ಭಾರತೀಯ ಷೇರುಪೇಟೆ ಗುರುವಾರ ಇಳಿಕೆಯ ಆರಂಭ ಪಡೆದರೂ, ದಿನದ ವಹಿವಾಟು ಅಂತ್ಯಕ್ಕೆ ಸಕಾರಾತ್ಮಕವಾಗಿ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 254 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ವಹಿವಾಟು ನಿಫ್ಟಿ 70 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 255 ಪಾಯಿಂಟ್ಸ್ ಅಥವಾ ಶೇಕಡಾ 0.48ರಷ್ಟು ಏರಿಕೆಗೊಂಡು 53,158.85 ಪಾಯಿಂಟ್ಸ್ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 0.44ರಷ್ಟು ಅಥವಾ 70 ಪಾಯಿಂಟ್ಸ್ ಹೆಚ್ಚಾಗಿ 15,924.20 ಪಾಯಿಂಟ್ಸ್ ಮುಟ್ಟಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ. 0.31 ಮತ್ತು ಶೇ. 0.43 ರಷ್ಟು ಹೆಚ್ಚಾಗಿದೆ.

ಏರಿಕೆಗೊಂಡ ಷೇರುಗಳು:
ಎಲ್&ಟಿ ಟೆಕ್ನಾಲಜಿ, ಹೆಚ್‌ಸಿಎಲ್ ಟೆಕ್, ಎಲ್&ಟಿ ಇನ್ಫೋಟೆಕ್, ಎಯು ಸ್ಮಾಲ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಎಎಂಸಿ, ಲಾರ್ಸೆನ್, ಅಂಬುಜಾ ಸಿಮೆಂಟ್ಸ್, ಗೋದ್ರೆಜ್ ಪ್ರೊಪ್, ಡಿಎಲ್‌ಎಫ್, ಟೆಕ್ ಮಹೀಂದ್ರಾ, ನಿಪ್ಪಾನ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್.
ಇಳಿಕೆಗೊಂಡ ಷೇರುಗಳು:
ಭಾರ್ತಿ ಏರ್‌ಟೆಲ್, ಎಂ&ಎಂ, ಏಷ್ಯನ್ ಪೈಂಟ್ಸ್, ಟೈಟಾನ್ ಕಂಪನಿ, ಸನ್ ಫಾರ್ಮ, ಬಜಾಜ್ ಆಟೋ, ಟಿಸಿಎಸ್, ಮಾರುತಿ ಸುಜುಕಿ, ರಿಲಯನ್ಸ್, ಎನ್‌ಟಿಪಿಸಿ, ಹೆಚ್‌ಯುಎಲ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್


Click it and Unblock the Notifications