For Quick Alerts
ALLOW NOTIFICATIONS  
For Daily Alerts

ಕೊರೊನಾ ಪ್ರಭಾವದಿಂದ ಚೇತರಿಸಿಕೊಳ್ಳಲು ಆರ್ಥಿಕತೆಗೆ ಎಷ್ಟು ಸಮಯ ಬೇಕು?

|

ಈಗಿನ ಲಾಕ್ ಡೌನ್ ಅವಧಿ 21 ದಿನಗಳನ್ನು ದಾಟುವುದಿಲ್ಲ ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಹೇಳಿದ್ದಾರೆ. ಆದರೆ ಕೊರೊನಾ ವೈರಾಣು ಮಾಡಿದ 'ಆರ್ಥಿಕ ಗಾಯ' ಮಾಯುವುದಕ್ಕೆ ಬಹಳ ಸಮಯ ಕಾಯಬೇಕಾಗಬಹುದು. ವ್ಯಾಪಾರ- ಉದ್ಯಮಗಳಿಗೆ ಬೇಡಿಕೆ ಕುಸಿದಿದ್ದು, ಮತ್ತೆ ಮಾಮೂಲಿ ಸ್ಥಿತಿಗೆ ಬರಲು 6 ತಿಂಗಳು ಸಮಯ ಬೇಕಾಗಬಹುದು ಎನ್ನಲಾಗುತ್ತಿದೆ.

- ಇದು ಎಫ್ ಐಸಿಸಿಐ ಸಮೀಕ್ಷೆಯಲ್ಲಿ ತಿಳಿದುಬಂದಿರುವ ಸಂಗತಿ. ಶೇಕಡಾ 42ರಷ್ಟು ಕಂಪೆನಿಗಳು ಅಭಿಪ್ರಾಯ ಪಡುವಂತೆ, ವ್ಯಾಪಾರ- ವ್ಯವಹಾರ ಸಹಜ ಸ್ಥಿತಿಗೆ ಮರಳುವುದಕ್ಕೆ 3 ತಿಂಗಳು ಸಮಯ ಹಿಡಿಯಬಹುದು. ಇನ್ನು ಶೇಕಡಾ 47ರಷ್ಟು ಕಂಪೆನಿಗಳು ತಿಳಿಸುವಂತೆ 6 ತಿಂಗಳು ಸಮಯ ಬೇಕಾಗಬಹುದು.

ಕೊರೊನಾವೈರಸ್‌ನ ಪರಿಣಾಮ, ಜಗತ್ತು ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆಕೊರೊನಾವೈರಸ್‌ನ ಪರಿಣಾಮ, ಜಗತ್ತು ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ

ಇನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡ ಉಳಿದ 6 ಪರ್ಸೆಂಟ್ ನಷ್ಟು ಕಂಪೆನಿಗಳು, ಮತ್ತೆ ಹಿಂದಿನ ಸ್ಥಿತಿಗೆ ವ್ಯಾಪಾರ- ವ್ಯವಹಾರ ಮರಳುವುದಕ್ಕೆ ಒಂದಿಡೀ ವರ್ಷ ಬೇಕಾಗಬಹುದು ಎಂದಿವೆ. ಕೊರೊನಾದ ಆರಂಭ ಹಂತದಲ್ಲಿ ಅರ್ಧಕ್ಕಿಂತ ಹೆಚ್ಚು ವ್ಯಾಪಾರಕ್ಕೆ ಹೊಡೆತ ಬಿದ್ದಿವೆ. ಹಲವು ಕಂಪೆನಿಗಳ ಆರ್ಡರ್ ಗಳಲ್ಲಿ ದಿಢೀರ್ ಕುಸಿತವಾಗಿವೆ. ವಸ್ತುಗಳ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು, ಅದರ ಪರಿಣಾಮವಾಗಿ ನಗದು ಹರಿವು ಕೂಡ ಕಡಿಮೆ ಆಗಿದೆ.

ಕೊರೊನಾ ಪ್ರಭಾವದಿಂದ ಚೇತರಿಸಿಕೊಳ್ಳಲು ಆರ್ಥಿಕತೆಗೆ ಎಷ್ಟು ಸಮಯ ಬೇಕು?

ದೇಶದಾದ್ಯಂತ ಸರಕುಗಳ ಸಾಗಣೆಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರಿಂದ ವಸ್ತುಗಳ ಪೂರೈಕೆ ಶೀಘ್ರದಲ್ಲೇ ಸರಿಹೋಗಲಿದೆ ಎಂಬ ನಿರೀಕ್ಷೆ ಇದೆ. ಈ ಮಧ್ಯೆ ಕೆಲವು ಅಂತರರಾಷ್ಟ್ರೀಯ ಏಜೆನ್ಸಿಗಳು ಕೊರೊನಾದಿಂದ ಎಷ್ಟು ನಷ್ಟವಾಗಿದೆ ಎಂದು ಅಂದಾಜಿಸಿವೆ. ಭಾರತದ ಆರ್ಥಿಕತೆಗೆ 38.7 ಕೋಟಿ ಅಮೆರಿಕನ್ ಡಾಲರ್ ನಷ್ಟ ಆಗಿರಬಹುದು. ಇನ್ನು 290.9 ಕೋಟಿ ಡಾಲರ್ ಮೊತ್ತವು ಗ್ರಾಹಕರು ಬಳಕೆ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ನಷ್ಟ ಆಗಿದೆ ಎನ್ನಲಾಗುತ್ತಿದೆ.

English summary

Corona Lock Down: How Many Days Require For Business To Recover?

Due to Corona India announced 21 days lock down. But how many days require to recover for business from this in India? Here is the details.
Story first published: Monday, March 30, 2020, 14:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X