ಷೇರುಪೇಟೆ ಶುಭಾಂತ್ಯ: ಎಸ್‌ಬಿಐ ಲೈಫ್ ಟಾಪ್ ಗೇನರ್

ಸತತ ಮೂರನೇ ಸೆಷನ್‌ನಲ್ಲಿ ಷೇರುಪೇಟೆಯು ಶುಭಾಂತ್ಯವನ್ನು ಕಂಡಿದೆ. ಬುಧವಾರ ವಹಿವಾಟಿನ ಆರಂಭದಲ್ಲಿ ಷೇರು ಮಾರುಕಟ್ಟೆ ಕುಸಿತವನ್ನು ಕಂಡಿತ್ತು. ಆದರೆ ಬಳಿಕ ವಹಿವಾಟಿನ ಅಂತ್ಯದಲ್ಲಿ ಏರಿಕೆಯಾಗಿದೆ. ಆ ಬಳಿಕ ಸ್ಟಾಕ್ ಮಾರುಕಟ್ಟೆ ಜಿಗಿಯುತ್ತಲೇ ಇದೆ. ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಏರಿಕೆಯು ಸ್ಟಾಕ್ ಮಾರುಕಟ್ಟೆ ಜಿಗಿತಕ್ಕೆ ಬಲ ತುಂಬಿದೆ.

ಶುಕ್ರವಾರ ವಹಿವಾಟಿನ ಆರಂಭದಲ್ಲಿ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 462 ಅಂಕ ಅಥವಾ ಶೇಕಡ 0.81ರಷ್ಟು ಏರಿ 57,320ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 148 ಅಂಕ ಅಥವಾ ಶೇಕಡ 0.88ರಷ್ಟು ಹೆಚ್ಚಾಗಿ 17,078ಕ್ಕೆ ತಲುಪಿದೆ. ವಹಿವಾಟಿನ ಅಂತ್ಯದಲ್ಲಿಯೂ ಕೂಡಾ ಪಾಸಿಟಿವ್ ಬೆಳವಣಿಗೆ ಕಂಡು ಬಂದಿದೆ. 30 ಷೇರು ಬಿಎಸ್‌ಇ ಸೆನ್ಸೆಕ್ಸ್ 712 ಅಂಕ ಅಥವಾ ಶೇಕಡ 1.25ರಷ್ಟು ಏರಿ 57,570ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 229 ಅಂಕ ಅಥವಾ ಶೇಕಡ 1.35ರಷ್ಟು ಹೆಚ್ಚಾಗಿ 17,158ಕ್ಕೆ ತಲುಪಿದೆ.

ಇನ್ನು ಷೇರು ಪೇಟೆಯಲ್ಲಿ ಯಾವ ಸ್ಟಾಕ್ ಟಾಪ್ ಗೇನರ್, ಯಾವುದು ನಷ್ಟವನ್ನು ಅನುಭವಿಸಿದೆ. ಯಾವುದೆಲ್ಲಾ ಸ್ಟಾಕ್ ಏರಿಕೆಯಾಗಿದೆ. ಯಾವುದೆಲ್ಲಾ ಸ್ಟಾಕ್ ಇಳಿಕೆಯಾಗಿದೆ ಎಂಬುವುದನ್ನು ತಿಳಿಯೋಣ ಮುಂದೆ ಓದಿ...

 ನಿಫ್ಟಿ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್

ನಿಫ್ಟಿ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.42 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.70 ರಷ್ಟು ಏರಿಕೆಯಾಗಿದೆ. 15 ಸೆಕ್ಟರ್ ಗೇಜ್‌ಗಳು ಕೂಡಾ ಲಾಭವನ್ನು ಕಂಡಿದೆ. ಉಪ-ಸೂಚ್ಯಂಕಗಳಾದ ನಿಫ್ಟಿ ಮೆಟಲ್, ನಿಫ್ಟಿ ಐಟಿ, ನಿಫ್ಟಿ ಆಯಿಲ್ ಮತ್ತು ಗ್ಯಾಸ್ ಮತ್ತು ನಿಫ್ಟಿ ಕನ್ಸೂಮರ್ ಡ್ಯೂರಬಲ್ಸ್ ಕ್ರಮವಾಗಿ ಶೇಕಡಾ 3.86, ಶೇಕಡಾ 1.71, ಶೇಕಡಾ 2.18 ಮತ್ತು ಶೇಕಡಾ 1.75 ರಷ್ಟು ಏರಿಕೆಯಾಗಿದೆ. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಉಪ ಸೂಚ್ಯಂಕಗಳಾದ ನಿಫ್ಟಿ ಆಟೋ, ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್, ನಿಫ್ಟಿ ಐಟಿ, ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡ 1.57, ಶೇಕಡ 1.58, ಶೇಕಡ 1.42, ಶೇಕಡ 1.51 ಏರಿಕೆಯಾಗಿದೆ.

