ಷೇರು ಮಾರುಕಟ್ಟೆ ಚೇತರಿಕೆ: ಒಎನ್‌ಜಿಸಿ ಟಾಪ್ ಗೇನರ್

ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ನಷ್ಟದೊಂದಿಗೆ ಮುನ್ನಡೆದಿದ್ದ ಷೇರು ಮಾರುಕಟ್ಟೆ, ವಹಿವಾಟಿನ ಅಂತ್ಯದ ವೇಳೆಗೆ ಕೊಂಚ ಚೇತರಿಕೆ ಕಂಡಿದೆ. ಚೀನಾವು ಕೋವಿಡ್ ಹಿನ್ನೆಲೆ ವಿಧಿಸಲಾಗಿರುವ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

ಆದರೆ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯು ಷೇರು ಮಾರುಕಟ್ಟೆ ಹೆಚ್ಚು ಲಾಭವನ್ನು ಗಳಿಸುವುದಕ್ಕೆ ತಡೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ದರವು ಶೇಕಡ 1.54 ಅಥವಾ 1.77 ಡಾಲರ್ ಏರಿಕೆಯಾಗಿದ್ದು ಪ್ರತಿ ಬ್ಯಾರೆಲ್‌ಗೆ 116.86 ಡಾಲರ್ ಆಗಿದೆ. ಇನ್ನು ಈ ನಡುವೆ ರೂಪಾಯಿ ಡಾಲರ್ ಎದುರು ಸಾರ್ವಕಾಲಿಕ ಕುಸಿತವನ್ನು ಕಂಡಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 16 ಅಂಕ ಅಥವಾ ಶೇಕಡ 0.03ರಷ್ಟು ಹೆಚ್ಚಳವಾಗಿ 53,177ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಫ್ಟಿ 18 ಅಂಕ ಅಥವಾ ಶೇಕಡ 0.11ರಷ್ಟು ಹೆಚ್ಚಳವಾಗಿ 15,850ಕ್ಕೆ ಸ್ಥಿರವಾಗಿದೆ.

ಇನ್ನು ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಷೇರುಗಳು ಮಿಶ್ರವಾಗಿದೆ. ನಿಫ್ಟಿ ಮಿಡ್‌ ಕ್ಯಾಪ್ 100 ಸುಮಾರು ಶೇಕಡ 0.29ರಷ್ಟು ಹೆಚ್ಚಾದರೆ, ಸ್ಮಾಲ್ ಕ್ಯಾಪ್ ಶೇಕಡ 0.34ರಷ್ಟು ಏರಿಕೆ ಕಂಡಿದೆ. ಇನ್ನು ಉಪ ಸೂಚ್ಯಂಕದಲ್ಲಿ ನಿಫ್ಟಿ ಆಟೋ, ನಿಫ್ಟಿ ಮೆಟಲ್, ನಿಫ್ಟಿ ಆಯಿಲ್ & ಗ್ಯಾಸ್ ಶೇಕಡ 1.25, ಶೇಕಡ 1.67 ಮತ್ತು ಶೇಕಡ 2.27ರಷ್ಟು ಹೆಚ್ಚಳ ಕಂಡಿದೆ

 ಒಎನ್‌ಜಿಸಿ ಟಾಪ್ ನಿಫ್ಟಿ ಗೇನರ್

ಒಎನ್‌ಜಿಸಿ ಟಾಪ್ ನಿಫ್ಟಿ ಗೇನರ್

ಒಎನ್‌ಜಿಸಿ ಟಾಪ್ ನಿಫ್ಟಿ ಗೇನರ್ ಆಗಿದೆ. ಈ ಷೇರುಗಳು ಶೇಕಡ 5.16ರಷ್ಟು ಹೆಚ್ಚಳವಾಗಿ ರೂಪಾಯಿ 148.80ಕ್ಕೆ ತಲುಪಿದೆ. ಹಿಂಡಾಲ್ಕೋ, ಕೋಲ್ ಇಂಡಿಯಾ, ಎಂ&ಎಂ ಟೆಕ್ ಮಹೀಂದ್ರಾ ಕೂಡಾ ಲಾಭವನ್ನು ಗಳಿಸಿದೆ. ಬಿಎಸ್‌ಇಯಲ್ಲಿ 1,794 ಷೇರುಗಳು ಲಾಭವನ್ನು ಕಂಡಿದ್ದರೆ, 1,482 ಷೇರುಗಳು ನಷ್ಟವನ್ನು ಕಂಡಿದೆ.

 ಯಾವ ಷೇರಿಗೆ ನಷ್ಟ, ಯಾವುದಕ್ಕೆ ಲಾಭ?

ಯಾವ ಷೇರಿಗೆ ನಷ್ಟ, ಯಾವುದಕ್ಕೆ ಲಾಭ?

ಬಿಎಸ್‌ಇಯಲ್ಲಿ ಎಂ&ಎಂ, ಟಾಟಾ ಸ್ಟೀಲ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಡಾ.ರೆಡ್ಡೀಸ್, ಟೆಕ್ಎಂ, ಎಲ್&ಟಿ, ಎಚ್‌ಸಿಎಲ್, ಎಚ್‌ಸಿಎಲ್ ಟೆಕ್, ಆಕ್ಸಿಸ್ ಬ್ಯಾಂಕ್, ಐಟಿಸಿ, ನೆಸ್ಟ್ಲೆ, ಐಟಿಸಿ, ನೆಸ್ಟ್ಲೆ ಇಂಡಿಯಾ, ಇನ್ಫೋಸಿಸ್, ಎಸ್‌ಬಿಐ ಲಾಭವನ್ನು ಗಳಿಸಿದೆ. ಈ ಸಂದರ್ಭದಲ್ಲೇ ಟೈಟಾನ್, ಏಷ್ಯನ್ ಪೇಂಟ್ಸ್, ಬಜಾಲ್‌ ಫಿನ್‌ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್ ಫಾರ್ಮಾ, ಪವರ್‌ಗ್ರಿಡ್ ಹಾಗೂ ಭಾರ್ತಿ ಏರ್‌ಟೆಲ್ ನಷ್ಟವನ್ನು ಕಂಡಿದೆ.

 ಜೊಮ್ಯಾಟೊ ಷೇರು ಎಷ್ಟು ಕುಸಿತ?

ಜೊಮ್ಯಾಟೊ ಷೇರು ಎಷ್ಟು ಕುಸಿತ?

ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಜೊಮ್ಯಾಟೊ ಷೇರು ಶೇಕಡ 8.35ರಷ್ಟು ಕುಸಿತ ಕಂಡಿದ್ದು, ರೂಪಾಯಿ 60.35ಕ್ಕೆ ತಲುಪಿದೆ. ಬ್ಲಿಂಕಿಟ್ ಅನ್ನು 4,447 ಕೋಟಿ ಡಾಲರ್‌ಗೆ ಖರೀದಿ ಮಾಡುವ ಒಪ್ಪಂದದ ನಂತರ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ ಭಾರೀ ಕುಸಿತ ಕಂಡಿದೆ. ಸೋಮವಾರ ವಹಿವಾಟಿನ ಅಂತ್ಯದಲ್ಲಿ ಶೇಕಡ 6.40ರಷ್ಟು ಕುಸಿತ ಕಂಡು 65.85 ರೂಪಾಯಿಗೆ ಸ್ಥಿರವಾಗಿದೆ. ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಜೊಮ್ಯಾಟೊ ಶೇ 6.38 ರಷ್ಟು ಕುಸಿದು ರೂಪಾಯಿ 61.65 ಕ್ಕೆ ವಹಿವಾಟು ನಡೆಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+