For Quick Alerts
ALLOW NOTIFICATIONS  
For Daily Alerts

ಕೋಕ್ ಬಾಟಲಿಗಳನ್ನು ದೂರ ಸರಿಸಿದ ಕ್ರಿಸ್ಟಿಯಾನೋ ರೊನಾಲ್ಡೊ: ಕೋಲಾ ಕಂಪನಿಗೆ $4 ಬಿಲಿಯನ್ ನಷ್ಟ

|

ಖ್ಯಾತ ಫುಟ್ಬಾಲ್ ಆಟಗಾರ ಪೋರ್ಚುಗಲ್‌ನ ಸೂಪರ್‌ಸ್ಟಾರ್‌ ಕ್ರಿಸ್ಟಿಯಾನೋ ರೊನಾಲ್ಡೊ ಪತ್ರಿಕಾಗೋಷ್ಠಿಯಲ್ಲಿ ಕೋಕ್ ಬಾಟಲಿಗಳನ್ನು ದೂರ ಸರಿಸಿ ನೀರು ಕುಡಿಯಿರಿ ಎಂದು ಹೇಳಿದ ವೀಡಿಯೋ ಸಾಕಷ್ಟು ವೈರಲ್ ಆದ ಬಳಿಕ ಕೊಕಾ-ಕೋಲಾ ಕಂಪನಿಯು ಬರೋಬ್ಬರಿ 4 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.

ಹೌದು ರೊನಾಲ್ಡೊ ಕೊಕಾ-ಕೋಲಾ ಬಾಟಲಿಗಳನ್ನು ತೆರವುಗಳಿಸಿದ ಪರಿಣಾಮ ಕಂಪನಿಯ ಬ್ರ್ಯಾಂಡ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಇದರಿಂದಾಗಿ ಕೋಕಾ-ಕೋಲಾದ ಷೇರುಗಳ ಬೆಲೆಗಳು 1.6% ನಷ್ಟು ಕುಸಿದಿವೆ. ಈ ಮೂಲಕ 242 ಬಿಲಿಯನ್ ಡಾಲರ್‌ನಿಂದ 238 ಬಿಲಿಯನ್ ಡಾಲರ್‌ಗೆ ಷೇರುಗಳ ಮೌಲ್ಯ ಕುಸಿದಿದೆ. ಜೊತೆಗೆ 4 ಬಿಲಿಯನ್ ಡಾಲರ್‌ ನಷ್ಟವಾಗಿದೆ ಎಂದು ವರದಿಯಾಗಿದೆ. (ಭಾರತೀಯ ರೂಪಾಯಿಗಳಲ್ಲಿ ಸುಮಾರು 29,339 ಕೋಟಿ)

ಕೊಕಾ-ಕೋಲಾ ಬಾಟಲಿ ದೂರ ಸರಿಸಿದ ರೊನಾಲ್ಡೊ: ಕಂಪನಿಗೆ $4 ಬಿಲಿಯನ್ ನಷ್ಟ

ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ ಮುನ್ನ ಪೋರ್ಚುಗಲ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೇಜಿನ ಮೇಲೆ ಕೊಕಾ-ಕೋಲಾ ಬಾಟಲಿಗಳನ್ನು ಇಟ್ಟಿದ್ದರು. ಇದನ್ನು ಕಂಡ 36ರ ಹರೆಯದ ರೊನಾಲ್ಡೊ ಬಾಟಲಿಗಳನ್ನು ದೂರ ಸರಿಸಿ ನಂತರ ನೀರಿನ ಬಾಟಲಿಗಳನ್ನು ಕೈಗೆತ್ತಿಕೊಂಡು ಎಲ್ಲರೂ ಕೋಲಾ ಬದಲಿಗೆ ನೀರು ಕುಡಿಯಿರಿ ಎಂದು ಹೇಳಿದ್ದಾರೆ.

ಯುರೋ 2020ರ ಪಂದ್ಯಾವಳಿಗೆ ಕೋಕಾ ಕೋಲಾ ಅಧಿಕೃತ ಪ್ರಮೋಟರ್ ಆಗಿದ್ದರೂ, ರೊನಾಲ್ಡೋ ವರ್ತನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ಇನ್ನು ಒಂದು ಗೋಲು ಹೊಡೆದರೆ ಮೈಕೆಲ್ ಪ್ಲಾಟಿನಿ ದಾಖಲೆ ಮುರಿಯಲಿದ್ದಾರೆ. ಐದು ವರ್ಷಗಳ ಹಿಂದೆ ನಡೆದ ಫೈನಲ್‌ನಲ್ಲಿ ಪೋರ್ಚುಗಲ್ ಫ್ರಾನ್ಸ್‌ ತಂಡವನ್ನು ಮಣಿಸಿ ತನ್ನ ಮೊದಲ ಪ್ರಮುಖ ಸಾಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Read more about: loss ನಷ್ಟ share market
English summary

Coco-Cola Lose 4 Billion US Dollar After Cristiano Ronaldo Moves Bottle and Endorses Water

Cristiano Ronaldo's action of moving Coca-Cola bottles saw the soft-drink company suffering as their stock prices dropped 1.6 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X