 ಎಸ್‌ಬಿಐ ಲೈಫ್ ಟಾಪ್ ಸ್ಟಾಕ್

ಎಸ್‌ಬಿಐ ಲೈಫ್ ಟಾಪ್ ಸ್ಟಾಕ್

ಖಾಸಗಿ ವಲಯದ ಜೀವ ವಿಮಾ ಸಂಸ್ಥೆ ಎಸ್‌ಬಿಐ ಲೈಫ್ ಟಾಪ್ ನಿಫ್ಟಿ ಗೇನರ್ ಆಗಿದೆ. ಏಪ್ರಿಲ್-ಜೂನ್‌ನಲ್ಲಿ ನಿವ್ವಳ ಆದಾಯದಲ್ಲಿ 18 ಶೇಕಡಾ ಬೆಳವಣಿಗೆಯಾಗಿ 263 ಕೋಟಿಗೆ ಏರಿಕೆಯಾಗಿದೆ ಎಂಬ ವರದಿಯ ಬೆನ್ನಲ್ಲೇ ಎಸ್‌ಬಿಐ ಲೈಫ್ ಷೇರುಗಳು ಏರಿಕೆಯಾಗಿದೆ. ಎಸ್‌ಬಿಐ ಲೈಫ್ ಷೇರುಗಳು ಶೇಕಡ 8.61 ರಷ್ಟು ಏರಿಕೆಯಾಗಿ ರೂಪಾಯಿ 1,294 ಕ್ಕೆ ತಲುಪಿದೆ. ಟಾಟಾ ಸ್ಟೀಲ್, ಹಿಂಡಾಲ್ಕೊ, ಸನ್ ಫಾರ್ಮಾ ಮತ್ತು ಕೋಲ್ ಇಂಡಿಯಾ ಷೇರುಗಳು ಕೂಡಾ ಹೆಚ್ಚಾಗಿದೆ. ಆರಂಭಿಕ ವಹಿವಾಟಿನಲ್ಲಿಯೂ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಸ್ಟಾಕ್‌ ಏರಿಕೆಯಾಗಿತ್ತು. ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಷೇರುಗಳು ಶೇಕಡ 6.98 ರಷ್ಟು ಏರಿಕೆಯಾಗಿ ರೂಪಾಯಿ 1,274.65ಕ್ಕೆ ತಲುಪಿತ್ತು.

 ಯಾವೆಲ್ಲಾ ಷೇರುಗಳು ಏರಿಕೆ?

ಯಾವೆಲ್ಲಾ ಷೇರುಗಳು ಏರಿಕೆ?

ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ 2,101 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,225 ಷೇರುಗಳು ಕುಸಿತವನ್ನು ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟಾಟಾ ಸ್ಟೀಲ್, ಸನ್ ಫಾರ್ಮಾ, ಬಜಾಜ್ ಫಿನ್‌ಸರ್ವ್, ಇಂಡಸ್‌ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ವಿಪ್ರೋ, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್ ಷೇರುಗಳು ಶೇಕಡ 7.27ರಷ್ಟು ಏರಿಕೆಯಾಗಿದೆ. ಡಾ.ರೆಡ್ಡೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಸ್‌ಬಿಐ, ಐಟಿಸಿ ಮತ್ತು ಆಕ್ಸಿಸ್ ಬ್ಯಾಂಕ್ ಸ್ಟಾಕ್‌ಗಳು ಇಳಿಕೆಯಾಗಿದೆ. ಡಾ.ರೆಡ್ಡೀಸ್ ಸ್ಟಾಕ್ ಭಾರೀ ಇಳಿಕೆಯಾದ ಸ್ಟಾಕ್ ಆಗಿದೆ. ಷೇರು ಶೇಕಡ 3.98ರಷ್ಟು ಕುಸಿದು ರೂಪಾಯಿ 4,090.35ಕ್ಕೆ ತಲುಪಿದೆ.

 ಎಲ್‌ಐಸಿ ಷೇರು ಎಷ್ಟು ಏರಿಕೆ

ಎಲ್‌ಐಸಿ ಷೇರು ಎಷ್ಟು ಏರಿಕೆ

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶುಕ್ರವಾರ ವಹಿವಾಟಿನ ಆರಂಭದಲ್ಲಿ ಶೇ 0.96ರಷ್ಟು ಏರಿಕೆಯಾಗಿ ರೂಪಾಯಿ 681.35ಕ್ಕೆ ವಹಿವಾಟು ತಲುಪಿದೆ. ವಹಿವಾಟಿನ ಅಂತ್ಯದಲ್ಲಿ ಷೇರುಗಳು ಶೇಕಡಾ 0.44 ರಷ್ಟು ಏರಿಕೆಯಾಗಿ ರೂಪಾಯಿ 677.85 ಕ್ಕೆ ಕೊನೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+