ಯುಎಸ್ ನಲ್ಲಿ ಟಿಕ್ ಟಾಕ್ ಕಾರ್ಯ ನಿರ್ವಹಣೆ ಒರಾಕಲ್ ಹೆಗಲಿಗೆ

ಯು.ಎಸ್.ನಲ್ಲಿ ಟಿಕ್ ಟಾಕ್ ಕ್ಲೌಡ್ ಕಾರ್ಯ ನಿರ್ವಹಣೆ ಜವಾಬ್ದಾರಿ ಪಡೆಯುವಲ್ಲಿ ಒರಾಕಲ್ ಸಫಲವಾಗಿದೆ ಎಂದು ವರದಿ ಆಗಿದೆ. ಟಿಕ್ ಟಾಕ್ ಖರೀದಿ ಮಾಡುವುದಕ್ಕೆ ಬಿಡ್ ಮಾಡಿದ್ದ ಕಂಪೆನಿಗಳಲ್ಲಿ ಒರಾಕಲ್ ಕೂಡ ಭಾಗವಹಿಸಿತ್ತು ಎಂಬ ವರದಿ ಇತ್ತು. ಇದೀಗ ಒರಾಕಲ್ ಕಂಪೆನಿಯನ್ನು "ನಂಬಿಕಸ್ತ ಟೆಕ್ನಾಲಜಿ ಸಹಭಾಗಿ" ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಸಂಪೂರ್ಣ ಮಾರಾಟಕ್ಕಿಂತ ಬೇರೆಯದೇ ವಿಧಾನ ಇದು. ಟಿಕ್ ಟಾಕ್ ಯುಎಸ್ ನಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ತನ್ನ ಕ್ಲೌಡ್ ತಂತ್ರಜ್ಞಾನದ ಮೂಲಕ ಒರಾಕಲ್ ಸಹಾಯ ಮಾಡುತ್ತದೆ. ಟಿಕ್ ಟಾಕ್ ತಾನು ಖರೀದಿ ಮಾಡುತ್ತಿಲ್ಲ, ಟಿಕ್ ಟಾಕ್ ಮಾಲೀಕ ಸಂಸ್ಥೆ ಬೈಟ್ ಡ್ಯಾನ್ಸ್ ತನ್ನ ಬಿಡ್ ಅನ್ನು ತಿರಸ್ಕರಿಸಿದೆ ಎಂದು ಮೈಕ್ರೋಸಾಫ್ಟ್ ಮಾಹಿತಿ ಬಹಿರಂಗ ಮಾಡಿದ ಕೆಲ ಗಂಟೆಯಲ್ಲೇ ಈ ಹೊಸ ಸುದ್ದಿ ಬಂದಿದೆ.

ಟಿಕ್ ಟಾಕ್ ನ ಯುಎಸ್, ಆಸ್ಟ್ರೇಲಿಯಾ, ಕೆನಡಾ ಹಾಗೂ ನ್ಯೂಜಿಲ್ಯಾಂಡ್ ವ್ಯವಹಾರವನ್ನು ಖರೀದಿ ಮಾಡಲು ಮೈಕ್ರೋಸಾಫ್ಟ್ ಉತ್ಸುಕವಾಗಿತ್ತು. ಇದೀಗ ಟಿಕ್ ಟಾಕ್ ಗೆ ಒರಾಕಲ್ ತಂತ್ರಜ್ಞಾನ ಸಹಭಾಗಿ ಆಗುವುದರಿಂದ ಮೈಕ್ರೋಸಾಫ್ಟ್ ನ ಖರೀದಿ ಉದ್ದೇಶ ಸಂಪೂರ್ಣ ಕೊನೆಯಾಗಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಆಗಸ್ಟ್ 6ನೇ ತಾರೀಕು ಆದೇಶ ಹೊರಡಿಸಿ, ಬೈಟ್ ಡಾನ್ಸ್ ಜತೆಗಿನ ಎಲ್ಲ ವ್ಯವಹಾರ ನಿರ್ಬಂಧಿಸಿದ್ದರು.

ಯುಎಸ್ ನಲ್ಲಿ ಟಿಕ್ ಟಾಕ್ ಕಾರ್ಯ ನಿರ್ವಹಣೆ ಒರಾಕಲ್ ಹೆಗಲಿಗೆ

ಅಮೆರಿಕದ ಕಂಪೆನಿ ಯಾವುದಾದರೂ ಟಿಕ್ ಟಾಕ್ ಯುಎಸ್ ವ್ಯವಹಾರ ಖರೀದಿ ಮಾಡಬಹುದು ಎಂದಿತ್ತು. ಟ್ರಂಪ್ ರ ಅಧಿಕೃತ ಆದೇಶ ಆಗಸ್ಟ್ 6ರಿಂದ 45 ದಿನದೊಳಗಾಗಿ ಜಾರಿಗೆ ಬರುತ್ತದೆ ಎಂದಿತ್ತು. ಆ ನಂತರ ಅಧ್ಯಕ್ಷರು ಬೈಟ್ ಡ್ಯಾನ್ಸ್ ಗೆ 90 ದಿನಗಳ ಕಾಲಾವಕಾಶ ನೀಡಿ, ಯುಎಸ್ ನಲ್ಲಿನ ಟಿಕ್ ಟಾಕ್ ಕಾರ್ಯನಿರ್ವಹಣೆ ಮಾರಿಕೊಳ್ಳಬಹುದು ಎಂದಿದ್ದರು.

ತನಿಖೆಯೊಂದರ ಫಲಿತಾಂಶಾದ ಭಾಗವಾಗಿ ಈ ಆದೇಶ ಬಂದಿತ್ತು. ಯುಎಸ್ ನಲ್ಲಿ ವಿದೇಶಿ ಕಂಪೆನಿಗಳ ಹೂಡಿಕೆ ಬಗ್ಗೆ ಸಮಿತಿಯಿಂದ ನಿಗಾ ವಹಿಸುತ್ತದೆ. ಯುಎಸ್ ಭದ್ರತೆಗೆ ವಿದೇಶಿ ಕಂಪೆನಿಯಿಂದ ಭದ್ರತಾ ಸಮಸ್ಯೆ ಇದೆಯಾ ಎಂದು ಮೌಲ್ಯಮಾಪನ ಮಾಡುತ್ತದೆ. ಒರಾಕಲ್ ಕಂಪೆನಿಗೆ ಯುಎಸ್ ಸರ್ಕಾರದ ಜತೆಗೆ ಸಹಭಾಗಿಯಾಗಿ ಕೆಲಸ ಮಾಡಿದ ಇತಿಹಾಸ ಇದೆ. ಇದೀಗ ಟಿಕ್ ಟಾಕ್ ಜತೆಗೆ ವ್ಯೂಹಾತ್ಮಕವಾದ ಹೆಜ್ಜೆಗಳನ್ನು ಇಡಲು ಮುಂದಾಗಿದೆ. ವೈಟ್ ಹೌಸ್ ಹಾಗೂ ಕಾಂಗ್ರೆಸ್ ಮೂಲಕ ನಡೆಯುವ ಈ ವ್ಯವಹಾರಕ್ಕೆ ಚೀನಾದಿಂದಲೂ ಆಕ್ಷೇಪ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+