ್‌ಸಿ ಲೈಫ್ ಭಾರೀ ಕುಸಿತ ಕಂಡಿದೆ. ಎಚ್‌ಡಿಫ್‌ಸಿ ಲೈಫ್ ಷೇರುಗಳು ಶೇಕಡ 1.81ರಷ್ಟು ಕುಸಿದು ರೂಪಾಯಿ 563.90ಕ್ಕೆ ಇಳಿಕೆ ಕಂಡಿದೆ. ವಿಪ್ರೋ, ಐಟಿಸಿ, ಮಾರುತಿ, ಬ್ರಿಟಾನಿಯಾ ಕೂಡಾ ಭಾರೀ ನಷ್ಟವನ್ನು ಕಂಡಿದೆ. ಒಟ್ಟಾಗಿ 1,725 ಷೇರುಗಳು ಲಾಭವನ್ನು ಕಂಡದರೆ, 1,562 ಷೇರುಗಳು ನಷ್ಟವನ್ನು ಕಂಡಿದೆ.

ಎಲ್‌ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆಎಲ್‌ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ

 ಯಾವೆಲ್ಲಾ ಷೇರುಗಳು ಕುಸಿತ

ಯಾವೆಲ್ಲಾ ಷೇರುಗಳು ಕುಸಿತ

30 ಷೇರುಗಳ ಬಿಎಸ್‌ಇ ಸೂಚ್ಯಂಕ ಐಟಿಸಿ, ವಿಪ್ರೋ, ಎಂ&ಎಂ, ಎಲ್&ಟಿ, ಮಾರುತಿ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಇನ್ಫೋಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಟಿಸಿಎಸ್ ಸ್ಟಾಕ್‌ಗಳು ಕುಸಿತವನ್ನು ಕಂಡಿದೆ.

 ಯಾವೆಲ್ಲಾ ಷೇರು ಏರಿಕೆ?

ಯಾವೆಲ್ಲಾ ಷೇರು ಏರಿಕೆ?

ಪವರ್ ಗ್ರಿಡ್, ಬಜಾಜ್ ಫಿನ್‌ಸರ್ವ್, ಹಿಂದೂಸ್ತಾನ್ ಯೂನಿಲಿವರ್, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್ಸ್, ಡಾ. ರೆಡ್ಡೀಸ್, ಬಜಾಜ್ ಫಿನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರಾ ಲಾಭವನ್ನು ಕಂಡಿದೆ.

 ಎಲ್‌ಐಸಿ ಸ್ಟಾಕ್ ಮತ್ತೆ ಏರಿಕೆ

ಎಲ್‌ಐಸಿ ಸ್ಟಾಕ್ ಮತ್ತೆ ಏರಿಕೆ

ಈ ನಡುವೆ ಎಲ್‌ಐಸಿ ಸ್ಟಾಕ್‌ ಏರಿಕೆಯನ್ನು ಕಾಣುತ್ತಿದೆ. ಮಂಗಳವಾರ ಷೇರು ಮಾರುಕಟ್ಟೆ ಕುಸಿತ ಕಂಡರೂ ಕೂಡಾ ಎಲ್‌ಐಸಿ ಷೇರು ಮಾತ್ರ ಏರಿಕೆ ಕಂಡಿದೆ. ಶೇಕಡ 1.49ರಷ್ಟು ಏರಿಕೆ ಕಂಡು ರೂಪಾಯಿ 702.80ಕ್ಕೆ ತಲುಪಿದೆ. ಆದರೂ ವಿತರಣಾ ಬೆಲೆಯಿಂದ ಎಲ್‌ಐಸಿ ಷೇರು ಭಾರೀ ಕೆಳಕ್ಕೆ ಕುಸಿದಿದೆ. ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 1.52 ರಷ್ಟು ಏರಿಕೆಯಾಗಿ ರೂಪಾಯಿ 703.05 ಕ್ಕೆ ತಲುಪಿ ವಹಿವಾಟು ಆರಂಭ ಮಾಡಿದೆ.

English summary

Closing Bell: Sensex Crashes 100 Points, Nifty Settles Below 15,800

Closing Bell: Sensex Crashes 100 Points, Nifty Settles Below 15,800.
Story first published: Tuesday, July 5, 2022, 17:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X