ಸತತ ಹತ್ತನೇ ದಿನ, ಮಂಗಳವಾರ ಕೂಡ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿದೆ. ಪೆಟ್ರೋಲ್ ಲೀಟರ್ ಗೆ 47 ಪೈಸೆ ಹಾಗೂ ಡೀಸೆಲ್ 57 ಪೈಸೆ ಹೆಚ್ಚಳವಾಗಿದೆ. ಈ ಹತ್ತು ದಿನಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 5.45 ರುಪಾಯಿ ಮತ್ತು ಡೀಸೆಲ್ 5.8 ರುಪಾಯಿ (ದೆಹಲಿಯಲ್ಲಿನ ದರ) ಏರಿಕೆ ಆಗಿದೆ. ಸದ್ಯಕ್ಕೆ ಪೆಟ್ರೋಲ್- ಡೀಸೆಲ್ ದರವು ವರ್ಷದ ಹಿಂದಿನ ಗರಿಷ್ಠ ಮಟ್ಟ ಮುಟ್ಟಿದೆ.
ಕಚ್ಚಾ ತೈಲ ದರವು ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯ ಕನಿಷ್ಠವಾದ $ 20/ಬ್ಯಾರಲ್ ಗೆ ಮುಟ್ಟಿತ್ತು. ಕಳೆದ ತಿಂಗಳು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ವರದಿಗಳ ಪ್ರಕಾರ, ತೈಲ ಕಂಪೆನಿಗಳಿಗೆ ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಮಾರಾಟದಲ್ಲಿ 8 ರುಪಾಯಿ ನಷ್ಟವಾಗುತ್ತಿದೆ. ಆದ್ದರಿಂದ ಆ ನಷ್ಟವನ್ನು ಭರಿಸುವುದಕ್ಕೆ ಮುಂದಿನ ಎರಡು ವಾರಗಳ ಕಾಲ ದರ ಏರಿಸಬಹುದು.

ಪ್ರಮುಖ ನಗರಗಳಲ್ಲಿನ ಪೆಟ್ರೋಲ್- ಡೀಸೆಲ್ ದರ
ನವದೆಹಲಿ: ಪೆಟ್ರೋಲ್ 76.73- ಡೀಸೆಲ್ 75.19
ಗುರ್ ಗಾಂವ್: ಪೆಟ್ರೋಲ್ 75.41- ಡೀಸೆಲ್ 67.96
ಮುಂಬೈ: ಪೆಟ್ರೋಲ್ 83.62- ಡೀಸೆಲ್ 73.75
ಚೆನ್ನೈ: ಪೆಟ್ರೋಲ್ 80.37- ಡೀಸೆಲ್ 73.17
ಹೈದರಾಬಾದ್: ಪೆಟ್ರೋಲ್ 79.65- ಡೀಸೆಲ್ 73.49
ಬೆಂಗಳೂರು: ಪೆಟ್ರೋಲ್ 79.22- ಡೀಸೆಲ್ 71.49


Click it and Unblock the Notifications