ಷೇರು ಮಾರುಕಟ್ಟೆ ಸತತ ಎರಡನೇ ಸೆಷನ್‌ನಲ್ಲಿ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿ ಕೊಂಚ ಚೇತರಿಕೆ ಕಂಡಿದ್ದ ಷೇರು ಮಾರುಕಟ್ಟೆ ವಹಿವಾಟಿನ ಅಂತ್ಯದ ವೇಳೆಗೆ ಕೆಳಕ್ಕೆ ಕುಸಿದಿದೆ.
ಗುರುವಾರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಸ್ಟಾಕ್ ಫ್ಯೂಚರ್ಸ್ ಕುಸಿದಿದೆ. ಹೀಗಿರುವಾಗ ವಹಿವಾಟಿನ ಅಂತ್ಯದಲ್ಲೂ ನಷ್ಟವನ್ನು ಕಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇನ್ನು ಬಹುತೇಕ ಎಲ್ಲಾ ಷೇರುಗಳು ವಹಿವಾಟಿನ ಸಂದರ್ಭದಲ್ಲಿ ಏರಿಳಿತ ಕಂಡಿದೆ.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 8 ಅಂಕ ಅಥವಾ ಶೇಕಡ 0.02ರಷ್ಟು ಕುಸಿತ ಕಂಡು 53,019ಕ್ಕೆ ತಲುಪಿದೆ. ಇನ್ನು ಈ ಸಂದರ್ಭದಲ್ಲೇ ಎನ್‌ಎಸ್‌ಸಿ ನಿಫ್ಟಿ 19 ಅಂಕ ಅಥವಾ ಶೇಕಡ 0.12ರಷ್ಟು ಕುಸಿದು 15,780ಕ್ಕೆ ವಹಿವಾಟು ನಿಲ್ಲಿಸಿದೆ.
ಇನ್ನು ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಇಂದು ನಷ್ಟವನ್ನು ಕಂಡಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.82ರಷ್ಟು ಹಾಗೂ ಸ್ಮಾಲ್ ಕ್ಯಾಪ್ ಶೇಕಡ 0.46ರಷ್ಟು ಕುಸಿತ ಕಂಡಿದೆ. 15 ಸೆಕ್ಟರ್ ಗೇಜ್‌ನಲ್ಲಿ 15 ನಷ್ಟವನ್ನು ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಆಟೋ, ನಿಫ್ಟಿ ಐಟಿ, ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡ 1.26, ಶೇಕಡ 1.05 ಹಾಗೂ ಶೇಕಡ 1.99ರಷ್ಟು ಕುಸಿತ ಕಂಡಿದೆ.
ಈಚರ್ ಮೋಟರ್ಸ್ ಟಾಪ್ ನಿಫ್ಟಿ ಲೂಸರ್
ಈಚರ್ ಮೋಟರ್ಸ್ ಟಾಪ್ ನಿಫ್ಟಿ ಲೂಸರ್ ಆಗಿದೆ. ಈಚರ್ ಮೋಟರ್ಸ್ ಸ್ಟಾಕ್ ಶೇಕಡ 3.55ರಷ್ಟು ಕುಸಿತ ಕಂಡಿದ್ದು, 2,784.0ಕ್ಕೆ ತಲುಪಿದೆ. ಸಿಪ್ಲಾ, ಬಿಪಿಸಿಎಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಶ್ರೀ ಸಿಮೆಂಟ್ ಕೂಡಾ ನಷ್ಟವನ್ನು ಕಂಡಿದೆ. 1,377 ಷೇರುಗಳು ಲಾಭವನು ಕಂಡಿದ್ದರೆ, 1,899 ಷೇರುಗಳು ನಷ್ಟವನ್ನು ಕಂಡಿದೆ.
ಯಾವೆಲ್ಲಾ ಷೇರು ಏರಿಕೆ, ಯಾವುದು ಇಳಿಕೆ?
