ಆಡಿಟೆಡ್ ವರದಿ ಸಲ್ಲಿಕೆಗೆ ಸಮಯ ಕೇಳಿದ ಕಾಫಿ ಡೇ

ಆರ್ಥಿಕ ವರ್ಷದ ಪ್ರಥಮಾರ್ಧ ಅವಧಿಯ ಆಡಿಟ್ ವರದಿ ಸಲ್ಲಿಕೆಗೆ ಸ್ಟಾಕ್ ಎಕ್ಸ್ ಚೇಂಜ್ ಗಳಿಂದ ಕಾಫಿ ಡೇ ಎಂಟರ್ ಪ್ರೈಸಸ್ ಹೆಚ್ಚುವರಿ ಸಮಯವನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ. ಲಿಸ್ಟಿಂಗ್ ನಿಯಮಗಳಿಗೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಫೆಬ್ರವರಿ ಮೂರನೇ ತಾರೀಕಿನಿಂದ ವಹಿವಾಟಿನಿಂದ ಅಮಾನತು ಮಾಡುವುದಾಗಿ ಈ ಹಿಂದೆ ಎಕ್ಸ್ ಚೇಂಜ್ ಗಳು ಎಚ್ಚರಿಕೆ ನೀಡಿದ್ದವು.

ಜನವರಿ ಇಪ್ಪತ್ತೊಂಬತ್ತನೇ ತಾರೀಕಿನ ಒಳಗೆ ಆಡಿಟ್ ಆದ ಫಲಿತಾಂಶದ ವರದಿ ಸಲ್ಲಿಸುವಂತೆ ಗಡುವು ವಿಧಿಸಲಾಗಿತ್ತು. ಆಡಿಟ್ ಆಗದ ಅಕ್ಟೋಬರ್ ಅಂತ್ಯದ ತ್ರೈಮಾಸಿಕದ ಫಲಿತಾಂಶವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ವಿ.ಜಿ. ಸಿದ್ಧಾರ್ಥ ಅವರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆಯು ತನಿಖೆ ಪೂರ್ಣಗೊಳಿಸಿದ ನಂತರ ಸಮಗ್ರ ಹಣಕಾಸಿನ ಫಲಿತಾಂಶ ಬಿಡುಗಡೆ ಮಾಡುವುದಾಗಿ ಕಂಪೆನಿ ಮಾಹಿತಿ ನೀಡಿತ್ತು.

ಆಡಿಟೆಡ್ ವರದಿ ಸಲ್ಲಿಕೆಗೆ ಸಮಯ ಕೇಳಿದ ಕಾಫಿ ಡೇ

ಕರ್ನಾಟಕದ ಚಿಕ್ಕಮಗಳೂರು ಮೂಲದ ವಿ.ಜಿ. ಸಿದ್ಧಾರ್ಥ ಕಾಫಿ ಡೇ ಸಂಸ್ಥಾಪಕರು. ಅವರ ಸಾವಿನ ಬಗ್ಗೆ ಅನುಮಾನಗಳಿದ್ದು, ಆ ಬಗ್ಗೆ ತನಿಖೆ ಆಗುತ್ತಿದೆ. ಸಿದ್ಧಾರ್ಥ ಅವರು ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಅಳಿಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+