For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್ ಡೌನ್ ಜೂನ್ 1ರ ತನಕ ವಿಸ್ತರಿಸಿದ ಸಿಂಗಾಪೂರ್

|

ಕೊರೊನಾ ವೈರಾಣು ಹಬ್ಬದಂತೆ ತಡೆಯುವ ಉದ್ದೇಶದಿಂದ ಸಿಂಗಾಪೂರ್ ನಲ್ಲಿ ಸದ್ಯಕ್ಕೆ ಇರುವ ಭಾಗಶಃ ಲಾಕ್ ಡೌನ್ ಅವಧಿಯನ್ನು ನಾಲ್ಕು ವಾರಗಳ ತನಕ, ಜೂನ್ 1ರ ತನಕ ವಿಸ್ತರಿಸಲಾಗಿದೆ ಎಂದು ಪ್ರಧಾನಿ ಮಂಗಳವಾರ ತಿಳಿಸಿದ್ದಾರೆ. ಉದ್ಯೋಗ ಸ್ಥಳಗಳೂ ಸೇರಿ ಶಾಲೆಗಳನ್ನೂ ಮುಚ್ಚಲು ಆದೇಶಿಸಲಾಗಿದೆ. ಆರಂಭದಲ್ಲಿ ಏಪ್ರಿಲ್ 7ರಿಂದ ಮೇ 4ನೇ ತಾರೀಕಿನ ತನಕ ಅವುಗಳನ್ನು ನಡೆಸಲು ಅನುಮತಿಸಲಾಗಿತ್ತು.

ಕೊರೊನಾ ತಡೆಗೆ ಸಿಂಗಾಪೂರ್ ಏಪ್ರಿಲ್ 7ರಿಂದ ಲಾಕ್ ಡೌನ್ಕೊರೊನಾ ತಡೆಗೆ ಸಿಂಗಾಪೂರ್ ಏಪ್ರಿಲ್ 7ರಿಂದ ಲಾಕ್ ಡೌನ್

ಭಾಗಶಃ ಲಾಕ್ ಡೌನ್ ಇರುವ ಸಿಂಗಾಪೂರ್ ನಲ್ಲಿ ಈ ತನಕ 9125 ಕೊರೊನಾ ಪಾಸಿಟಿವ್ ಪ್ರಕರಣಗಳು ಖಾತ್ರಿಯಾಗಿವೆ. ಈ ಪೈಕಿ ಬಹುತೇಕ ಪ್ರಕರಣ ವಲಸಿಗ ಕಾರ್ಮಿಕರು ಡಾರ್ಮಿಟರಿಗಳಲ್ಲಿ ಇದ್ದಾರಲ್ಲ, ಅಲ್ಲಿ ಕಂಡುಬಂದಿವೆ ಎಂದು ಸಿಂಗಾಪೂರದ ಆರೋಗ್ಯ ಸಚಿವಾಲಯವು ತಿಳಿಸಿದೆ.

ಕೊರೊನಾ ಲಾಕ್ ಡೌನ್ ಜೂನ್ 1ರ ತನಕ ವಿಸ್ತರಿಸಿದ ಸಿಂಗಾಪೂರ್

ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥರು ಮಂಗಳವಾರ ಮಾತನಾಡಿ, ದಕ್ಷಿಣ ಏಷ್ಯಾದಲ್ಲೇ ಅತಿ ಹೆಚ್ಚಿನ ಕೊರೊನಾ ಪಾಸಿಟಿವ್ ಪ್ರಕರಣಗಳು ಸಿಂಗಾಪೂರ್ ನಲ್ಲಿ ಕಂಡುಬಂದಿವೆ. ತುಂಬ ಕಷ್ಟದ ಸವಾಲನ್ನು ಸಿಂಗಾಪೂರ ಎದುರಿಸುತ್ತಿದೆ ಎಂದಿದ್ದಾರೆ. ಸೋಮವಾರದಂದು ಒಂದೇ ದಿನ ಸಿಂಗಾಪೂರದಲ್ಲಿ 1426 ಹೊಸ ಪ್ರಕರಣಗಳು ಕಂಡುಬಂದಿವೆ.

English summary

Corona Partial Lock Dow Extended Till June 1st In Singapore

Due to Corona pandemic effect Singapore extended partial lock down till June 1st. Here is the details.
Story first published: Tuesday, April 21, 2020, 16:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X