ಸತತ ಐದನೇ ದಿನ ಷೇರು ಮಾರುಕಟ್ಟೆಯು ಏರಿಕೆಯನ್ನು ಕಂಡಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆ ವಹಿವಾಟಿನ ಅಂತ್ಯದಲ್ಲಿ ಏರಿಕೆಯನ್ನು ಕಂಡಿದೆ. ಯುರೋಪ್‌ಗೆ ರಷ್ಯಾದಿಂದ ಅನಿಲ ಸರಬರಾಜು ಮತ್ತೆ ಆರಂಭವಾ ಬಳಿಕ ಜಾಗತಿಕ ಸ್ಟಾಕ್ ಮಾರುಕಟ್ಟೆ ಏರಿಕೆ ಕಂಡಿದೆ. ಏಷ್ಯನ್ ಷೇರುಗಳು ಏರಿಳಿತ ಕಂಡಿದೆ.
ಮುಖ್ಯವಾಗಿ ಬ್ಯಾಂಕ್, ಟೆಕ್ನಾಲಜಿ ಹಾಗೂ ಕನ್ಸ್ಯೂಮರ್ ಸ್ಟಾಕ್‌ಗಳು ಭಾರತದ ಷೇರು ಮಾರುಕಟ್ಟೆಗೆ ಬಲತುಂಬಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕ 284 ಅಂಕ ಅಥವಾ ಶೇಕಡ 0.51ರಷ್ಟು ಏರಿಕೆಯಾಗಿ 55,682ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಫ್ಟಿ 84 ಅಂಕ ಅಥವಾ ಶೇಕಡ 0.51ರಷ್ಟು ಏರಿಕೆಯಾಗಿ 16,605ಕ್ಕೆ ತಲುಪಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 1.38ರಷ್ಟು ಏರಿಕೆಯಾಗಿದೆ, ಸ್ಮಾಲ್ ಕ್ಯಾಪ್ ಶೇಕಡ 0.77ರಷ್ಟು ಏರಿಕೆಯಾಗಿದೆ.
15 ಸೆಕ್ಟರ್ ಗೇಜ್‌ಗಳಲ್ಲಿ 13 ಲಾಭವನ್ನು ದಾಖಲಿಸಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್, ನಿಫ್ಟಿ ಎಫ್‌ಎಂಸಿಜಿ, ನಿಫ್ಟಿ ಐಟಿ, ನಿಪ್ಟಿ ಆಯಿಲ್ & ಗ್ಯಾಸ್ ಕ್ರಮವಾಗಿ ಶೇಕಡ 0.64, ಶೇಕಡ 0.79, ಶೇಕಡ 0.70, ಶೇಕಡ 0.98ರಷ್ಟು ಏರಿಕೆಯಾಗಿದೆ. ನಿಫ್ಟಿ ಫಾರ್ಮಾ, ನಿಫ್ಟಿ ಹೆಲ್ತ್‌ಕೇರ್ ಕ್ರಮವಾಗಿ ಶೇಕಡ 0.47, ಶೇಕಡ 0.18ರಷ್ಟು ಇಳಿಕೆಯಾಗಿದೆ.
ಇಂಡಸ್‌ಇಂಡ್ ಬ್ಯಾಂಕ್ ಟಾಪ್ ನಿಫ್ಟಿ ಗೇನರ್
ಇಂಡಸ್‌ಇಂಡ್ ಬ್ಯಾಂಕ್ ಟಾಪ್ ನಿಫ್ಟಿ ಗೇನರ್ ಆಗಿದೆ. ಇಂಡಸ್‌ಇಂಡ್ ಬ್ಯಾಂಕ್ ಸ್ಟಾಕ್‌ಗಳು ಶೇಕಡ 8.10ರಷ್ಟು ಏರಿಕೆಯಾಗಿ, ರೂಪಾಯಿ 950.50ಕ್ಕೆ ತಲುಪಿದೆ. ಜೂನ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಇಂಡಸ್‌ಇಂಡ್ ಬ್ಯಾಂಕ್ ನಿವ್ವಳ ಆದಾಯವು ಶೇಕಡ 60.5ರಷ್ಟು ಏರಿಕೆಯಾಗಿದೆ ಎಂಬ ವರದಿಯ ಬೆನ್ನಲ್ಲೇ ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಒಟ್ಟಾಗಿ 2,007 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,332 ಷೇರುಗಳು ಇಳಿಕೆಯಾಗಿದೆ.
ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?
ಬಜಾಜ್ ಫೈನಾನ್ಸ್, ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್, ಯುಪಿಎಲ್, ಎಲ್&ಟಿ ಕೂಡಾ ಲಾಭವನ್ನು ಕಂಡಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಇಂಡಸ್‌ಇಂಡ್ ಬ್ಯಾಂಕ್, ಬಜಾಜಾ ಫೈನಾನ್ಸ್, ಬಜಾಜಾ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಎಲ್&ಟಿ, ಆಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್, ನೆಸ್ಲೆ ಇಂಡಿಯಾ, ಭಾರ್ತಿ ಏರ್‌ಟೆಲ್, ಇನ್ಫೋಸಿಸ್, ಎಂ&ಎಂ ಷೇರುಗಳು ಶೇಕಡ 7.88ರಷ್ಟು ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಡಾ. ರೆಡ್ಡೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ರಿಲಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ನಷ್ಟವನ್ನು ಕಂಡಿದೆ.
ಎಲ್‌ಐಸಿ ಷೇರು ಕುಸಿತ
ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ಅತೀ ದೊಡ್ಡ ಹೂಡಿಕೆದಾರ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಗುರುವಾರ ವಹಿವಾಟಿನ ಅಂತ್ಯದಲ್ಲಿ ಮತ್ತೆ ಕುಸಿತ ಕಂಡಿದೆ. ಎಲ್‌ಐಸಿ ಷೇರುಗಳು ಶೇಕಡ 0.04ರಷ್ಟು ಕುಸಿತ ಕಂಡು ರೂಪಾಯಿ 687.55ಕ್ಕೆ ತಲುಪಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರು ಶೇಕಡ 0.43ರಷ್ಟು ಏರಿಕೆಯಾಗಿ ರೂಪಾಯಿ 690.80ಕ್ಕೆ ತಲುಪಿತ್ತು.


Click it and Unblock the Notifications