1,000 ಅಂಕ ಏರಿದ ಸೆನ್ಸೆಕ್ಸ್: ಷೇರುಪೇಟೆ ಓಟ ಮತ್ತೆ ಶುರು

ಷೇರು ಮಾರುಕಟ್ಟೆಯು ತನ್ನ ಬಿರುಸಿನ ಓಟವನ್ನು ಮತ್ತೆ ಆರಂಭ ಮಾಡಿದೆ. ಸೋಮವಾರ ಹಾಗೂ ಮಂಗಳವಾರ ಕುಸಿತ ಕಂಡಿದ್ದ ಷೇರುಪೇಟೆ ಬುಧವಾರದಿಂದ ಏರಿಕೆ ಕಾಣಲು ಆರಂಭಿಸಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ಭಾರೀ ಏರಿಕೆಯಾಗಿದೆ.

ಅದರಲ್ಲೂ ಮುಖ್ಯವಾಗಿ ಟೆಕ್ನಾಲಜಿ ಹಾಗೂ ಫೈನಾನ್ಶಿಯಲ್ ಸ್ಟಾಕ್‌ಗಳು ಹೆಚ್ಚು ಏರಿಕೆ ಕಂಡು ಷೇರುಪೇಟೆಗೆ ಬಲತುಂಬಿದೆ. ಇಂದು ಆರಂಭಿಕ ವಹಿವಾಟಿನಲ್ಲೇ ಷೇರು ಮಾರುಕಟ್ಟೆ ಶುಭಾರಂಭ ಕಂಡಿದೆ. ಅದನ್ನು ಕೊನೆಯವರೆಗೂ ಕಾಯ್ದುಕೊಂಡಿದೆ. ಯುಎಸ್‌ ಫೆಡರಲ್ ದರ ಭಾರೀ ಪ್ರಮಾಣದಲ್ಲಿ ಏರಿಕೆ ಆಗದು ಎಂಬ ಸುದ್ದಿಯ ಬೆನ್ನಲ್ಲೇ ಹೂಡಿಕೆದಾರರು ಸ್ಟಾಕ್ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.

ಗುರುವಾರ ವಹಿವಾಟಿನ ಅಂತ್ಯದಲ್ಲಿ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 1,006 ಅಂಕ ಅಥವಾ ಶೇಕಡ 1.80ರಷ್ಟು ಏರಿ 56,822ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 274 ಅಂಕ ಅಥವಾ ಶೇಕಡ 1.65ರಷ್ಟು ಹೆಚ್ಚಾಗಿ 16,916ಕ್ಕೆ ವಹಿವಾಟು ಅಂತ್ಯ ಮಾಡಿದೆ. ಆರಂಭಿಕ ವಹಿವಾಟಿನಲ್ಲಿ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 525 ಅಂಕ ಅಥವಾ ಶೇಕಡ 0.94ಕ್ಕೆ ಏರಿ 56,342ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 140 ಅಂಕ ಅಥವಾ ಶೇಕಡ 0.84ರಷ್ಟು ಹೆಚ್ಚಾಗಿ 16,782ಕ್ಕೆ ತಲುಪಿದೆ.

ನಿಫ್ಟಿ ಮಿಡ್‌, ಸ್ಮಾಲ್ ಕ್ಯಾಪ್ ಏರಿಕೆ

ನಿಫ್ಟಿ ಮಿಡ್‌, ಸ್ಮಾಲ್ ಕ್ಯಾಪ್ ಏರಿಕೆ

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.84ರಷ್ಟು ಏರಿಕೆಯಾಗಿದ್ದರೆ, ಸ್ಮಾಲ್ ಕ್ಯಾಪ್ ಶೇಕಡ 0.75ರಷ್ಟು ಹೆಚ್ಚಳವಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 13 ಲಾಭವನ್ನು ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಐಟಿ, ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್, ನಿಫ್ಟಿ ಬ್ಯಾಂಕ್ ಕ್ರಮವಾಗಿ ಶೇಕಡ 2.54, ಶೇಕಡ 2.05, ಶೇಕಡ 1.42 ಏರಿಕೆಯಾಗಿದೆ. ವಹಿವಾಟಿನ ಆರಂಭದಲ್ಲಿ ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್, ನಿಫ್ಟಿ ಐಟಿ ಕ್ರಮವಾಗಿ ಶೇಕಡ 1.03, ಶೇಕಡ 1.26, ಶೇಕಡ 1.37 ಏರಿಕೆಯಾಗಿದೆ.

