Closing Bell: ಸೆನ್ಸೆಕ್ಸ್‌ 354 ಪಾಯಿಂಟ್ಸ್‌ ಕುಸಿತ, 15,700 ಮಟ್ಟಕ್ಕಿಂತ ಕೆಳಗಿಳಿದ ನಿಫ್ಟಿ

ಭಾರತೀಯ ಷೇರುಪೇಟೆ ಮಂಗಳವಾರ ನಕಾರಾತ್ಮಕ ವಹಿವಾಟು ಆರಂಭಿಸಿದ ಬಳಿಕ ದಿನದ ವಹಿವಾಟು ನಷ್ಟದೊಂದಿಗೆ ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 354 ಪಾಯಿಂಟ್ಸ್‌ ಕುಸಿತಗೊಂಡಿದ್ದು, ನಿಫ್ಟಿ 15,700 ಮಟ್ಟಕ್ಕಿಂತ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 354.89 ಪಾಯಿಂಟ್ಸ್‌ ಅಥವಾ ಶೇಕಡಾ 0.68ರಷ್ಟು ಇಳಿಕೆಗೊಂಡು 52,198.51 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ 120.30 ಪಾಯಿಂಟ್ಸ್‌ ಅಥವಾ ಶೇಕಡಾ 0.76 ಪಾಯಿಂಟ್ಸ್‌ ಕುಸಿದು 15632.10 ಪಾಯಿಂಟ್ಸ್‌ ಮುಟ್ಟಿದೆ.

Closing Bell: ಸೆನ್ಸೆಕ್ಸ್‌ 354 ಪಾಯಿಂಟ್ಸ್‌ ಕುಸಿತ

ದಿನದ ವಹಿವಾಟು ಅಂತ್ಯಕ್ಕೆ 1109 ಷೇರುಗಳು ಏರಿಕೆಗೊಂಡರೆ, 2056 ಷೇರುಗಳು ಕುಸಿದವು ಮತ್ತು 107 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಹಿಂಡಾಲ್ಕೊ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎನ್‌ಟಿಪಿಸಿ ಮತ್ತು ಭಾರ್ತಿ ಏರ್‌ಟೆಲ್ ನಿಫ್ಟಿಯಲ್ಲಿ ಅಗ್ರಸ್ಥಾನಗಳಿಸಿದ ಷೇರುಗಳಾಗಿದ್ದು, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಯುಎಲ್, ಗ್ರೇಸಿಯಂ ಮತ್ತು ಮಾರುತಿ ಸುಜುಕಿ ಹೆಚ್ಚಿನ ಲಾಭಗಳಿಸಿವೆ.

ಎಫ್‌ಎಂಸಿಜಿ ಹೊರತುಪಡಿಸಿ ಉಳಿದೆಲ್ಲ ಸೂಚ್ಯಂಕಗಳು ಕಡಿಮೆಯಾಗಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಕುಸಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+