For Quick Alerts
ALLOW NOTIFICATIONS  
For Daily Alerts

ಕಮರ್ಷಿಯಲ್ ಎಲ್‌ಪಿಜಿ ದರ 115.50 ರೂ ಇಳಿಕೆ; ಬೆಂಗಳೂರಲ್ಲಿ ಎಷ್ಟಿದೆ ಬೆಲೆ?

|

ನವದೆಹಲಿ, ನ. 1: ಭಾರತದ ತೈಲ ಮಾರುಕಟ್ಟೆ ಕಂಪನಿಗಳು ನಷ್ಟದಲ್ಲಿದ್ದರೂ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಂದು ಮಂಗಳವಾರ 115.50 ರೂಪಾಯಿಯಷ್ಟು ಇಳಿಕೆ ಮಾಡುವ ನಿರ್ಧಾರ ಕೈಗೊಂಡಿವೆ. ಜೂನ್ ತಿಂಗಳಿನಿಂದ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಯುತ್ತಿರುವುದು ಇದು ಏಳನೇ ಬಾರಿ. ಬೆಂಗಳೂರಿನಲ್ಲಿ ಈಗ 19 ಕಿಲೋ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆ 1815.50 ರೂಪಾಯಿಗೆ ಇಳಿಕೆಯಾಗಿದೆ. ಆದರೆ, 14.2 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಮತ್ತು ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್‌ನ ದರದಲ್ಲಿ ಯಾವುದೇ ಇಳಿಕೆಯಾಗಿಲ್ಲ.

 

19 ಕಿಲೋ ಕಮರ್ಷಿಯಲ್ ಗ್ಯಾಸ್ ಈಗ ಬೆಂಗಳೂರಿನಲ್ಲಿ 1815.50 ರೂ ಆದರೆ, ನವದೆಹಲಿಯಲ್ಲಿ 1,744 ರೂ ಇದೆ. ಮುಂಬೈನಲ್ಲಿ 1,696, ಕೋಲ್ಕತಾದಲ್ಲಿ 1,846, ಚೆನ್ನೈನಲ್ಲಿ 1,893 ರೂ ಇದೆ. ಬಹುತೇಕ ಎಲ್ಲಾ ನಗರಗಳಲ್ಲಿ 19 ಕಿಲೋ ಎಲ್‌ಪಿಜಿ ಕಮರ್ಷಿಯಲ್ ಗ್ಯಾಸ್ ಬೆಲೆ 1800-2000 ರೂ ಶ್ರೇಣಿಯಲ್ಲಿವೆ.

 

ಲಾಭದಲ್ಲಿರುವ ಎಕ್ಸಿಸ್ ಬ್ಯಾಂಕ್‌ನ 3 ಕೋಟಿಗೂ ಹೆಚ್ಚು ಷೇರುಗಳ ಮಾರಾಟ ಇಂದುಲಾಭದಲ್ಲಿರುವ ಎಕ್ಸಿಸ್ ಬ್ಯಾಂಕ್‌ನ 3 ಕೋಟಿಗೂ ಹೆಚ್ಚು ಷೇರುಗಳ ಮಾರಾಟ ಇಂದು

ಆದರೆ, ಅಡುಗೆ ಅನಿಲದ ಬೆಲೆಯನ್ನು ಇಳಿಸದಿರಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 1055.50 ರೂ ಇದೆ. ನವದೆಹಲಿಯಲ್ಲಿ ಇದು 1,053 ಇದ್ದರೆ, ಚೆನ್ನೈನಲ್ಲಿ 1,068.50 ರೂ ಇದೆ.

ಕಮರ್ಷಿಯಲ್ ಎಲ್‌ಪಿಜಿ ಬೆಲೆ 115.50 ರೂ ಇಳಿಕೆ

ಬೆಂಗಳೂರಿನಲ್ಲಿ ಎಲ್‌ಪಿಜಿ ಬೆಲೆ ಎಷ್ಟಿದೆ:
14.2 ಕಿಲೋ ಎಲ್‌ಪಿಜಿ ಸಿಲಿಂಡರ್: 1055.5 ರೂ
5 ಕಿಲೋ ಎಲ್‌ಪಿಜಿ ಸಿಲಿಂಡರ್: 388 ರೂ
19 ಕಿಲೋ ಎಲ್‌ಪಿಜಿ ಸಿಲಿಂಡರ್ (ಕಮರ್ಷಿಯಲ್ ಗ್ಯಾಸ್): 1815.50 ರೂ
47.5 ಕಿಲೋ ಎಲ್‌ಪಿಜಿ ಸಿಲಿಂಡರ್: 4534.50 ರೂ

ಕನ್ನಡ ರಾಜ್ಯೋತ್ಸವದಂದು ಡಿಜಿಟಲ್ ರುಪಾಯಿ ಪ್ರಾಯೋಗಿಕ ಆರಂಭಕನ್ನಡ ರಾಜ್ಯೋತ್ಸವದಂದು ಡಿಜಿಟಲ್ ರುಪಾಯಿ ಪ್ರಾಯೋಗಿಕ ಆರಂಭ

ನಷ್ಟದಲ್ಲಿ ಐಒಸಿ
ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಸಂಸ್ಥೆ ಎನಿಸಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಳೆದ ವಾರ ತನ್ನ ಎರಡನೇ ತ್ರೈಮಾಸಿಕ ಅವಧಿಯ ಲಾಭಾಂಶದ ವರದಿ ಪ್ರಕಟಿಸಿತ್ತು. ಅದರಂತೆ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಐಒಸಿ 272.35 ಕೋಟಿ ರೂ ನಿವ್ವಳ ನಷ್ಟ ಅನುಭವಿಸಿದೆ. ಇದು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ನಷ್ಟದ ಪ್ರಮಾಣ ಕಡಿಮೆ ಇದ್ದರೂ ಒಟ್ಟಾರೆ ದೇಶದಲ್ಲಿ ಪೆಟ್ರೋಲಿಯಂ ಕಂಪನಿಗಳ ಸಂಕಷ್ಟ ಸ್ಥಿತಿಗೆ ಕೈಗನ್ನಡಿಯಂತಿದೆ.

ಕಮರ್ಷಿಯಲ್ ಎಲ್‌ಪಿಜಿ ಬೆಲೆ 115.50 ರೂ ಇಳಿಕೆ

ಸರ್ಕಾರ ಸತತವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡದೇ ಹೋಗಿದ್ದು ಈ ನಷ್ಟಕ್ಕೆ ಕಾರಣ ಎನ್ನಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯನ್ನು ಕಡಿಮೆ ಬೆಲೆಗೆ ಮಾರಲಾಗುತ್ತಿರುವುದರಿಂದ ನಷ್ಟ ಉಂಟಾಗಿದೆ. ಐಒಸಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ನಷ್ಟ ಕಂಡಿರುವುದು. ಐಒಸಿಯಷ್ಟೇ ಅಲ್ಲ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳೂ ನಷ್ಟ ಅನುಭವಿಸುತ್ತಿವೆ.

English summary

Commercial LPG Gas Cylinder Price Slashed by Rs 115 on November

Indian oil marketing companies have reduced the price of 19KG commercial LPG cylinder by Rs. 115.50. But there is no price reduction for domestic LPG and other commercial gases.
Story first published: Tuesday, November 1, 2022, 12:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X