ಷೇರುಪೇಟೆಯಲ್ಲಿ ಬುಧವಾರ ವಹಿವಾಟು ಅಂತ್ಯಕ್ಕೆ ತಂತ್ರಜ್ಞಾನ, ಫಾರ್ಮಾ, ಪವರ್ ಕ್ಷೇತ್ರ ಹಾಗೂ ಗ್ರಾಹಕ ಸರಕುಗಳ ಷೇರುಗಳ ಇಳಿಕೆಯೊಂದಿಗೆ ಕೊನೆಗೊಂಡಿದೆ. ಭಾರತೀಯ ಇಕ್ವಿಟಿ ಮಾನದಂಡಗಳು ಬುಧವಾರ ಸತತ ಎರಡನೇ ದಿನಕ್ಕೆ ತಮ್ಮ ಕುಸಿತವನ್ನು ವಿಸ್ತರಿಸಿವೆ. 2021-22 (FY22) ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (Q4) ದೇಶದ ಆರ್ಥಿಕ ಬೆಳವಣಿಗೆಯು ಒಂದು ವರ್ಷದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 77.52 ಡಾಲರ್ ನಷ್ಟಿದೆ. ಭಾರತದ ಜಿಡಿಪಿ ನಾಲ್ಕನೇ ತ್ರೈಮಾಸಿಕದಲ್ಲಿ (Q4)ಕ್ಕೆ ಶೇ 4.1ರಷ್ಟಿದೆ. 30 ಷೇರು ಬಿಎಸ್ಇ ಸೂಚ್ಯಂಕ 185 ಅಂಶ ಅಥವಾ ಶೇ 0.33 ರಷ್ಟು ಕುಸಿತ ಕಂಡು 55,381ಕ್ಕೆ ಕೊನೆಗೊಂಡಿದೆ, ಎನ್ ಎಸ್ ಇ ನಿಫ್ಟಿಯಲ್ಲಿ 62 ಅಂಶ ಅಥವಾ ಶೇ 0.37 ಇಳಿಕೆಯಾಗಿ 16,523ಕ್ಕೆ ತಲುಪಿದೆ.
ನಿಫ್ಟಿ ಮಿಡ್ ಕ್ಯಾಪ್ 100 ಅಲ್ಪ ಮಟ್ಟದ ಏರಿಕೆ ಕಂಡಿದ್ದರೆ, ಸ್ಮಾಲ್ ಕ್ಯಾ ಶೇ 0.28ರಷ್ಟು ಏರಿಕೆಯಾಗಿದೆ.
ರಾಷ್ಟ್ರೀಯ ಸಂವೇದಿ ಸೂಚ್ಯಂಕದ 15 ಕ್ಷೇತ್ರಗಳ ಪೈಕಿ ನಿಫ್ಟಿ ಐಟಿ, ನಿಫ್ಟಿ ಫಾರ್ಮಾ ಹಾಗೂ ನಿಫ್ಟಿ ಮೂಲ ಸೌಕರ್ಯ ಕ್ಷೇತ್ರದ ಷೇರುಗಳು ಕುಸಿತ ಕಂಡಿವೆ ಕ್ರಮವಾಗಿ ಶೇ 1.41, ಶೇ 1.21 ಹಾಗೂ ಶೇ 0.72ರಷ್ಟು ಇಳಿಕೆಯಾಗಿವೆ.

ಬಜಾಜ್ ಆಟೋ ನಿಫ್ಟಿಯಲ್ಲಿ ಭಾರಿ ಕುಸಿತ ಕಂಡಿದೆ. ಶೇ 3.65 ರಷ್ಟು ಇಳಿಕೆಯಾಗಿ 3,723 ರು ತಲುಪಿದೆ. ಆಪೋಲೋ ಆಸ್ಪತ್ರೆ, ಹಿಂಡಾಲ್ಕೋ, ಟೆಕ್ ಮಹೀಂದ್ರಾ, ಬಜಾಜ್ ಫಿನ್ ಸರ್ವ್ ಹಿನ್ನಡೆ ಕಂಡಿವೆ.
ಒಟ್ಟಾರೆ, ಬಿಎಸ್ಇಯಲ್ಲಿ 1,471 ಷೇರು ಇಳಿಕೆ , 1854 ಏರಿಕೆ ಹಾದಿಯಲ್ಲಿವೆ. ನೆಸ್ಲೆ ಇಂಡಿಯಾ, ಟೆಕ್ ಎಂ, ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ಹಿಂದೂಸ್ತಾನ್ ಯೂನಿಲಿವರ್, ಪವರ್ ಗ್ರಿಡ್, ಅಲ್ಟ್ರಾಟೆಕ್ ಸಿಮೆಂಟ್, ಎಚ್ ಸಿಎಲ್ ಟೆಕ್, ಇನ್ಫೋಸಿಸ್, ವಿಪ್ರೋ, ಬಜಾಜ್ ಫೈನಾನ್ಸ್ ಹಾಗೂ ಡಾ ರೆಡ್ಡಿ ಅತ್ಯಂತ ಕುಸಿತ ಕಂಡ ಷೇರುಗಳಾಗಿವೆ.
ಭಾರತೀಯ ಜೀವ ವಿಮಾ ನಿಗಮ ಷೇರುಗಳು 810.55 ರು ತಲುಪಿದೆ. ಎಂ ಅಂಡ್ ಎಂ, ಎಚ್ ಡಿ ಎಫ್ ಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಸ್ಟೀಲ್, ಐಟಿಸಿ, ಎನ್ ಟಿ ಪಿಸಿ, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಷೇರುಗಳು ಏರಿಕೆ ಕಂಡಿವೆ.


Click it and Unblock the Notifications