ಕೊರೊನಾ ಲಾಕ್ ಡೌನ್ ಗೆ ಕರ್ನಾಟಕದಲ್ಲಿ ಸಾಕಷ್ಟು ವಿನಾಯಿತಿಗಳನ್ನು ಘೋಷಿಸಲಾಗಿದೆ. ಸರ್ಕಾರದಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಕಾರ್ಯ ನಿರ್ವಹಣೆಗೆ ಅನುಮತಿ ನೀಡಲಾಗಿದೆ. ಆದರೆ ರೆಡ್ ಹಾಗೂ ಕಂಟೇನ್ ಮೆಂಟ್ ಝೋನ್ ಗಳಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ.
ಕಂಟೇನ್ ಮೆಂಟ್ ಝೋನ್ ಗಳಲ್ಲಿ ಕಠಿಣ ನಿರ್ಬಂಧಗಳು ಮುಂದುವರಿಯಲಿವೆ. ಉಳಿದೆಡೆಗಳಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭ ಆಗಲಿವೆ. ಆದರೆ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಗೆ ಆದೇಶಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳು ಬಂದ ನಂತರ, ಸಚಿವರ ಜತೆಗೆ ಚರ್ಚಿಸಿದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯ ಸರ್ಕಾರ ಘೋಷಣೆ ಮಾಡಿದ ಪ್ರಕಾರ, ಎಲ್ಲ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ರಾಜ್ಯದೊಳಗೆ ಎಲ್ಲ ರೈಲುಗಳು ಸಂಚಾರ ಮಾಡಲಿವೆ. ಬಸ್ ಗಳಲ್ಲಿ 30 ಮಂದಿ ಪ್ರಯಾಣಿಸಬಹುದು. ಆದರೆ ಮುಖಕ್ಕೆ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ.

ಟ್ಯಾಕ್ಸಿ, ಆಟೋಗಳಲ್ಲಿ ಚಾಲಕರೂ ಸೇರಿದಂತೆ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ. ಸಲೂನ್, ಸ್ಪಾ ತೆರೆಯಬಹುದು. ಮಾಲ್ ಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ತೆರೆಯುವಂತಿಲ್ಲ. ಇನ್ನು ಉದ್ಯಾನವನಗಳನ್ನು ಬೆಳಗ್ಗೆ 7ರಿಂದ 9ರ ತನಕ ಹಾಗೂ ಸಂಜೆ 5ರಿಂದ ರಾತ್ರಿ 7ರ ತನಕ ತೆರೆಯಲು ಅನುಮತಿ ನೀಡಲಾಗಿದೆ. ಉಳಿದಂತೆ ರಾತ್ರಿ 7ರಿಂದ ಬೆಳಗ್ಗೆ 7ರ ತನಕ ಕರ್ಫ್ಯೂ ಮುಂದುವರಿಯಲಿದೆ.
More From GoodReturns

Karnataka Rain: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆಯಾರ್ಭಟ ಫಿಕ್ಸ್; ಜನರೇ ಎಚ್ಚರ!

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

KOMUL Milk Price: ಕೋಲಾರ ರೈತರಿಗೆ ಯುಗಾದಿ ಗಿಫ್ಟ್; ಕೋಮುಲ್ ಹಾಲು ದರ 39.85 ರೂ.ಗೆ ಏರಿಕೆ

Karnataka By Election: ಪಂಚ ರಾಜ್ಯ ಚುನಾವಣೆ ಜೊತೆ ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ; ದಿನಾಂಕ ತಿಳಿಯಿರಿ

Karnataka Weather: ಬಿಸಿಲಲ್ಲಿ ಬೆಂದು ಹೋಗಿರುವ ಈ ಪ್ರದೇಶಗಳಲ್ಲಿ ಮಳೆ ಸಾಧ್ಯತೆ; ಎಲ್ಲಿ ತಿಳಿಯಿರಿ

Bidadi Township: ಬಿಡದಿ ಟೌನ್ಶಿಪ್ ಯೋಜನೆ; 7,000 ಎಕರೆಗೂ ಅಧಿಕ ಭೂಸ್ವಾಧೀನಕ್ಕೆ ಸರ್ಕಾರ ಸಿದ್ಧ

Egg Price Karnataka: ಕೋಳಿ ಮೊಟ್ಟೆ ದರ 7 ರಿಂದ 4 ರೂ.ವರೆಗೆ ಇಳಿಕೆ; ಕೋಳಿ ಸಾಕಾಣಿಕಾರರಿಗೆ ಟೆನ್ಶನ್

Karnataka Ration Card: ಪಡಿತರ ಚೀಟಿ ಪಡೆಯಲು ದೊಡ್ಡ ಬದಲಾವಣೆ.. ಆದಾಯ ಮಿತಿ 3 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ

Karnataka 2nd PUC: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್…ಪಾಸಾಗಲು ಕೇವಲ 2 ವರ್ಷ ಮಾತ್ರ ಅವಕಾಶ

Eid-ul-Fitr 2026: ಭಾರತದಲ್ಲಿ ರಂಜಾನ್ ಹಬ್ಬ ಯಾವಾಗ? ಇದೇ ದಿನ ಕಾಣಿಸಲಿದೆ ಚಂದ್ರ

Karnataka Weather: ಅಯ್ಯೋ, ಎಂಥಾ ಬಿಸಿಲು? ಜನರೇ ಹೊರಹೋಗುವ ಮುನ್ನ ಎಚ್ಚರ



Click it and Unblock the Notifications