For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 456 ಪಾಯಿಂಟ್ಸ್ ಕುಸಿತ, ನಿಫ್ಟಿ 18,300 ಮಟ್ಟಕ್ಕಿಂತ ಇಳಿಕೆ

|

ಭಾರತದ ಷೇರುಪೇಟೆ ಬುಧವಾರ (ಅ. 20) ಆರಂಭಿಕ ಲಾಭವನ್ನ ಅಳಿಸಿಹಾಕಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 18300 ಪಾಯಿಂಟ್ಸ್‌ಗಿಂತ ಕೆಳಗಿಳಿದಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 456.09 ಪಾಯಿಂಟ್ಸ್ ಅಥವಾ ಶೇಕಡಾ 0.74ರಷ್ಟು ಕುಸಿದು 61,259.96 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 152.20 ಪಾಯಿಂಟ್ಸ್ ಅಥವಾ ಶೇಕಡಾ 0.83ರಷ್ಟು ಇಳಿಕೆಗೊಂಡು 18,266.60 ಪಾಯಿಂಟ್ಸ್‌ ಮುಟ್ಟಿದೆ.

ದಿನದ ವಹಿವಾಟು ಆರಂಭದಲ್ಲಿ 877 ಷೇರುಗಳು ಏರಿಕೆಗೊಂಡರೆ, 2351 ಷೇರುಗಳು ಕುಸಿದವು ಮತ್ತು 115 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು:

ಏರಿಕೆಗೊಂಡ ಪ್ರಮುಖ ಷೇರುಗಳು:

ಭಾರ್ತಿ ಏರ್‌ಟೆಲ್, ಎಸ್‌ಬಿಐ, ಟಾಟಾ ಮೋಟಾರ್ಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ದಿನದಲ್ಲಿ ಏರಿಕೆಗೊಂಡ ಪ್ರಮುಖ ಷೇರುಗಳಾಗಿವೆ.

ಚಿನ್ನದ ಬೆಲೆ ಮತ್ತೆ ಏರಿಕೆ: ಅಕ್ಟೋಬರ್ 20ರ ಬೆಲೆ ಎಷ್ಟಿದೆ ತಿಳಿದುಕೊಳ್ಳಿಚಿನ್ನದ ಬೆಲೆ ಮತ್ತೆ ಏರಿಕೆ: ಅಕ್ಟೋಬರ್ 20ರ ಬೆಲೆ ಎಷ್ಟಿದೆ ತಿಳಿದುಕೊಳ್ಳಿ

ಇಳಿಕೆಗೊಂಡ ಪ್ರಮುಖ ಷೇರುಗಳು:

ಇಳಿಕೆಗೊಂಡ ಪ್ರಮುಖ ಷೇರುಗಳು:

ಹಿಂಡಾಲ್ಕೊ, ಟೈಟಾನ್ ಕಂಪನಿ, ಹೆಚ್‌ಯುಎಲ್‌, ಬಿಪಿಸಿಎಲ್‌ ಮತ್ತು ಬಜಾಜ್ ಫಿನ್‌ಸರ್ವ್ ನಿಫ್ಟಿಯಲ್ಲಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಹೀಗೆ ಎಲ್ಲಾ ವಲಯ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ತಲಾ 2 ಪ್ರತಿಶತ ಕಳೆದುಕೊಂಡಿವೆ.

ಲಾಭಗಳಿಕೆಗೆ ಮುಂದಾದ ಹೂಡಿಕೆದಾರರು
 

ಲಾಭಗಳಿಕೆಗೆ ಮುಂದಾದ ಹೂಡಿಕೆದಾರರು

''ಕಳೆದ ಎರಡು ದಿನಗಳಲ್ಲಿ ವಿಶಾಲ ಮಾರುಕಟ್ಟೆಯಲ್ಲಿ ನಾವು ತೀವ್ರ ಮಾರಾಟವನ್ನು ಕಂಡಿದ್ದೇವೆ, ಮಿಡ್‌ಕ್ಯಾಪ್‌ಗಳು ಮತ್ತು ಸ್ಮಾಲ್ ಕ್ಯಾಪ್‌ಗಳು ಬಹಳ ಪಾಲು ಕುಸಿದವು. ಐಆರ್‌ಸಿಟಿಸಿ, ಐಇಎಕ್ಸ್, ಟಾಟಾ ಮೋಟಾರ್ಸ್, ಟಾಟಾ ಪವರ್, ದೀಪಕ್ ನೈಟ್ರೈಟ್ ಮುಂತಾದ ಹಲವು ಷೇರುಗಳು ಕಳೆದ 2 ದಿನಗಳಲ್ಲಿ ತೀವ್ರವಾಗಿ ಕರೆಕ್ಷನ್ ಆಗಿದೆ'' ಎಂದು ಏಂಜಲ್ ಒನ್ ಇಕ್ವಿಟಿ ಸಂಶೋಧನಾ ವಿಶ್ಲೇಷಕ ಯಶ್ ಗುಪ್ತಾ ಹೇಳಿದ್ದಾರೆ.

