ಷೇರು ಮಾರುಕಟ್ಟೆ ಸತತ ಮೂರನೇ ಸೆಷನ್‌ನಲ್ಲಿ ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಪ್ರಮುಖವಾಗಿ ಟೆಕ್, ಮೆಟಲ್ ಸ್ಟಾಕ್‌ಗಳು ಏರಿಕೆ ಕಂಡಿದೆ. ಶುಕ್ರವಾರ ವಾಲ್‌ಸ್ಟ್ರೀಟ್ ಲಾಭದೊಂದಿಗೆ ವಹಿವಾಟು ಕೊನೆ ಮಾಡಿದ್ದು, ಸೋಮವಾರ ಷೇರು ಮಾರುಕಟ್ಟೆ ಜಿಗಿತ ಕಂಡಿದೆ.
ಹಣದುಬ್ಬರದ ಏರಿಕೆಯ ಆತಂಕದ ನಡುವೆ ಜಾಗತಿಕ ಕಚ್ಚಾ ತೈಲ ದರವು ಕೊಂಚ ಇಳಿಕೆ ಕಂಡ ಕಾರಣದಿಂದಾಗಿ ಮಾರುಕಟ್ಟೆ ಹಸಿರು ಬಣ್ಣಕ್ಕೆ ತಿರುಗಿದೆ. ಇಂದು ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 113 ಡಾಲರ್‌ನಂತೆ ವಹಿವಾಟು ನಡೆಸಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 433 ಅಂಕ ಅಥವಾ ಶೇಕಡ 0.82ರಷ್ಟು ಹೆಚ್ಚಳವಾಗಿ 53,161ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 133 ಅಂಖ ಅಥವಾ ಶೇಕಡ 0.85ರಷ್ಟು ಹೆಚ್ಚಳವಾಗಿ 15,832ಕ್ಕೆ ಸ್ಥಿರವಾಗಿದೆ. ಮಿಡ್, ಸ್ಮಾಲ್ ಕ್ಯಾಪ್ ಷೇರುಗಳು ಏರಿಳಿತದೊಂದಿಗೆ ವಹಿವಾಟು ಕೊನೆ ಮಾಡಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 1ರಷ್ಟು ಇಳಿದರೆ, ಸ್ಮಾಲ್ ಕ್ಯಾಪ್ ಶೇಕಡ 2.04ರಷ್ಟು ಮುಂದಕ್ಕೆ ತಳ್ಳಲ್ಪಟ್ಟಿದೆ. ನಿಫ್ಟಿ ಐಟಿ, ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡ 2.05, ಶೇಕಡ 1.52ರಷ್ಟು ಹೆಚ್ಚಳವಾಗಿದೆ.
ಒಎನ್‌ಜಿಸಿ ನಿಫ್ಟಿ ಗೇನರ್
ಒಎನ್‌ಜಿಸಿ ನಿಫ್ಟಿಯಲ್ಲಿ ಟಾಪ್ ಗೇನರ್ ಆಗಿದೆ. ಒಎನ್‌ಜಿಸಿ ಷೇರುಗಳು ಶೇಕಡ 3.31ರಷ್ಟು ಹೆಚ್ಚಿ 141.90 ರೂಪಾಯಿಗೆ ತಲುಪಿದೆ. ಈ ನಡುವೆ ಕೋಲ್ ಇಂಡಿಯಾ, ಎಲ್&ಟಿ, ಎಚ್‌ಸಿಎಲ್ ಟೆಕ್, ಯುಪಿಎಲ್ ಕೂಡಾ ಲಾಭವನ್ನು ವಿಸ್ತರಿಸಿದೆ. ಒಟ್ಟಾರೆಯಾಗಿ ಬಿಎಸ್‌ಇಯಲ್ಲಿ 2,387 ಷೇರುಗಳು ಹೆಚ್ಚಾದರೆ, 1,045 ಷೇರುಗಳು ಇಳಿದಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ ಎಲ್&ಟಿ, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಭಾರ್ತಿ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಸ್‌ಬಿಐ, ಐಟಿಸಿ, ಸನ್ ಫಾರ್ಮಾ ಕೂಡಾ ಲಾಭವನ್ನು ಕಂಡಿದೆ.
ಎಲ್‌ಐಸಿ ಷೇರು ಮತ್ತೆ ಏರಿಕೆ
ಈ ನಡುವೆ ದೇಶದ ಅತೀ ದೊಡ್ಡ ವಿಮಾ ಸಂಸ್ಥೆ ಭಾರತೀಯ ವಿಮಾ ನಿಗಮ (ಎಲ್‌ಐಸಿ) ಏರಿಕೆ ಕಂಡು ವಹಿವಾಟು ಅಂತ್ಯ ಮಾಡಿದೆ. ಆರಂಭಿಕ ವಹಿವಾಟಿನಲ್ಲಿ ಶೇಕಡ 0.39ರಷ್ಟು ಹೆಚ್ಚಳ ಕಂಡು 664.25 ರೂಪಾಯಿಗೆ ತಲುಪಿದೆ. ವಹಿವಾಟಿನ ಅಂತ್ಯದ ವೇಳೆಗೆ ಶೇಕಡ 0.45ರಷ್ಟು ಹೆಚ್ಚಳವಾಗಿ ರೂಪಾಯಿ 664.65ಕ್ಕೆ ತಲುಪಿದೆ.
ಜ್ಯೋಮಾಟೋ ಸ್ಟಾಕ್ ಭಾರೀ ಇಳಿಕೆ
ಈ ನಡುವೆ ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ನಷ್ಟವನ್ನು ಅನುಭವಿಸಿದೆ. ಈ ನಡುವೆ ಜ್ಯೋಮಾಟೋ ಸ್ಟಾಕ್‌ಗಳು ಭಾರೀ ಕುಸಿತ ಕಂಡಿದೆ. ಶೇಕಡ 6.40ರಷ್ಟು ಕುಸಿತ ಕಂಡು 65.85 ರೂಪಾಯಿಗೆ ಸ್ಥಿರವಾಗಿದೆ. ಬ್ಲಿಂಕಿಂಟ್ ಜೊತೆ ಸುಮಾರು 4,447 ಕೋಟಿ ಒಪ್ಪಂದದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications