For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು

|

ಕೊರೊನಾ ವೈರಸ್‌ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸದ ಪರಿಣಾಮ ಆರ್ಥಿಕತೆಗೆ 30.3 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಸಂಶೋಧನಾ ವರದಿ ತಿಳಿಸಿದೆ.

ದೇಶದ ಜಿಡಿಪಿ 2019-20ರ ಜನವರಿ-ಮಾರ್ಚ್‌ ಅವಧಿಯಲ್ಲಿ 1.2 ಪರ್ಸೆಂಟ್‌ ಕುಸಿತಕ್ಕೀಡಾಗುವ ನಿರೀಕ್ಷೆ ಇದೆ ಎಂದೂ ತಿಳಿಸಿದೆ. ರಾಷ್ಟ್ರೀಯ ಅಂಕಿ ಅಂಶಗಳ ಸಂಘಟನೆ (ಎನ್‌ಎಸ್‌ಒ) ಮೇ 29 ರಂದು ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ವರದಿ ಬಿಡುಗಡೆಗೊಳಿಸಲಿದೆ. ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ 4.7 ಪರ್ಸೆಂಟ್‌ರಷ್ಟಿತ್ತು. ಕೊರೊನಾ ಬಿಕ್ಕಟ್ಟಿನ ಪರಿಣಾಮ ಆರ್ಥಿಕ ಬೆಳವಣಿಗೆ ಮುಗ್ಗರಿಸಿದೆ ಎಂದು ತಿಳಿಸಿದೆ.

ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು

ರಾಜ್ಯಗಳ ಪೈಕಿ ಮಹಾರಾಷ್ಟ್ರ (15.6 ಪರ್ಸೆಂಟ್‌), ತಮಿಳುನಾಡು ( 9.4 ಪರ್ಸೆಂಟ್) ಮತ್ತು ಗುಜರಾತ್‌ ( 8.6 ಪರ್ಸೆಂಟ್) ಅತಿ ಹೆಚ್ಚು ಜಿಡಿಪಿ ನಷ್ಟಕ್ಕೀಡಾಗಿದೆ ಎಂದು ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಂತಿ ಘೋಷ್‌ ತಿಳಿಸಿದ್ದಾರೆ.

ಕೆಂಪು ವಲಯಗಳಲ್ಲಿ 50 ಪರ್ಸೆಂಟ್‌ರಷ್ಟು ನಷ್ಟ ಸಂಭವಿಸಿದ್ದು, ಬಹುಪಾಲು ದೊಡ್ಡ ಜಿಲ್ಲೆಗಳು ಅಲ್ಲಿವೆ. ಹಸಿರು ವಲಯದಲ್ಲಿ ಗ್ರಾಮಾಂತರ ಪ್ರದೇಶಗಳಿದ್ದು, ಅಲ್ಲಿ ಸಂಭವಿಸಿರುವ ನಷ್ಟ ಕಡಿಮೆ. ಮುಂದಿನ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸುವ ಸುಳಿವನ್ನೂ ವರದಿ ನೀಡಿದೆ.

English summary

Corona Impact 30 Lakh Crore Loss To India's Economy Says SBI Report

Corona Impact India Staring at its first recession in 40 years And 30 Lakh crore loss says sbi research report
Story first published: Wednesday, May 27, 2020, 14:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X