ಭಾರತದ ಷೇರು ಮಾರುಕಟ್ಟೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ನಷ್ಟವನ್ನು ಕಂಡಿದ್ದು, ವಹಿವಾಟಿನ ಅಂತ್ಯದಲ್ಲಿ ಮೂರು ಸೆಷನ್‌ಗಳ ನಷ್ಟಗಳಿಗೆ ತೆರೆ ಎಳೆದಿದೆ. ಮೂರು ಸೆಷನ್‌ಗಳಲ್ಲಿ ಷೇರು ಮಾರುಕಟ್ಟೆ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದ್ದವು. ಆದರೆ ಸೋಮವಾರ ಕನ್ಸ್ಯೂಮರ್, ಬ್ಯಾಂಕ್ ಹಾಗೂ ಹಣಕಾಸು ಸ್ಟಾಕ್‌ಗಳಲ್ಲಿ ಏರಿಕೆಯ ಕಾರಣದಿಂದಾಗಿ ಷೇರು ಮಾರುಕಟ್ಟೆ ಜಿಗಿತ ಕಂಡಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 327 ಅಂಕ ಅಥವಾ ಶೇಕಡ 0.62 ಏರಿಕೆ ಕಂಡು 53,235ಕ್ಕೆ ವಹಿವಾಟು ನಿಲ್ಲಿಸಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 83 ಅಂಕ ಅಥವಾ ಶೇಕಡ 0.53ರಷ್ಟು ಏರಿಕೆಯಾಗಿ 15,835 ಸ್ಥಿರವಾಗಿದೆ. ಸೆನ್ಸೆಕ್ಸ್ ಒಟ್ಟಾರೆಯಾಗಿ ಇಂದು ವಹಿವಾಟಿನ ಮಧ್ಯದಲ್ಲಿ 627 ಅಂಕ ಹೆಚ್ಚಳವಾಗಿದೆ.
ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಷೇರುಗಳು ಕೂಡಾ ಏರಿಕೆ ಕಂಡಿದೆ. ನಿಫ್ಟಿ ಮಿಡ್ ಕ್ಯಾಪ್ 100 ಶೇಕಡ 0.69ರಷ್ಟು ಏರಿಕೆಯಾದರೆ, ಸ್ಮಾಲ್ ಕ್ಯಾಪ್ ಶೇಕಡ 0.64ರಷ್ಟು ಹೆಚ್ಚಳವಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ ಒಂಬತ್ತು ಲಾಭವನ್ನು ಕಂಡಿದೆ.
ನಿಫ್ಟಿ ಬ್ಯಾಂಕ್, ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್ಸ್ ಏರಿಕೆ
ನಿಫ್ಟಿ ಎಫ್ಎಂಸಿಜಿ, ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್ಸ್, ನಿಫ್ಟಿ ಬ್ಯಾಂಕ್, ನಿಫ್ಟಿ ಫಿನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ ಶೇಕಡ 2.66, 0.ಶೇಕಡ 77, ಶೇಕಡ 1.20, ಶೇಕಡ 0.93ರಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಮೆಟಲ್, ನಿಫ್ಟಿ ಐಟಿ, ನಿಫ್ಟಿ ಆಯಿಲ್ & ಗ್ಯಾಸ್ ಕ್ರಮವಾಗಿ ಶೇಕಡ 0.99, ಶೇಕಡ 0.62, ಶೇಕಡ 0.41ರಷ್ಟು ಇಳಿಕೆಯಾಗಿದೆ.
ಹಿಂದೂಸ್ತಾನ್ ಯೂನಿಲಿವರ್ ಟಾಪ್ ಗೇನರ್
ಹಿಂದೂಸ್ತಾನ್ ಯೂನಿಲಿವರ್ ಟಾಪ್ ನಿಫ್ಟಿ ಗೇನರ್ ಆಗಿದೆ. ಹಿಂದೂಸ್ತಾನ್ ಯೂನಿಲಿವರ್ ಸ್ಟಾಕ್‌ಗಳು ಶೇಕಡ 3.84ರಷ್ಟು ಏರಿಕೆ ಕಂಡು ರೂಪಾಯಿ 2,370ಕ್ಕೆ ತಲುಪಿದೆ. ಇನ್ನು ಇಂಡಸ್‌ಇಂಡ್ ಬ್ಯಾಂಕ್, ಬ್ರಿಟಾನಿಯಾ, ಐಟಿಸಿ, ಐಸಿಐಸಿಐ ಬ್ಯಾಂಕ್ ಕೂಡಾ ಲಾಭವನ್ನು ಕಂಡಿದೆ. ಬಿಎಸ್‌ಇಯಲ್ಲಿ 2,026 ಷೇರುಗಳು ಏರಿಕೆ ಕಂಡರೆ, ಈ ಸಂದರ್ಭದಲ್ಲೇ 1,360 ಷೇರುಗಳು ನಷ್ಟವನ್ನು ಕಂಡಿದೆ.
ಯಾವೆಲ್ಲಾ ಷೇರುಗಳು ಏರಿಕೆ, ಯಾವುದು ಇಳಿಕೆ?
30 ಷೇರುಗಳು ಬಿಎಸ್‌ಇ ಸೂಚ್ಯಂಕದಲ್ಲಿ ಎಚ್‌ಯುಎಲ್, ಇಂಡಸ್‌ಇಂಡ್ ಬ್ಯಾಂಕ್, ಐಟಿಸಿ, ಐಸಿಐಸಿಐ ಬ್ಯಾಂಕ್ ಪವರ್‌ಗ್ರಿಡ್, ಎಸ್‌ಬಿಐ, ಆಕ್ಸಿಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್, ಎನ್‌ಟಿಪಿಸಿ, ಟೈಟಾನ್, ನೆಸ್ಟ್ಲೆ ಇಂಡಿಯಾ ಷೇರುಗಳು ಶೇಕಡ 3.78ರಷ್ಟು ಹೆಚ್ಚಳವಾಗಿದೆ. ಈ ನಡುವೆ ಡಾಲರ್ ಎದುರು ರೂಪಾಯಿ ಚೇತರಿಕೆ ಕಂಡಿದೆ. ಸಿಪ್ಲಾ, ಟಿಸಿಎಸ್, ಟಾಟಾ ಸ್ಟೀಲ್, ಒಎನ್‌ಜಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್, ವಿಪ್ರೋ, ಟೆಕ್ ಮಹೀಂದ್ರಾ, ಎಂ&ಎಂ, ಡಾ.ರೆಡ್ಡೀಸ್ ನಷ್ಟವನ್ನು ಕಂಡಿದೆ.
ಎಲ್‌ಐಸಿ ಷೇರು ಮತ್ತೆ ಏರಿಕೆ
ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇಕಡ 2.33ರಷ್ಟು ಹೆಚ್ಚಳವಾಗಿ ರೂಪಾಯಿ 692.50ಕ್ಕೆ ತಲುಪಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿಯೂ ಎಲ್‌ಐಸಿ ಷೇರು ಜಿಗಿದಿದೆ. ಷೇರುಗಳು ಶೇ 0.73 ರಷ್ಟು ಏರಿಕೆಯಾಗಿ ರೂಪಾಯಿ 681.70ರಲ್ಲಿ ವಹಿವಾಟು ಆರಂಭಿಸಿದೆ. ವಹಿವಾಟ ಅಂತ್ಯದಲ್ಲೂ ಏರಿದೆ.


Click it and Unblock the Notifications