Closing Bell: ಕುಸಿದಿದ್ದ ಸೆನ್ಸೆಕ್ಸ್ 55 ಪಾಯಿಂಟ್ಸ್ ಏರಿಕೆ, ನಿಫ್ಟಿ 16 ಪಾಯಿಂಟ್ಸ್ ಹೆಚ್ಚಳ

ಭಾರತದ ಷೇರುಪೇಟೆ ಗುರುವಾರ ಸಾಕಷ್ಟು ಏರಿಳಿತಗಳ ನಡುವೆ ದಿನದ ವಹಿವಾಟು ಅಂತ್ಯಕ್ಕೆ ಹಸಿರು ಬಣ್ಣದಲ್ಲಿ ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 55 ಪಾಯಿಂಟ್ಸ್ ಹೆಚ್ಚಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 16 ಪಾಯಿಂಟ್ಸ್ ಏರಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 54.81 ಪಾಯಿಂಟ್ಸ್ ಅಥವಾ ಶೇಕಡಾ 0.09ರಷ್ಟು ಹೆಚ್ಚಾಗಿ 58,305.07 ಪಾಯಿಂಟ್ಸ್ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ 15.75 ಪಾಯಿಂಟ್ಸ್ ಅಥವಾ ಶೇಕಡಾ 0.09ರಷ್ಟು ಏರಿಕೆಗೊಂಡು 17369.25 ಪಾಯಿಂಟ್ಸ್‌ ಮುಟ್ಟಿದೆ.

ಇಂದು ಬಿಎಸ್‌ಇನಲ್ಲಿ ಒಟ್ಟು 3,350 ಕಂಪನಿಗಳು ವಹಿವಾಟು ನಡೆಸುತ್ತಿದ್ದು, ಈ ಪೈಕಿ 1,844 ಷೇರುಗಳು ಏರಿಕೆಗೊಂಡರೆ , 1,346 ಷೇರುಗಳು ಇಳಿಕೆಗೊಂಡವು ಮತ್ತು 160 ಕಂಪನಿಗಳ ಷೇರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು:

ಏರಿಕೆಗೊಂಡ ಪ್ರಮುಖ ಷೇರುಗಳು:

ನೆಸ್ಲೆ ಷೇರು 618 ರೂ. ಏರಿಕೆಯೊಂದಿಗೆ 20,457.20 ರೂಗಳಲ್ಲಿ ಕೊನೆಗೊಂಡಿತು. ಭಾರ್ತಿ ಏರ್‌ಟೆಲ್‌ನ ಷೇರುಗಳು 186 ರೂಪಾಯಿ ಏರಿಕೆಯೊಂದಿಗೆ ರೂ. 686.15 ಕ್ಕೆ ಕೊನೆಗೊಂಡಿತು. ಒಎನ್ ಜಿಸಿ ಷೇರುಗಳು ರೂ. 122.15 ಕೊನೆಗೊಂಡರೆ, ಹಿಂಡಾಲ್ಕೊ ಷೇರು 33 ರೂಪಾಯಿ ಗಳಿಕೆಯೊಂದಿಗೆ 463.55 ರೂ., ಗ್ರೇಸಿಯಂ ಷೇರು ರೂ. 21 ರಷ್ಟು ಏರಿಕೆಯಾಗಿ 1,597.90 ರೂ.ನಲ್ಲಿ ಕೊನೆಗೊಂಡಿತು.

