ಬುಧವಾರ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡ ಷೇರು ಮಾರುಕಟ್ಟೆ ವಹಿವಾಟಿನ ಅಂತ್ಯದವರೆಗೂ ಏರಿಕೆಯನ್ನು ಮುಂದುವರಿಸಿದೆ. ಮುಖ್ಯವಾಗಿ ಫಿನಾನ್ಶಿಯಲ್, ಕನ್ಸ್ಯೂಮರ್, ಆಟೋ ಮೊಬೈಲ್ ಸ್ಟಾಕ್‌ಗಳು ಏರಿಕೆಯಾಗಿರುವುದು ಷೇರು ಪೇಟೆ ಜಿಗಿತಕ್ಕೆ ಬಲತುಂಬಿದೆ. ಹಾಗೆಯೇ ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆಯು ಕೂಡಾ ಹೂಡಿಕೆದಾರರ ಮೇಲೆ ಪ್ರಭಾವವನ್ನು ಉಂಟು ಮಾಡಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕ 617 ಅಂಕ ಅಥವಾ ಶೇಕಡ 1.16ರಷ್ಟು ಹೆಚ್ಚಳವಾಗಿ 53,751ಕ್ಕೆ ತಲುಪಿದೆ. ಈ ನಡುವೆ ಎನ್‌ಎಸ್‌ಇ ನಿಫ್ಟಿ 179 ಅಂಕ ಅಥವಾ ಶೇಕಡ 1.13ರಷ್ಟು ಹೆಚ್ಚಳವಾಗಿ 15,990ಕ್ಕೆ ವಹಿವಾಟು ಅಂತ್ಯ ಮಾಡಿದೆ.
ಬುಧವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 267 ಅಂಕ ಅಥವಾ ಶೇಕಡ 0.49ರಷ್ಟು ಏರಿಕೆಯಾಗಿದ್ದು, 53,397ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 58 ಅಂಕ ಅಥವಾ ಶೇಕಡ 0.36ರಷ್ಟು ಜಿಗಿದು 15,868ಕ್ಕೆ ವಹಿವಾಟು ಆರಂಭ ಮಾಡಿದೆ. ವಹಿವಾಟಿನ ಅಂತ್ಯದಲ್ಲೂ ಷೇರು ಪೇಟೆ ಪಾಸಿಟಿವ್ ಆಗಿದೆ.
ನಿಫ್ಟಿ ಫಿನಾನ್ಶಿಯಲ್ ಸರ್ವೀಸಸ್, ನಿಫ್ಟಿ ಎಫ್‌ಎಂಸಿಜಿ
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.90 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.49 ರಷ್ಟು ಏರಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 14 ಲಾಭವನ್ನು ಕಂಡಿದೆ. ಇನ್ನು ಉಪ ಸೂಚ್ಯಂಕಗಳಾದ ನಿಫ್ಟಿ ಫಿನಾನ್ಶಿಯಲ್ ಸರ್ವೀಸಸ್, ನಿಫ್ಟಿ ಎಫ್‌ಎಂಸಿಜಿ ಮತ್ತು ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್ಸ್ ಕ್ರಮವಾಗಿ ಶೇ.3.12, ಶೇ.2.64 ಮತ್ತು ಶೇ.2.35ರಷ್ಟು ಏರಿಕೆಯಾಗಿದೆ. ಇನ್ನು ನಿಫ್ಟಿ ಆಯಿಲ್ & ಗ್ಯಾಸ್ ಶೇಕಡ 0.17ರಷ್ಟು ಕುಸಿದಿದೆ.
ಬಜಾಜ್ ಫಿನಾನ್ಸ್ ಟಾಪ್ ಸ್ಟಾಕ್
ಇನ್ನು ಬಜಾಜ್ ಫಿನಾನ್ಸ್ ಟಾಪ್ ನಿಫ್ಟಿ ಗೇನರ್ ಆಗಿದೆ. ಬಜಾಜ್ ಫಿನಾನ್ಸ್ ಸ್ಟಾಕ್‌ಗಳು ಶೇಕಡ 4.75ರಷ್ಟು ಹೆಚ್ಚಳವಾಗಿ, ರೂಪಾಯಿ 5,930ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಬಜಾಜ್ ಫಿನ್‌ಸರ್ವ್, ಬ್ರಿಟಾನಿಯಾ, ಹಿಂದೂಸ್ತಾನ್ ಯೂನಿಲಿವರ್, ಈಚರ್ ಮೋಟಾರ್ಸ್ ಕೂಡಾ ಲಾಭ ಗಳಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,840 ಷೇರುಗಳು ಏರಿಕೆ ಕಂಡಿದ್ದರೆ, 1,463 ಷೇರುಗಳು ಕುಸಿದಿದೆ.
ಯಾವ ಷೇರು ಲಾಭ, ಯಾವುದಕ್ಕೆ ನಷ್ಟ?
30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಬಜಾಜ್ ಫಿನ್‌ಸರ್ವ್, ಬಜಾಜ್ ಫಿನಾನ್ಸ್, ಎಚ್‌ಯುಎಲ್, ಮಾರುತಿ, ಏಷ್ಯನ್ ಪೇಂಟ್ಸ್, ಟೈಟಾನ್, ಕೋಟಕ್ ಮಹೀಂದ್ರಾ ಬ್ಯಾಂಕ್, ನೆಸ್ಟ್ಲೆ ಇಂಡಿಯಾ, ಎಂ&ಎಂ, ಇಂಡಸ್‌ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಎಸ್‌ಬಿಐ ಸುಮಾರು ಶೇಕಡ 4.54ರಷ್ಟು ಏರಿಕೆ ಕಂಡಿದೆ. ಆದರೆ ಪವರ್‌ಗ್ರಿಡ್, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಎಲ್&ಟಿ, ಟಾಟಾ ಸ್ಟೀಲ್ಸ್ ಸ್ಟಾಕ್‌ಗಳು ನಷ್ಟವನ್ನು ಕಂಡಿದೆ.
ಎಲ್‌ಐಸಿ ಷೇರು ನಿರಂತರ ಏರಿಕೆ
ಕಳೆದ ಮೂರು ಸೆಷನ್‌ಗಳಲ್ಲಿ ವಹಿವಾಟಿನ ಆರಂಭ ಮತ್ತು ಅಂತ್ಯದಲ್ಲಿ ಎಲ್‌ಐಸಿ ಷೇರುಗಳು ಏರಿಕೆಯನ್ನು ಕಂಡಿದೆ. ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿ ಷೇರುಗಳು ಬುಧವಾರ ವಹಿವಾಟಿನ ಅಂತ್ಯದಲ್ಲಿ ಶೇಕಡ 0.04ರಷ್ಟು ಹೆಚ್ಚಳವಾಗಿ, ರೂಪಾಯಿ 703.05ಕ್ಕೆ ಸ್ಥಿರವಾಗಿದೆ. ಬುಧವಾರ ವಹಿವಾಟಿನ ಆರಂಭದಲ್ಲಿ ಎಲ್‌ಐಸಿ ಷೇರು ಏರಿಕೆಯಾಗಿತ್ತು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications