For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್‌: ಆನ್‌ಲೈನ್‌ನಲ್ಲೇ BMW, ಮರ್ಸಿಡಿಸ್, ವೋಕ್ಸ್‌ವಾಗನ್ ಕಾರುಗಳ ಮಾರಾಟ

|

ದೇಶದಲ್ಲಿ ಕೊರೊನಾವೈರಸ್ ಎಷ್ಟರ ಮಟ್ಟಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ತಲ್ಲಣಗೊಳಿಸಿದೆ ಎಂದರೆ ಆನ್‌ಲೈನ್ ಇಲ್ಲದೆ ಏನು ಇಲ್ಲ ಎಂಬಂತೆ ಬದಲಾಯಿಸಿ ಬಿಟ್ಟಿದೆ. ದಿನಸಿ ಅಂಗಡಿಗಳು, ಮೆಡಿಕಲ್, ಕೃಷಿಗೆ ಸಂಬಂಧಿಸಿದ ಮಾರಾಟ ಮಳಿಗೆ ಬಿಟ್ಟರೆ ಉಳಿದ ಬಹುತೇಕ ವ್ಯಾಪಾರ-ವಹಿವಾಟು ಆನ್‌ಲೈನ್‌ ಮೂಲಕ ನಡೆಯಬೇಕಾದ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ.

ಕೊರೊನಾದಿಂದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದೀಗ ಕಾರುಗಳನ್ನು ಕೂಡ ಆನ್‌ಲೈನ್‌ನಲ್ಲೇ ಮಾರಾಟ ಮಾಡಲು ಕಾರು ತಯಾರಿಕಾ ಕಂಪನಿಗಳು ಶುರು ಮಾಡಿವೆ. ವೋಕ್ಸ್‌ವಾಗನ್, ಬಿಎಂಡಬ್ಲ್ಯೂ, ಮರ್ಸಿಡಿಸ್ ಕಂಪನಿಗಳು ಆನ್‌ಲೈನ್ ಮೂಲಕ ವಾಹನಗಳನ್ನು ಮಾರಾಟ ಮಾಡಲು ಮುಂದಾಗಿವೆ. ಮನೆಯಲ್ಲೇ ಇದ್ದುಕೊಂಡು ಗ್ರಾಹಕರು ಕಾರು ಬುಕ್‌ ಮಾಡಬಹುದಾಗಿದೆ.

ಆನ್‌ಲೈನ್‌ನಲ್ಲೇ BMW, ಮರ್ಸಿಡಿಸ್, ವೋಕ್ಸ್‌ವಾಗನ್ ಕಾರುಗಳ ಮಾರಾಟ

ಈ ಕುರಿತು ಅಧಿಕೃತವಾಗಿ ತಿಳಿಸಿರುವ ವೋಕ್ಸ್‌ವಾಗನ್ ತನ್ನ ಮಾರಾಟ ಮತ್ತು ಸೇವೆಯನ್ನು ಡಿಜಿಟಲೀಕರಣ ಮಾಡುತ್ತಿರುವುದಾಗಿ ತಿಳಿಸಿದೆ. ಇದು ಅತ್ಯಂತ ಸುಲಭ ಪ್ರಕ್ರಿಯೆಯಾಗಿದ್ದು, ಗ್ರಾಹಕರು ತಮಗೆ ಬೇಕಾದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಇನ್ನು ಮರ್ಸಿಡಿಸ್ ಕಂಪನಿಯು ತನ್ನ ಆನ್‌ಲೈನ್ ವೇದಿಕೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತಿದೆ. ಜೊತೆಗೆ ಹೊಸ ಮತ್ತು ಹಳೆ ಕಾರುಗಳ ಖರೀದಿ, ಸೇವೆಗಳು ಮತ್ತು ಆನ್‌ಲೈನ್ ಪಾವತಿ ಆಯ್ಕೆಗಳು ಲಭ್ಯ ಇವೆ ಎಂದು ಬಿಎಂಡಬ್ಲ್ಯೂ ತಿಳಿಸಿದೆ.

English summary

Corona Impact BMW Mercedes And Volkswagen Take Online Sales Route

After the nation-wide movement restrictions end, automakers have started launching their online sales portals where customers can buy vehicles without physically visiting dealerships.
Story first published: Tuesday, April 28, 2020, 9:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X