ಇನ್ನು ವಲಯಗಳಲ್ಲಿ, ನಿಫ್ಟಿ ಮೀಡಿಯಾ ಸುಮಾರು 3 ಪ್ರತಿಶತದಷ್ಟು ಜಿಗಿದರೆ, ಮೆಟಲ್ ಮತ್ತು ಎಫ್ಎಂಸಿಜಿ ವಲಯಗಳು ತಲಾ ಶೇಕಡಾ ಏರಿಕೆಯಾಗಿದೆ. ಮತ್ತೊಂದೆಡೆ ರಿಯಾಲ್ಟಿ ಸೂಚ್ಯಂಕವು ಸುಮಾರು ಶೇಕಡಾದಷ್ಟು ಇಳಿಕೆಯಾಗಿದೆ. ಎಪಿಎಲ್ ಅಪೊಲೊ ಟ್ಯೂಬ್ಸ್, ಅಬಾಟ್ ಇಂಡಿಯಾ, ಕಾಂಕರ್, ಡಿಶ್ ಟಿವಿ ಇಂಡಿಯಾ, ಇನ್ಫೋ ಎಡ್ಜ್, ಆಯಿಲ್ ಇಂಡಿಯಾ, ವೋಲ್ಟಾಸ್ ಮತ್ತು ಜೆನ್ಸಾರ್ ಟೆಕ್ನಾಲಜೀಸ್ ಸೇರಿದಂತೆ ಸುಮಾರು 200 ಷೇರುಗಳು ​​ಇಂದು ಬಿಎಸ್ ಇನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಮತ್ತೊಂದೆಡೆ, ಡಿಶ್ ಟಿವಿ, ಉಜ್ಜೀವನ್ ಫೈನಾನ್ಶಿಯಲ್ ಸರ್ವೀಸಸ್, ಮೆಜೆಸ್ಕೋ, ಫ್ಯೂಚರ್ ರಿಟೇಲ್, ಫ್ಯೂಚರ್ ಲೈಫ್ ಸ್ಟೈಲ್ ಫ್ಯಾಶನ್ಸ್ ಮತ್ತು ಜೈನ್ ಇರಿಗೇಶನ್ ಸಿಸ್ಟಮ್ಸ್ ಸೇರಿದಂತೆ 350 ಕ್ಕೂ ಹೆಚ್ಚು ಸ್ಟಾಕ್‌ಗಳು ತಮ್ಮ ಮೇಲಿನ ಸರ್ಕ್ಯೂಟ್‌ಗಳನ್ನು ಮುಟ್ಟಿದವು.

ಇಳಿಕೆಗೊಂಡ ಪ್ರಮುಖ ಷೇರುಗಳು:

ಇಳಿಕೆಗೊಂಡ ಪ್ರಮುಖ ಷೇರುಗಳು:

ಎಸ್‌ಬಿಐ ಲೈಫ್‌ನ ಷೇರು ಸುಮಾರು ರೂ. 47 ರಷ್ಟು ಇಳಿಕೆಯಾಗಿ 1,173.20 ಕ್ಕೆ ಕೊನೆಗೊಂಡಿತು. ಟೈಟಾನ್ ಕಂಪನಿಯ ಷೇರು ರೂ. 2234 ರಷ್ಟು ಇಳಿಕೆಯಾಗಿ ರೂ. 2,034.30 ಕ್ಕೆ ಕೊನೆಗೊಂಡಿತು. ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು ರೂ. 737.35 ಕ್ಕೆ ಕೊನೆಗೊಂಡಿದ್ದು, ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ರೂ. 53 ರಷ್ಟು ಇಳಿಕೆಯಾಗಿ ರೂ .7,939.65 ಕ್ಕೆ ಕೊನೆಗೊಂಡಿತು. ಬಜಾಜ್ ಆಟೋ ಷೇರುಗಳು ರೂ. 25 ರಷ್ಟು ಇಳಿಕೆಯಾಗಿ ರೂ. 3,700.60 ಕ್ಕೆ ಕೊನೆಗೊಂಡಿತು.

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಚಿನ್ನದ ಬೆಲೆ ಇಳಿಕೆ

ಚಿನ್ನದ ಬೆಲೆ ಇಳಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಸತತ ನಾಲ್ಕನೇ ದಿನ ಕುಸಿತಗೊಂಡಿದ್ದು, ಗುರುವಾರ (ಸೆ. 09) ಚಿನ್ನದ ಬೆಲೆ ಕುಸಿದಿರುವುದು ಆಭರಣ ಪ್ರಿಯರಿಗೆ ಖುಷಿ ನೀಡಿದೆ.

ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,100 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,300 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು 900 ರೂಪಾಯಿ ಕುಸಿದು 63,900 ರೂಪಾಯಿ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,000 ರೂಪಾಯಿ ಮತ್ತು ಶುದ್ಧ ಚಿನ್ನ 10 ಗ್ರಾಂ 48,000 ರೂಪಾಯಿ ದಾಖಲಾಗಿದೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+