"ಇನ್ಫೋಸಿಸ್ ನಲ್ಲಿ ವೇತನ ಹೆಚ್ಚಳ, ಬಡ್ತಿ ನೀಡಲ್ಲ"

ಕೊರೊನಾ ವೈರಾಣು ವ್ಯಾಪಿಸಿರುವುದರಿಂದ ಜಾಗತಿಕವಾಗಿ ಆರ್ಥಿಕ ಸಮಸ್ಯೆ ಇದೆ. ಆದ್ದರಿಂದ ಈ ಬಾರಿ ಬಡ್ತಿ, ವೇತನ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ ಎಂದು ಭಾರತದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ (ಐ.ಟಿ.) ಸೇವೆಯನ್ನು ಒದಗಿಸುವ ಇನ್ಫೋಸಿಸ್ ಸೋಮವಾರ ತಿಳಿಸಿದೆ.

ಆದರೆ, ಹೊಸದಾಗಿ ಉದ್ಯೋಗ ಅವಕಾಶ ನೀಡಿರುವುದನ್ನು ಮಾನ್ಯ ಮಾಡುತ್ತೇವೆ ಎಂದು ಮಾಹಿತಿ ನೀಡಿದೆ. ಕಂಪೆನಿಯ ಸಿಇಒ ಹಾಗೂ ಎಂ.ಡಿ. ಸಲೀಲ್ ಪಾರೆಖ್ ಮಾತನಾಡಿ, ಇನ್ಫೋಸಿಸ್ ತಂಡವು 93 ಪರ್ಸೆಂಟ್ ನಷ್ಟು ರಿಮೋಟ್ ವರ್ಕಿಂಗ್ ಸಾಧಿಸಿದೆ. ಬದಲಾಗಿರುವ ಪರಿಸ್ಥಿತಿಯಲ್ಲೂ ಗ್ರಾಹಕರಿಗೆ ಸ್ಥಿರವಾಗಿ ಹಾಗೂ ಶೀಘ್ರವಾಗಿ ಸೇವೆ ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಇನ್ಫೋಸಿಸ್ ನ ಸಿಒಒ ಪ್ರವೀಣ್ ರಾವ್ ಮಾತನಾಡಿ, ಮಾರ್ಚ್ ಕೆಲವು ವಾರಗಳಿಂದ ಕೊರೊನಾದ ಕಾರಣಕ್ಕೆ ಕಾರ್ಯ ನಿರ್ವಹಣೆ ವಿಧಾನ ಅಸ್ತವ್ಯಸ್ತವಾಗಿದ್ದು, ಆದರೂ ವ್ಯವಹಾರ ಮುಂದುವರಿಸಿಕೊಂಡು ಹೋಗುವ ಬಗ್ಗೆ ಕಂಪೆನಿ ಬಳಿ ಯೋಜನೆ ಇದೆ ಎಂದಿದ್ದಾರೆ.

ಟಿಸಿಎಸ್ ಈಗಾಗಲೇ ವೇತನ ಹೆಚ್ಚಳವನ್ನು ಸ್ಥಗಿತ ಮಾಡಿದೆ. ಜತೆಗೆ ಈಗ ಹೊಸದಾಗಿ ನಲವತ್ತು ಸಾವಿರ ಮಂದಿಗೆ ಉದ್ಯೋಗಕ್ಕೆ ಅವಕಾಶ ನೀಡಿದ್ದು, ಅವರೆಲ್ಲರನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+