"ಲಾಕ್ ಡೌನ್ ಅವಧಿ 21 ದಿನ ಮೀರಿ ವಿಸ್ತರಣೆ ಆಗಲ್ಲ"

ಕೊರೊನಾ ವೈರಾಣು ಆತಂಕದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ 6ನೇ ದಿನದಲ್ಲಿ ಇದ್ದೇವೆ. ಈ ಲಾಕ್ ಡೌನ್ ಅವಧಿ ವಿಸ್ತರಣೆ ಆಗುತ್ತದೆ ಎಂಬ ವರದಿಯನ್ನು ಸರ್ಕಾರ ನಿರಾಕರಿಸಿದೆ. "ಈಗಿನ ಲಾಕ್ ಡೌನ್ ಮುಗಿದ ಮೇಲೆ ಅವಧಿ ವಿಸ್ತರಣೆ ಮಾಡಲಾಗುತ್ತದೆ ಎಂಬ ವದಂತಿ ಹಾಗೂ ಮಾಧ್ಯಮಗಳ ವರದಿ ಇದೆ. ಆದರೆ ಇದು ಆಧಾರ ರಹಿತ ಎಂದು ಸಂಪುಟ ಕಾರ್ಯದರ್ಶಿ ನಿರಾಕರಿಸಿದ್ದಾರೆ" ಎಂದು ಪಿಐಬಿ ಟ್ವೀಟ್ ಮಾಡಿದೆ.

ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಮಾತನಾಡಿ, ಲಾಕ್ ಡೌನ್ ಅವಧಿ ವಿಸ್ತರಿಸುವ ಯಾವ ಯೋಜನೆಯೂ ಇಲ್ಲ. ಅಂಥ ವರದಿಗಳನ್ನು ನೋಡಿ ನನಗೆ ಅಚ್ಚರಿಯಾಯಿತು. ಲಾಕ್ ಡೌನ್ ಅವಧಿ ವಿಸ್ತರಿಸುವ ಯಾವ ಇರಾದೆಯೂ ಇಲ್ಲ ಎಂದು ಹೇಳಿದ್ದಾರೆ.

ಭಾನುವಾರದ ಸಂಜೆ ತನಕದ ಲೆಕ್ಕ ಹೇಳುವುದಾದರೆ, ಭಾರತದಲ್ಲಿ ಕೊರೊನಾ ಪಾಸಿಟಿವ್ ಆದವರ 1000ಕ್ಕೂ ಹೆಚ್ಚು ಪ್ರಕರಣ ಇದ್ದವು. ಇನ್ನು ಸಾವಿನ ಸಂಖ್ಯೆ 27 ಮುಟ್ಟಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ನಿಂದ ಕನಿಷ್ಠ 34,931 ಕೊರೊನಾ ಪರೀಕ್ಷೆ ಮಾಡಲಾಗಿದೆ.

ಅಂದ ಹಾಗೆ ಲಾಕ್ ಡೌನ್ ನಿಂದ ಕೆಲವು ವಿನಾಯಿತಿ ನೀಡಲಾಗಿದೆ. ಎಲ್ಲ ಬಗೆಯ ಸರಕು ಸಾಗಣೆಗೆ ಸರ್ಕಾರ ಅನುಮತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+