ಬಜಾಜ್ ಫೈನಾನ್ಸ್ ಟಾಪ್ ನಿಫ್ಟಿ ಗೇನರ್

ಬಜಾಜ್ ಫೈನಾನ್ಸ್ ಟಾಪ್ ನಿಫ್ಟಿ ಗೇನರ್

ಷೇರು ಮಾರುಕಟ್ಟೆಯಲ್ಲಿ ಬಜಾಜ್ ಫೈನಾನ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಬಜಾಜ್ ಫೈನಾನ್ಸ್ ಷೇರು ಶೇಕಡಾ 9.45 ರಷ್ಟು ಏರಿಕೆಯಾಗಿ ರೂಪಾಯಿ 7,000.75 ಕ್ಕೆ ತಲುಪಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿಯೂ ಕೂಡಾ ಬಜಾಜ್ ಫೈನಾನ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಷೇರುಗಳು ಶೇಕಡಾ 5.43 ರಷ್ಟು ಏರಿಕೆಯಾಗಿ ರೂಪಾಯಿ 6,743.45 ಕ್ಕೆ ತಲುಪಿತ್ತು. ಶ್ರೀ ಸಿಮೆಂಟ್ ಟಾಪ್ ಲೂಸರ್ ಆಗಿದೆ. ಶ್ರೀ ಸಿಮೆಂಟ್ ಷೇರುಗಳು ಶೇಕಡ 2.89ರಷ್ಟು ಇಳಿಕೆಯಾಗಿ ರೂಪಾಯಿ 20,415 ಆಗಿದೆ. ಬಜಾಜ್ ಫಿನ್‌ಸರ್ವ್, ಟಾಟಾ ಸ್ಟೀಲ್, ನೆಸ್ಲೆ ಇಂಡಿಯಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕೂಡ ಲಾಭ ಗಳಿಸಿದೆ.

ಯಾವ ಷೇರು ಏರಿಕೆ, ಯಾವುದು ಇಳಿಕೆ?

ಯಾವ ಷೇರು ಏರಿಕೆ, ಯಾವುದು ಇಳಿಕೆ?

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,209 ಷೇರುಗಳು ಕುಸಿತ ಕಂಡರೆ, 1,964 ಷೇರುಗಳು ಏರಿಕೆಯಾಗಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ನೆಸ್ಲೆ ಇಂಡಿಯಾ, ಇನ್ಫೋಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ, ಏಷ್ಯನ್ ಪೇಂಟ್ಸ್, ಟಿಸಿಎಸ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಷೇರುಗಳು ಏರಿಕೆಯಾಗಿದೆ. ಆದರೆ ಡಾ.ರೆಡ್ಡೀಸ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್ ಮತ್ತು ಎಲ್‌ಅಂಡ್‌ಟಿ ಷೇರುಗಳು ಇಳಿಕೆಯಾಗಿದೆ.

ಎಲ್‌ಐಸಿ ಷೇರು ಹೇಗಿದೆ?

ಎಲ್‌ಐಸಿ ಷೇರು ಹೇಗಿದೆ?

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 0.38 ರಷ್ಟು ಏರಿಕೆಯಾಗಿ ರೂಪಾಯಿ 677.05 ಕ್ಕೆ ವಹಿವಾಟು ಅಂತ್ಯ ಮಾಡಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಶೇಕಡ 0.56 ರಷ್ಟು ಏರಿಕೆಯಾಗಿ ರೂಪಾಯಿ 678.25ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+