ಸತತ ಆರನೇ ಸೆಷನ್‌ನಲ್ಲಿ ಷೇರು ಮಾರುಕಟ್ಟೆಯು ಏರಿಕೆಯನ್ನು ಕಂಡಿದೆ. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ಏರಿಕೆಯನ್ನು ಕಂಡಿದೆ. ವಹಿವಾಟಿನ ಅಂತ್ಯದಲ್ಲೂ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಪ್ರಮುಖವಾಗಿ ಬ್ಯಾಂಕ್ ಹಾಗೂ ಫೈನಾನ್ಶಿಯಲ್ ಸ್ಟಾಕ್‌ಗಳು ಏರಿಕೆ ಕಂಡಿದೆ.
ಯುಎಸ್ ಫೆಡರಲ್ ರಿಸರ್ವ್ ಈ ಹಣದುಬ್ಬರದ ನಡುವೆ ದರವನ್ನು ಏರಿಕೆ ಮಾಡುವ ಬಗ್ಗೆ ಹೂಡಿಕೆದಾರರಲ್ಲಿ ಆತಂಕವಿದೆ. ಈ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ಏಷ್ಯನ್ ಷೇರುಗಳು ಮಿಶ್ರವಾಗಿದೆ. ಕೆಲವು ಷೇರುಗಳು ಏರಿದರೆ, ಕೆಲವು ಇಳಿಕೆ ಕಂಡಿದೆ. ಯುಎಸ್ ಸ್ಟಾಕ್ ಫ್ಯೂಚರ್ಸ್ ಕಳೆದ ವಹಿವಾಟಿನಲ್ಲಿ ಇಳಿಕೆ ಕಂಡಿದೆ. ಮುಂದಿನ ವಾರದಲ್ಲಿ ಯುಎಸ್ ಫೆಡರಲ್ ರಿಸರ್ವ್ ಸುಮಾರು 75 ಮೂಲಾಂಕ ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 390 ಅಂಕ ಅಥವಾ ಶೇಕಡ 0.70ರಷ್ಟು ಏರಿಕೆಯಾಗಿ 56,072ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 114 ಅಂಕ ಅಥವಾ ಶೇಕಡ 0.69ರಷ್ಟು ಹೆಚ್ಚಳವಾಗಿ 16,719ಕ್ಕೆ ವಹಿವಾಟು ಅಂತ್ಯ ಮಾಡಿದೆ. ಆರಂಭಿಕ ವಹಿವಾಟಿನಲ್ಲಿ 30 ಷೇರು ಬಿಎಸ್‌ಇ 233 ಅಂಕ ಅಥವಾ ಶೇಕಡ 0.42ರಷ್ಟು ಏರಿಕೆಯಾಗಿ 55,915ಕ್ಕೆ ತಲುಪಿದೆ. ಇದೇ ಸಂದರ್ಭದಲ್ಲಿ ಎನ್‌ಎಸ್‌ಇ ನಿಫ್ಟಿ 72 ಅಂಕ ಅಥವಾ ಶೇಕಡ 0.44ರಷ್ಟು ಏರಿಕೆಯಾಗಿ 16,678ಕ್ಕೆ ತಲುಪಿದೆ. ಷೇರು ಪೇಟೆಯಲ್ಲಿ ಯಾವ ಷೇರು ಏರಿಕೆಯಾಗಿದೆ, ಯಾವುದು ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ಮುಂದೆ ಓದಿ...
ನಿಫ್ಟಿ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್
ನಿಫ್ಟಿ ಮಿಡ್‌ಕ್ಯಾಪ್ 100 ಸ್ಥಿರವಾಗಿದ್ದರೆ, ಸ್ಮಾಲ್ ಕ್ಯಾಪ್ ಶೇಕಡ 0.37ರಷ್ಟು ಏರಿಕೆಯಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 11 ಲಾಭವನ್ನು ಕಂಡಿದೆ. ನಿಫ್ಟಿ ಬ್ಯಾಂಕ್, ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ ಶೇಕಡ 1.49, ಶೇಕಡ 1.55ರಷ್ಟು ಏರಿಕೆಯಾಗಿದೆ. ನಿಫ್ಟಿ ಐಟಿ, ನಿಫ್ಟಿ ಫಾರ್ಮಾ ಕ್ರಮವಾಗಿ ಶೇಕಡ 0.62, ಶೇಕಡ O.27ರಷ್ಟು ಇಳಿಕೆಯಾಗಿದೆ.
ಯಾವ ಸ್ಟಾಕ್ ಟಾಪ್ ನಿಫ್ಟಿ ಗೇನರ್?
ಅಲ್ಟ್ರಾಟೆಕ್ ಸಿಮೆಂಟ್ ಟಾಪ್ ನಿಫ್ಟಿ ಗೇನರ್ ಆಗಿದೆ. ಅಲ್ಟ್ರಾಟೆಕ್ ಸಿಮೆಂಟ್ ಷೇರು ಶೇಕಡ 4.90ರಷ್ಟು ಏರಿಕೆಯಾಗಿ, ರೂಪಾಯಿ 6,431.20ಕ್ಕೆ ತಲುಪಿದೆ. ಜೂನ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ನಿವ್ವಳ ಮಾರಾಟ ಸುಮಾರು ಶೇಕಡ 28ರಷ್ಟು ಏರಿಕೆಯಾಗಿದೆ. ಈ ವರದಿಯ ಬೆನ್ನಲ್ಲೇ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಏರಿಕೆ ಕಂಡಿದೆ. ಯುಪಿಲ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ಟಾಪ್ ಗೇನರ್‌ಗಳಾಗಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಹೇಗಿದೆ?
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಒಟ್ಟು 1,787 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,535 ಷೇರುಗಳು ಇಳಿಕೆಯಾಗಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಡಿಎಫ್‌ಸಿ ಟ್ವಿನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೈಟಾನ್, ಕೋಟಕ್ ಮಹೀಂದ್ರಾ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಎಂ&ಎಂ ಷೇರುಗಳು ಶೇಕಡ 5.03ರಷ್ಟು ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಇನ್ಫೋಸಿಸ್, ಎನ್‌ಟಿಪಿಸಿ, ಪವರ್‌ಗ್ರಿಡ್, ವಿಪ್ರೋ, ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜಿ, ಟಿಸಿಎಸ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್ ಸ್ಟಾಕ್‌ಗಳು ಇಳಿಕೆಯಾಗಿದೆ.
ಎಲ್‌ಐಸಿ ಷೇರು ಏರಿಕೆ
ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ಅತೀ ದೊಡ್ಡ ಹೂಡಿಕೆದಾರ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಏರಿಕೆಯನ್ನು ಕಂಡಿದೆ. ಎಲ್‌ಐಸಿ ಷೇರುಗಳು ಶುಕ್ರವಾರ ವಹಿವಾಟಿನ ಆರಂಭದಲ್ಲಿ ಎಲ್‌ಐಸಿ ಷೇರುಗಳು ಶೇಕಡ 0.57ರಷ್ಟು ಏರಿಕೆಯಾಗಿ, ರೂಪಾಯಿ 691.45ಕ್ಕೆ ತಲುಪಿದೆ. ವಹಿವಾಟಿನ ಅಂತ್ಯದಲ್ಲಿಯೂ ಎಲ್‌ಐಸಿ ಷೇರುಗಳು ಶೇಕಡ 0.20ರಷ್ಟು ಏರಿಕೆಯಾಗಿ ರೂಪಾಯಿ 688.95ಕ್ಕೆ ವಹಿವಾಟು ಅಂತ್ಯ ಮಾಡಿದೆ.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications