2021ರ ಅಂತ್ಯಕ್ಕೆ ಚಿನ್ನದ ಬೆಲೆ 10 ಗ್ರಾಂ 82,000 ರುಪಾಯಿ ತಲುಪಬಹುದು: ವಿಶ್ಲೇಷಕರು

ಕೊರೊನಾವೈರಸ್ ಕಾರಣ ಯಾವುದೇ ಕ್ಷೇತ್ರದ ಮೇಲೂ ಹೂಡಿಕೆ ಸುರಕ್ಷಿತವಲ್ಲದ ಕಾರಣ ಹೂಡಿಕೆದಾರರು ಪರ್ಯಾಯ ಮಾರ್ಗಗಳನ್ನು ಅನುಸರಿಸಿದ್ದಾರೆ. ಷೇರುಗಳು ಮತ್ತು ಬಾಂಡ್‌ಗಳು ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಹೆಚ್ಚಿನ ಭರವಸೆಯನ್ನು ತೋರಿಸದ ಕಾರಣ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಕೊರೊನಾವೈರಸ್ ದೀರ್ಘಕಾಲಿಕವಾಗಿ ಮುಂದುವರಿದರೆ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2021 ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಔನ್ಸ್‌ಗೆ (Oz) 3,000 ಅಮೆರಿಕನ್ ಡಾಲರ್ ಏರಬಹುದು ಎಂದು ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯುರಿಟೀಸ್ (ಬೋಫಾ ಸೆಕ್) ನ ವಿಶ್ಲೇಷಕರು ಅಂದಾಜಿಸಿದ್ದಾರೆ. ಅಂದರೆ ಪ್ರಸ್ತುತ ವಿನಿಮಯ ದರದಲ್ಲಿ 10 ಗ್ರಾಂ ಚಿನ್ನಕ್ಕೆ ಸುಮಾರು 82,000 ರುಪಾಯಿ..

2021ರ ಅಂತ್ಯಕ್ಕೆ ಚಿನ್ನದ ಬೆಲೆ 10ಗ್ರಾಂ 82,000 ರುಪಾಯಿ ತಲುಪಬಹುದು!

ಗುರುವಾರ MCXನಲ್ಲಿ ಜೂನ್‌ ತಿಂಗಳ ಚಿನ್ನದ ಭವಿಷ್ಯವು 10 ಗ್ರಾಂಗೆ 46,352 ರುಪಾಯಿಗೆ ವಹಿವಾಟು ಅಂತ್ಯಗೊಂಡಿದೆ. ಆದ್ದರಿಂದ ಮುಂದಿನ ಸುಮಾರು ಒಂದೂವರೆ ವರ್ಷಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆಗಳು 75 ಪರ್ಸೆಂಟ್ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಪ್ರಸ್ತುತ ಸುಮಾರು 1,750 ಅಮೆರಿಕನ್ ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಮತ್ತೊಂದು ಜಾಗತಿಕ ಹಣಕಾಸು ಶಕ್ತಿ ಕೇಂದ್ರವಾದ ಗೋಲ್ಡ್ಮನ್ ಸ್ಯಾಚ್ಸ್‌ನ ವಿಶ್ಲೇಷಕರ ಪ್ರಕಾರ ಪ್ರಸ್ತುತ ಜಾಗತಿಕ ಮಾರುಕಟ್ಟೆ ಸನ್ನಿವೇಶವನ್ನು ಗಮನಿಸಿದರೆ ಹಳದಿ ಲೋಹದ ಮೇಲಿನ ಹೂಡಿಕೆಯು ಕಚ್ಚಾ ತೈಲಕ್ಕಿಂತ ಉತ್ತಮವಾಗಿದೆ ಎಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+