ನಿಫ್ಟಿ ನಿನ್ನೆ 18600 ರ ಗರಿಷ್ಠ ಮಟ್ಟದಿಂದ 1.7% ನಷ್ಟು ಇಳಿದು 18267 ಕ್ಕೆ ತಲುಪಿದೆ. ಬ್ಯಾಂಕ್ ನಿಫ್ಟಿ ಬಲವಾಗಿ ಉಳಿಸಿಕೊಂಡಿದ್ದು, ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಶೇ. 5 ಕ್ಕಿಂತಲೂ ಹೆಚ್ಚು ಇಳಿಕೆಯಾಗಿವೆ ಮತ್ತು ಹಲವಾರು ಸ್ಟಾಕ್‌ಗಳು 10% ಕ್ಕಿಂತಲೂ ಕಡಿಮೆಯಾಗಿವೆ.

 

ಐಆರ್‌ಸಿಟಿಸಿ ಷೇರು ಶೇಕಡಾ 32ರಷ್ಟು ಕುಸಿತ

ಐಆರ್‌ಸಿಟಿಸಿ ಷೇರು ಶೇಕಡಾ 32ರಷ್ಟು ಕುಸಿತ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ), ಇದು ಕಾರ್ಯನಿರ್ವಹಿಸುವ ವಿಭಾಗಗಳಲ್ಲಿ ಏಕಸ್ವಾಮ್ಯವನ್ನು ಹೊಂದಿದೆ. ಅಕ್ಟೋಬರ್ 19 ರಂದು ರೂ. 6,396.30 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಸತತ ಎರಡು ಟ್ರೇಡಿಂಗ್ ಸೆಶನ್‌ಗಳಲ್ಲಿ 32 ಪ್ರತಿಶತ ಕುಸಿದಿದೆ.

ಐಆರ್‌ಸಿಟಿಸಿ ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಅಡುಗೆ ಸೇವೆಗಳು, ಆನ್‌ಲೈನ್ ಟಿಕೆಟ್‌ಗಳು ಮತ್ತು ಪ್ಯಾಕೇಜ್ ಮಾಡಿದ ಕುಡಿಯುವ ನೀರನ್ನು ಒದಗಿಸಲು ಭಾರತೀಯ ರೈಲ್ವೆಯಿಂದ ಅಧಿಕಾರ ಪಡೆದ ಏಕೈಕ ಸಂಸ್ಥೆಯಾಗಿದೆ.

 

ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?

ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?

ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಸಣ್ಣ ಮತ್ತು ಮಿಡ್ ಕ್ಯಾಪ್ ಷೇರುಗಳ ಸ್ಥಿತಿ ಹೇಗಿದೆ?

ಸಣ್ಣ ಮತ್ತು ಮಿಡ್ ಕ್ಯಾಪ್ ಷೇರುಗಳ ಸ್ಥಿತಿ ಹೇಗಿದೆ?

ಹೆವಿವೇಯ್ಟ್‌ಗಳ ಜೊತೆಗೆ, ಸಣ್ಣ ಮತ್ತು ಮಿಡ್ ಕ್ಯಾಪ್ ಸ್ಟಾಕ್‌ಗಳಲ್ಲಿ ಬಹಳಷ್ಟು ಮಾರಾಟವಾಗಿದ್ದರ ಪರಿಣಾಮ, ಈ ಕಾರಣದಿಂದಾಗಿ ಬಿಎಸ್‌ಇ ಮತ್ತು ಎನ್‌ಎಸ್‌ಇಗಳ ಸಣ್ಣ ಮತ್ತು ಮಿಡ್ ಕ್ಯಾಪ್ ಸ್ಟಾಕ್ ಸೂಚ್ಯಂಕಗಳು ಕುಸಿದವು. ಇಂದು, ಬಿಎಸ್‌ಇ ಮಿಡ್‌ಕ್ಯಾಪ್ ಶೇಕಡಾ 1.91 ರಷ್ಟು ಕುಸಿದಿದ್ದರೆ, ಬಿಎಸ್‌ಇ ಸ್ಮಾಲ್ ಕ್ಯಾಪ್ ಶೇ. 2.31 ರಷ್ಟು ಕುಸಿದಿದೆ. ಮತ್ತೊಂದೆಡೆ, ನಿಫ್ಟಿ ಮಿಡ್‌ಕ್ಯಾಪ್ 100 ಶೇ 2.15 ರಷ್ಟು ಕುಸಿದಿದೆ. ಮತ್ತೊಂದೆಡೆ, ನಿಫ್ಟಿ ಸ್ಮಾಲ್‌ಕ್ಯಾಪ್ ಶೇ. 2.43 ರಷ್ಟು ಕುಸಿದಿದೆ.

English summary

Closing Bell: Sensex Down 456 Points, Nifty Ends Below 18300

Sensex was down 456.09 points or 0.74% at 61,259.96, and the Nifty was down 152.20 points or 0.83% at 18,266.60.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X