ಮಟನ್ ಕೇಜಿಗೆ 850ರಿಂದ 1200 ರುಪಾಯಿ; ಚಿಕನ್ ಕೂಡ ಕಾಸ್ಟ್ಲಿ

"ಉಳಿದ ಯಾವ ಸಮಯದಲ್ಲಿ ತಿನ್ನದಿದ್ದರೂ ಯುಗಾದಿ ಹಬ್ಬದ ಮಾರನೇ ದಿನ ನಾನ್ ವೆಜ್ ತಿಂತೀವಿ. ಈ ಸಲ ವರ್ಷ ತೊಡಕಿಗೂ ನಾನ್ ವೆಜ್ ತಿನ್ನುವುದಕ್ಕೆ ಆಗಿರಲಿಲ್ಲ. ಏಪ್ರಿಲ್ 1ನೇ ತಾರೀಕು ಮಟನ್ ತಂದಿದ್ದೆ. ಕೇಜಿಗೆ 785 ರುಪಾಯಿ ಕೊಟ್ಟೆ. ಚಿಕನ್ ರೇಟ್ ಕೇಜಿಗೆ 160ರಿಂದ 180 ರುಪಾಯಿ ಆಗಿದೆ" ಎಂದರು ಬೆಂಗಳೂರಿನ ಶ್ರೀನಗರ ನಿವಾಸಿ, ವೃತ್ತಿಯಿಂದ ಎಲೆಕ್ಟ್ರಿಕ್ ಕಾಂಟ್ರ್ಯಾಕ್ಟರ್ ಆಗಿರುವ ದೇವಾನಂದ.

ತರಕಾರಿಗಳ ಜತೆಗೆ ಮಟನ್, ಚಿಕನ್ ಬೆಲೆ ಸಹ ವಿಪರೀತ ಹೆಚ್ಚಾಗಿದೆ ಎಂಬ ಹಿನ್ನೆಲೆಯಲ್ಲಿ ಗುಡ್ ರಿಟರ್ನ್ಸ್ ಕನ್ನಡದಿಂದ ಅವರನ್ನು ಮಾತನಾಡಿಸಲಾಯಿತು. "ಕೊರೊನಾದ ಕಾರಣಕ್ಕೆ ಮೈಸೂರು ಸುತ್ತಮುತ್ತ ಚಿಕನ್ ತಿನ್ನೋದು ಕಡಿಮೆ ಆಗಿರಬಹುದು ಹಾಗೂ ಬೆಲೆಯೂ ಇಳಿದಿರಬಹುದು. ಅಥವಾ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಹೀಗಿರಬಹುದು. ಆದರೆ ಬೆಂಗಳೂರಿನಲ್ಲಿ ಬೆಲೆ ಏನೂ ಕಡಿಮೆ ಆಗಿಲ್ಲ" ಎಂದು ಅವರು ಹೇಳಿದರು.

ಕೇಜಿ ಮಟನ್ 850ರಿಂದ 1200ರ ತನಕ ಇತ್ತು

ಕೇಜಿ ಮಟನ್ 850ರಿಂದ 1200ರ ತನಕ ಇತ್ತು

"ವರ್ಷ ತೊಡಕಿಗೆ ಗುಡ್ಡೆ ಮಾಂಸಕ್ಕೆ ಅಂತ ಚೀಟಿ ಹಾಕ್ತೀವಿ. ಈ ಸಲ ಮಾಂಸದ ಬದಲಿಗೆ ಬೇರೆ ಗಿಫ್ಟ್ ಕೊಟ್ಟಿದ್ದಾರೆ. ಆ ದಿನ ಕೇಜಿ ಮಟನ್ 850 ರುಪಾಯಿಯಿಂದ 1200ರ ತನಕ ಇತ್ತು. ಜತೆಗೆ ಮನೆಯಿಂದ ಆಚೆ ಹೋಗುವುದು ಸಹ ಕಷ್ಟ ಇತ್ತು. ಇನ್ನು ಐದು ಜನ ಇರುವ ಒಂದು ಕುಟುಂಬಕ್ಕೆ ಒಂದರಿಂದ ಒಂದೂವರೆ ಕೇಜಿ ಮಟನ್ ಬೇಕಾಗುತ್ತದೆ.

