ಗುರುವಾರ ಷೇರು ಮಾರುಕಟ್ಟೆಗೆ ಬ್ಯಾಂಕ್, ಮೆಟಲ್ ಸ್ಟಾಕ್‌ಗಳು ಸಾಥ್ ನೀಡಿದ್ದು, ಷೇರು ಮಾರುಕಟ್ಟೆ ಏರಿಕೆ ಕಂಡಿದೆ. ಆದರೆ ಇದೇ ಸಂದರ್ಭದಲ್ಲಿ ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿ ಷೇರುಗಳು ಕುಸಿತ ಕಂಡಿದೆ.
ಬೋರಿಸ್ ಜಾನ್ಸನ್ ಬ್ರಿಟಿಷ್ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂಬ ಸುದ್ದಿಯ ನಡುವೆ ಯುಕೆ ಸ್ಟಾಕ್‌ಗಳು ಏರಿಕೆ ಕಂಡಿದೆ. ಈ ಸಂದರ್ಭದಲ್ಲೇ ಯುರೋಪಿಯನ್ ಸ್ಟಾಕ್‌ಗಳು ಕೂಡಾ ಏರಿಕೆಯಾಗಿದೆ. ಏಷ್ಯನ್ ಸ್ಟಾಕ್‌ಗಳು ಕೂಡ ಹೆಚ್ಚಳವಾಗಿದೆ.
ಜಾಗತಿಕ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಆಸುಪಾಸಿನಲ್ಲಿದೆ. ಕಳೆದ ಹಲವಾರು ದಿನಗಳಿಂದ ಜಾಗತಿಕ ಕಚ್ಚಾ ತೈಲ ಬೆಲೆಯು ಇಳಿಕೆ ಕಾಣುತ್ತಿದೆ. ಇದರ ಪರಿಣಾಮವಾಗಿ ಷೇರು ಪೇಟೆಯು ಮತ್ತೆ ಪುಟಿದೆದ್ದಿದೆ. ಮಂಗಳವಾರ ಬ್ರೆಂಟ್ ಕಚ್ಚಾ ತೈಲ ಶೇಕಡ 9ಕ್ಕಿಂತ ಅಧಿಕ ಕುಸಿತ ಕಂಡಿದೆ. ಈ ಬೆನ್ನಲ್ಲೇ ಷೇರು ಪೇಟೆ ಜಿಗಿದಿದೆ.
30 ಷೇರು ಬಿಎಸ್‌ಇ ಸೆನ್ಸೆಕ್ಸ್ 427 ಅಂಕ ಅಥವಾ 0.80 ರಷ್ಟು ಜಿಗಿದು 54,178 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 143 ಅಂಕ ಅಥವಾ 0.89 ರಷ್ಟು ಏರಿಕೆ ಕಂಡು 16,133 ಕ್ಕೆ ವಹಿವಾಟು ಅಂತ್ಯ ಮಾಡಿದೆ.
ನಿಫ್ಟಿ ಬ್ಯಾಂಕ್ ಏರಿಕೆ
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.35 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.57 ರಷ್ಟು ಏರಿಕೆಯಾಗಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 14 ಲಾಭವನ್ನು ದಾಖಲಿಸಿದೆ. ಉಪ-ಸೂಚ್ಯಂಕಗಳಾದ ನಿಫ್ಟಿ ಮೆಟಲ್, ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಮತ್ತು ನಿಫ್ಟಿ ಬ್ಯಾಂಕ್ ಶೇಕಡಾ 3.79, ಶೇಕಡಾ 2.64 ಮತ್ತು ಶೇಕಡಾ 1.74 ರಷ್ಟು ಹೆಚ್ಚಾಗಿದೆ. ಆದರೆ ನಿಫ್ಟಿ ಎಫ್‌ಎಂಸಿಜಿ ಶೇಕಡಾ 0.08 ರಷ್ಟು ಕುಸಿದಿದೆ.
ಹಿಂಡಾಲ್ಕೊ ಟಾಪ್ ಗೇನರ್
ಹಿಂಡಾಲ್ಕೊ ಟಾಪ್ ನಿಫ್ಟಿ ಗೇನರ್ ಆಗಿದ್ದು, ಷೇರುಗಳು ಶೇಕಡಾ 6.88 ರಷ್ಟು ಏರಿಕೆಯಾಗಿ ₹ 364.40 ಕ್ಕೆ ತಲುಪಿದೆ. ಟೈಟಾನ್, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟಾಟಾ ಮೋಟಾರ್ಸ್ ಕೂಡ ಲಾಭ ಗಳಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 2,275 ಷೇರುಗಳು ಮುನ್ನಡೆ ಸಾಧಿಸಿದರೆ 1,015 ಷೇರುಗಳು ಕುಸಿದಿದೆ.
ಯಾವ ಷೇರು ಏರಿಕೆ, ಯಾವುದು ಕುಸಿತ?
30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟೈಟಾನ್, ಟಾಟಾ ಸ್ಟೀಲ್, ಎಲ್ & ಟಿ, ಇಂಡಸ್‌ಇಂಡ್ ಬ್ಯಾಂಕ್, ಎಂ & ಎಂ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಎನ್‌ಟಿಪಿಸಿ, ಸನ್ ಫಾರ್ಮಾ ಮತ್ತು ವಿಪ್ರೋ ಷೇರುಗಳು ಶೇಕಡ 5.69ರಷ್ಟು ಹೆಚ್ಚಳವಾಗಿದೆ. ಡಾ ರೆಡ್ಡೀಸ್, ನೆಸ್ಲೆ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫಿನ್‌ಸರ್ವ್, ಮಾರುತಿ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಇಳಿಕೆಯಾಗಿದೆ.
ಎಲ್‌ಐಸಿ ಷೇರು ಮತ್ತೆ ಕುಸಿತ
ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿ ಷೇರುಗಳು ಬುಧವಾರ ವಹಿವಾಟಿನ ಅಂತ್ಯದಲ್ಲಿ ಶೇಕಡ 0.04ರಷ್ಟು ಹೆಚ್ಚಳವಾಗಿ, ರೂಪಾಯಿ 703.05ಕ್ಕೆ ಸ್ಥಿರವಾಗಿದೆ. ಸತತ ಮೂರು ಸೆಷನ್‌ಗಳಲ್ಲಿ ಏರಿಕೆ ಕಂಡಿದೆ. ಆದರೆ ಗುರುವಾರ ಎಲ್‌ಐಸಿ ಷೇರುಗಳು ಶೇಕಡಾ 0.70 ರಷ್ಟು ಕುಸಿದು ರೂಪಾಯಿ 698.15 ಕ್ಕೆ ತಲುಪಿದೆ.


Click it and Unblock the Notifications