ನಾಲ್ಕು ದಿನಗಳ ಕಾಲ ಕುಸಿತವನ್ನು ಕಂಡಿದ್ದ ಷೇರು ಮಾರುಕಟ್ಟೆ ಶುಕ್ರವಾರ (ಜುಲೈ 15) ವಹಿವಾಟಿನ ಅಂತ್ಯದಲ್ಲಿ ಚೇತರಿಕೆ ಕಂಡಿದೆ. ಕನ್ಸ್ಯೂಮರ್ ಗೂಡ್ಸ್ ಹಾಗೂ ಆಟೋಮೊಬೈಲ್ ಷೇರುಗಳು ಏರಿಕೆಯಾಗಿ ಷೇರು ಮಾರುಕಟ್ಟೆಗೆ ಬಲ ತುಂಬಿದೆ. ಆದರೆ ಲೋಹ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರುಗಳು ಕುಸಿತವನ್ನು ಕಂಡಿದೆ.
ಪ್ರಸ್ತುತ ಜಾಗತಿಕ ಬ್ರೆಂಟ್ ತೈಲ ಪ್ರತಿ ಬ್ಯಾರೆಲ್ ದರವು 100 ಡಾಲರ್‌ಗಿಂತ ಕಡಿಮೆಯಾಗಿದೆ. ಇದು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ. ಹೂಡಿಕೆದಾರರು ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಕೊಂಚ ಆಸಕ್ತಿ ತೋರುತ್ತಿದ್ದಾರೆ. ಇಂದು (ಜುಲೈ 15) ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 99.82 ಡಾಲರ್‌ನಂತಿದೆ.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರ 345 ಅಂಕ ಅಥವಾ ಶೇಕಡಾ 0.65 ರಷ್ಟು ಏರಿಕೆಯಾಗಿ 53,761 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 111 ಅಂಕ ಅಥವಾ 0.69ರಷ್ಟು ಏರಿಕೆ ಕಂಡು 16,049ಕ್ಕೆ ವಹಿವಾಟು ಅಂತ್ಯ ಮಾಡಿದೆ. 1,776 ಷೇರುಗಳು ಏರಿಕೆಯನ್ನು ಕಂಡಿದ್ದರೆ, ಇದೇ ಸಂದರ್ಭದಲ್ಲೇ 1,505 ಷೇರುಗಳು ಕುಸಿತವನ್ನು ಕಂಡಿದೆ.
ನಿಫ್ಟಿಯಲ್ಲಿ ಏರಿಳಿತ ಹೇಗಿದೆ?
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.77 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.37 ರಷ್ಟು ಏರಿಕೆಯಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 12 ಏರಿಕೆಯನ್ನು ದಾಖಲಿಸಿದೆ. ನಿಫ್ಟಿ ಎಫ್‌ಎಂಸಿಜಿ ಮತ್ತು ನಿಫ್ಟಿ ಆಟೋ ಕ್ರಮವಾಗಿ ಶೇಕಡಾ 1.47 ಮತ್ತು ಶೇಕಡಾ 2.03 ರಷ್ಟು ಏರಿಕೆ ಕಂಡಿದೆ. ಇದೇ ಸಂದರ್ಭದಲ್ಲಿ ನಿಫ್ಟಿ ಮೆಟಲ್, ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ಐಟಿ ಕ್ರಮವಾಗಿ ಶೇ. 0.81, ಶೇ.0.43 ಮತ್ತು ಶೇ.0.15ರಷ್ಟು ಕುಸಿದಿದೆ.
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಟಾಪ್ ನಿಫ್ಟಿ ಗೇನರ್
ಸ್ಟಾಕ್ ಮಾರುಕಟ್ಟೆಯಲ್ಲಿ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಷೇರುಗಳು ಶೇಕಡಾ 3.27 ರಷ್ಟು ಏರಿಕೆಯಾಗಿ ರೂಪಾಯಿ 790.90ಕ್ಕೆ ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್, ಟೈಟಾನ್, ಟಾಟಾ ಮೋಟಾರ್ಸ್ ಮತ್ತು ಎಲ್ & ಟಿ ಕೂಡಾ ಲಾಭವನ್ನು ಕಂಡಿದೆ.
ಯಾವೆಲ್ಲಾ ಷೇರುಗಳು ಏರಿಕೆ, ಯಾವುದು ಇಳಿಕೆ?
30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಎಚ್‌ಯುಎಲ್, ಟೈಟಾನ್, ಮಾರುತಿ, ಎಲ್&ಟಿ, ಎಚ್‌ಡಿಎಫ್‌ಸಿ, ಎಂ&ಎಂ, ನೆಸ್ಲೆ ಇಂಡಿಯಾ, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಐಟಿಸಿ ಷೇರುಗಳು ಶೇಕಡ 2.87ರಷ್ಟು ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಟಾಟಾ ಸ್ಟೀಲ್, ಪೊವೆಗ್ರಿಡ್, ಎಚ್‌ಸಿಎಲ್ ಟೆಕ್, ವಿಪ್ರೋ, ಡಾ ರೆಡ್ಡೀಸ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಟಿಸಿಎಸ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟವನ್ನು ದಾಖಲಿಸಿದೆ.
ಎಲ್‌ಐಸಿ ಷೇರು ಹೇಗಿದೆ?
ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇಕಡಾ 0.51 ರಷ್ಟು ಕುಸಿದು ರೂಪಾಯಿ 708.55 ಕ್ಕೆ ತಲುಪಿ ವಹಿವಾಟು ಅಂತ್ಯ ಮಾಡಿದೆ. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಏರಿಕೆ ಕಂಡಿದ್ದವು. ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಷೇರುಗಳು ಶೇಕಡ 0.29 ರಷ್ಟು ಏರಿಕೆಯಾಗಿ ರೂಪಾಯಿ 714.20ಕ್ಕೆ ತಲುಪಿತ್ತು.


Click it and Unblock the Notifications