ಬಿಎಸ್‌ಇ ಸೂಚ್ಯಂಕದಲ್ಲಿ ಟೆಕ್ ಮಹೀಂದ್ರಾ, ಬಜಾಜ್ ಫಿನಾನ್ಸ್, ಬಜಾಜ್ ಫಿನ್‌ಸರ್ವ್, ಟಾಟಾ ಸ್ಟೀಲ್ಸ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಎಂ&ಎಂ, ನೆಸ್ಟ್ಲೆ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್, ವಿಪ್ರೋ ಟಿಸಿಎಸ್, ಮಾರುತಿ ಭಾರೀ ನಷ್ಟವನ್ನು ಕಂಡಿದೆ. ಈ ಸಂದರ್ಭದಲ್ಲೇ ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್, ಎನ್‌ಟಿಪಿಸಿ, ಎಲ್&ಟಿ, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಟೈಟಾನ್ ಲಾಭವನ್ನು ಕಂಡಿದೆ.
ಜೊಮ್ಯಾಟೊ ಷೇರು ಭಾರೀ ಇಳಿಕೆ
ಜೊಮ್ಯಾಟೊ ಷೇರುಗಳು ಭಾರೀ ಇಳಿಕೆ ಕಂಡಿದೆ. ದಿನಸಿ ಡೆಲಿವರಿ ಮಾಡುವ ಸ್ಟಾರ್ಟ್‌ಅಪ್ ಬ್ಲಿಂಕಿಟ್ ಅನ್ನು 4,447 ಕೋಟಿ ಡಾಲರ್‌ಗೆ ಖರೀದಿ ಮಾಡುವ ಒಪ್ಪಂದದ ನಂತರ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ ಭಾರೀ ಕುಸಿತ ಕಾಣುತ್ತಿದೆ. ಗುರುವಾರು ಶೇಕಡ 5.93ರಷ್ಟು ಕುಸಿದ ಜೊಮ್ಯಾಟೊ ಷೇರು 53.90ಕ್ಕೆ ತಲುಪಿದೆ. ಈ ನಡುವೆ ಪೆಟಿಎಂ ಶೇಕಡ 4.24ರಷ್ಟು ಕುಸಿದು ರೂಪಾಯಿ 675.80ಕ್ಕೆ ತಲುಪಿದೆ.
ಎಲ್‌ಐಸಿ ಷೇರು ಮತ್ತೆ ಕುಸಿತ
ಷೇರು ಪೇಟೆಗೆ ಎಂಟ್ರಿ ನೀಡಿದ ಮೊದಲ ದಿನದಂದೇ ಎಲ್‌ಐಸಿ ಷೇರು ರಿಯಾಯಿತಿ ದರದಲ್ಲಿ ಪಟ್ಟಿಯಾಗಿದೆ. ಇದಾದ ಬಳಿಕ ಹಲವಾರು ಬಾರಿ ನಷ್ಟವನ್ನು ಕಂಡಿದೆ. ದೇಶದ ಅತೀ ದೊಡ್ಡ ವಿಮಾ ಸಂಸ್ಥೆ, ಅತಿ ದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರು ವಹಿವಾಟಿನ ಅಂತ್ಯದಲ್ಲಿ ಶೇಕಡ 0.78ರಷ್ಟು ಕುಸಿದು, ರೂಪಾಯಿ 673.60ಕ್ಕೆ ತಲುಪಿದೆ. ಇನ್ನು ವಹಿವಾಟಿನ ಆರಂಭದಲ್ಲಿ ಎಲ್‌ಐಸಿ ಷೇರು ಶೇಕಡಾ 0.11 ರಷ್ಟು ಕುಸಿದು ರೂಪಾಯಿ 678.15 ಕ್ಕೆ ವಹಿವಾಟಿಗಿಳಿದಿತ್ತು.


Click it and Unblock the Notifications