ಕೊರೊನಾ ಪರಿಣಾಮ: ಭಾರತದ ಬೆಳವಣಿಗೆ ದರವನ್ನು 5.1 ಪರ್ಸೆಂಟ್‌ಗೆ ಇಳಿಸಿದ ಫಿಚ್ ರೇಟಿಂಗ್ಸ್

2010-21ರ ಹಣಕಾಸಿನ ವರ್ಷದಲ್ಲಿ ಭಾರತದ ಜಿಡಿಪಿ ದರ ಬೆಳವಣಿಗೆಯ ಮುನ್ಸೂಚನೆಯನ್ನು ಶುಕ್ರವಾರ ಫಿಚ್ ರೇಟಿಂಗ್ಸ್ 5.1 ಪರ್ಸೆಂಟ್‌ಗೆ ಇಳಿಸಿದೆ.

ದೇಶದಲ್ಲಿ ಕೊರೊನಾವೈರಸ್ ಏಕಾಏಕಿ ವ್ಯಾಪಾರ ಹೂಡಿಕೆ ಮತ್ತು ರಫ್ತಿಗೆ ಧಕ್ಕೆ ತರುವ ಸಾಧ್ಯತೆಯಿದೆ. ಇದರಿಂದ ಭಾರತದ ಬೆಳವಣಿಗೆ ದರವು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದೆ ಈ ಮೊದಲು 2019 ರ ಡಿಸೆಂಬರ್‌ನಲ್ಲಿ ಭಾರತದ ಬೆಳವಣಿಗೆಯನ್ನು 2020-21ರಲ್ಲಿ 5.6 ಪರ್ಸೆಂಟ್ ಮತ್ತು ಮುಂದಿನ ವರ್ಷದಲ್ಲಿ 6.5 ಪರ್ಸೆಂಟ್‌ರಷ್ಟಿದೆ ಎಂದು ಗ್ರಹಿಸಿತ್ತು.

 ಭಾರತದ ಬೆಳವಣಿಗೆ ದರವನ್ನು 5.1 ಪರ್ಸೆಂಟ್‌ಗೆ ಇಳಿಸಿದ ಫಿಚ್ ರೇಟಿಂಗ್ಸ

ತನ್ನ ಗ್ಲೋಬಲ್ ಎಕಾನಿಮಿಕ್ ಔಟ್‌ಲುಕ್ 2020ಯಲ್ಲಿ ಫಿಚ್, ಮುಂದಿನ ವಾರಗಳಲ್ಲಿ ಕೊರೊನಾವೈರಸ್ ಪೀಡಿತ ಜನರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಈ ಸನ್ನಿವೇಶದಿಂದಾಗಿ ತೊಂದರೆಯು ಕಾದಿದೆ ಎಂದಿದೆ.

"ಸರಬರಾಜು-ಸರಪಳಿ ಅಡೆತಡೆಗಳು ವ್ಯಾಪಾರ ಹೂಡಿಕೆ ಮತ್ತು ರಫ್ತುಗಳ ಮೇಲೆ ಹೊಡೆತ ಬೀಳುವ ನಿರೀಕ್ಷೆಯಿದೆ. 2019-2020ರಲ್ಲಿ 5.0 ಪರ್ಸೆಂಟ್‌ರಷ್ಟು ಬೆಳವಣಿಗೆಯನ್ನು ಅನುಸರಿಸಿ 2020-2021ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು 5.1 ಪರ್ಸೆಂಟ್‌ಗೆ ವ್ಯಾಪಕವಾಗಿ ಸ್ಥಿರವಾಗಿರುವುದನ್ನು ನಾವು ನೋಡುತ್ತೇವೆ" ಎಂದು ಫಿಚ್ ಹೇಳಿದೆ.

2021-22ರಲ್ಲಿ ಫಿಚ್ ಭಾರತದ ಬೆಳವಣಿಗೆಯನ್ನು 6.4 ಪರ್ಸೆಂಟ್ ಎಂದು ಅಂದಾಜಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+