ಮಾಮೂಲಿ ದಿನಗಳಲ್ಲಾದರೆ 450- 480 ರುಪಾಯಿ

ಮಾಮೂಲಿ ದಿನಗಳಲ್ಲಾದರೆ 450- 480 ರುಪಾಯಿ

"ಅದರಲ್ಲೂ ತಲೆ ಮಾಂಸ, ಕಾಲು, ರಕ್ತ, ಚರ್ಬಿ ಇಂಥದ್ದಕ್ಕೆ ಬೇರೆ ರೇಟ್. ಮಾಮೂಲಿ ದಿನಗಳಲ್ಲಾದರೆ 450- 480 ರುಪಾಯಿ ಒಂದು ಕೇಜಿ ಮಟನ್ ರೇಟ್ ಇರ್ತಿತ್ತು. ಆದರೆ ಈಗಂತೂ ಡಬಲ್ ಆಗಿಹೋಗಿದೆ. ನಮ್ಮ ಮನೆಯಲ್ಲಿ ಚಿಕನ್, ಫಿಷ್ ಗಿಂತ ಮಟನ್ ಇಷ್ಟ ಪಡುತ್ತಾರೆ. ಆದ್ದರಿಂದ ಬೇರೆ ದಾರಿಯಿಲ್ಲ. ರೇಟ್ ಜಾಸ್ತಿಯಾದರೂ ಅದೇ ಬೇಕು" ಎಂದು ಅವರು ತಿಳಿಸಿದರು.

ಪಾಪಣ್ಣನ ಅಂಗಡಿಯ ಮಟನ್ ಬಹಳ ಫೇಮಸ್

ಪಾಪಣ್ಣನ ಅಂಗಡಿಯ ಮಟನ್ ಬಹಳ ಫೇಮಸ್

ಬಾಪೂಜಿನಗರದ ಪಾಪಣ್ಣನ ಅಂಗಡಿಯ ಮಟನ್ ಬಹಳ ಫೇಮಸ್. ಕಳೆದ ಬಾರಿ ವರ್ಷ ತೊಡಕಿಗೆ ಮಟನ್ ಒಂದು ಕೇಜಿಗೆ 600 ರುಪಾಯಿ ಆಗಿತ್ತು. ಆಗ ಅದು ಸುದ್ದಿಯಾಗೆಲ್ಲ ಪ್ರಸಾರ ಆಗಿತ್ತು. ಈ ಸಲವಂತೂ ಅದರ ಎರಡು ಪಟ್ಟು ರೇಟ್ ಆಗಿದೆ. ಆದರೆ ಹೆಚ್ಚಿನ ಸುದ್ದಿ ಆಗಿಲ್ಲ ಅಷ್ಟೇ.

ಸರ್ಕಾರದ ಆದೇಶದಿಂದ ನಿಟ್ಟುಸಿರು

ಸರ್ಕಾರದ ಆದೇಶದಿಂದ ನಿಟ್ಟುಸಿರು

ಕುರಿ, ಮೇಕೆ, ನಾಟಿ ಕೋಳಿ, ಫಾರಂ ಕೋಳಿ ಹೀಗೆ ಒಂದೊಂದಕ್ಕೆ ಒಂದೊಂದು ರೇಟ್ ಇದೆ. ಆದರೆ ಸದ್ಯಕ್ಕಂತೂ ಬೆಲೆ ದುಬಾರಿ ಆಗಿದೆ. ಜನರಲ್ಲಿ ನಾನ್ ವೆಜ್ ತಿನ್ನೋದರ ಬಗ್ಗೆ ಹೆದರಿಕೆ ಇತ್ತು. ಆದರೆ ಸರ್ಕಾರದಿಂದಲೇ ಆದೇಶ ಬಂದಿದ್ದರಿಂದ ಸ್ವಲ್ಪ ಮಟ್ಟಿಗೆ ಧೈರ್ಯ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+