ಕೊರೊನಾವೈರಸ್‌ನಿಂದಾಗಿ ಜಾಗತಿಕವಾಗಿ ದೇಶಗಳು ತತ್ತರಿಸುವುದರ ಜೊತೆಗೆ ಭಾರತವೂ ಕೂಡ ಸೋಂಕಿಗೆ ನಲುಗಿದೆ. ಸೋಮವಾರ ಏಕಾಏಕಿ 100 ಹೊಸ ಪ್ರಕರಣಗಳು ದಾಖಲಿಸಿವೆ. ಸಾವಿನ ಸಂಖ್ಯೆಯು 10 ಕ್ಕೆ ತಲುಪಿದೆ, ಒಟ್ಟು ಪ್ರಕರಣಗಳ ಸಂಖ್ಯೆ 499 ಕ್ಕೆ ಏರಿದೆ.
ಕೊರೊನಾವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ಆದೇಶಿಸಿವೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ
ಈಗ ಲಾಕ್‌ಡೌನ್ ವಿಧಿಸಿರುವ ರಾಜ್ಯಗಳಲ್ಲಿ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಇದರ ಜೊತೆಗೆ ಕೊರೊನವೈರಸ್ ಪ್ರಕರಣಗಳನ್ನು ಪರೀಕ್ಷಿಸಲು 12 ಖಾಸಗಿ ಲ್ಯಾಬ್ ಸರಪಳಿಗಳನ್ನು ನೋಂದಾಯಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ 12 ಲ್ಯಾಬ್‌ಗಳಲ್ಲಿ 15,000 ಸಂಗ್ರಹ ಕೇಂದ್ರಗಳಿವೆ.
ಭಾರತದಲ್ಲಿ ಸಾವಿನ ಸಂಖ್ಯೆ 10 ಕ್ಕೆ ಏರಿದೆ
ಕೋವಿಡ್ -19 ಪ್ರಕರಣಗಳು ಭಾರತದಲ್ಲಿ ಸೋಮವಾರ ಮೂರು ಜೀವಗಳನ್ನು ಬಲಿ ತೆಗೆದುಕೊಂಡಿವೆ. ಇತ್ತೀಚೆಗೆ ಇಟಲಿಯಿಂದ ಹಿಂದಿರುಗಿದ 55 ವರ್ಷದ ವ್ಯಕ್ತಿ ತನ್ನ ಕುಟುಂಬದ ಜೊತೆಯಲ್ಲಿ ಕೊಲ್ಕತ್ತಾಗೆ ಬಂದಿದ್ದನು. ಈತನನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾವೈರಸ್ ಇರುವುದು ದೃಢಪಟ್ಟಿತ್ತು. ಈ ವ್ಯಕ್ತಿಯು ಕೊಲ್ಕತ್ತಾದಲ್ಲಿ ನಿಧನರಾಗಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ರೋಗಿಯು ಹೃದಯ ಸಂಬಂಧಿತ ಕಾಯಿಲೆಗಳಿಂದ ಕೂಡ ಬಳಲುತ್ತಿದ್ದರು. ಕರೋನವೈರಸ್ ಕಾರಣದಿಂದಾಗಿ ಇದು ಪಶ್ಚಿಮ ಬಂಗಾಳದ ಸಾವನ್ನಪ್ಪಿದ ಮೊದಲ ಪ್ರಕರಣವಾಗಿದೆ.
ಕೋವಿಡ್ -19 ರ ಕಾರಣದಿಂದಾಗಿ ಹಿಮಾಚಲ ಪ್ರದೇಶದಲ್ಲೂ ಸಾವನ್ನಪ್ಪಿದ ಪ್ರಕರಣ ದಾಖಲಿಸಿದೆ. ಇತ್ತೀಚೆಗೆ ಅಮೆರಿಕಾದಿಂದ ಪ್ರಯಾಣಿಸಿದ 69 ವರ್ಷದ ವ್ಯಕ್ತಿಯೊಬ್ಬರು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರೋನವೈರಸ್ ನಿಂದ ಮೃತಪಟ್ಟರು.
ಭಾರತದಲ್ಲಿ ಒಟ್ಟು 500 ಪ್ರಕರಣಗಳು
ಭಾರತ ಸೋಮವಾರ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಕೇರಳದಲ್ಲಿ ಗರಿಷ್ಠ ಪ್ರಕರಣಗಳು (28), ಮಹಾರಾಷ್ಟ್ರದಲ್ಲಿ 23 ಹೊಸ ಪ್ರಕರಣಗಳು ದಾಖಲಾಗಿವೆ. ಗುಜರಾತ್ (12) ತಮಿಳುನಾಡು (2) ಮತ್ತು ಬಿಹಾರ (1) ಸೇರ್ಪಡೆಗೊಳ್ಳಲು ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದ ಇತರ ರಾಜ್ಯಗಳು. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸೋಮವಾರ ಎರಡು ಪ್ರಕರಣಗಳು ವರದಿಯಾಗಿವೆ.
ಭಾರತ ಸಂಪೂರ್ಣ ಸ್ಥಬ್ದ
ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಒಟ್ಟು 30 ರಾಜ್ಯಗಳು ಮತ್ತು 548 ಜಿಲ್ಲೆಗಳನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣ ಲಾಕ್ ಡೌನ್ ಘೋಷಿಸಿವೆ. ಭಾರತವು 28 ರಾಜ್ಯಗಳನ್ನು ಮತ್ತು ಎಂಟು ಯುಟಿಗಳನ್ನು ಹೊಂದಿದೆ.
ಸಂಪೂರ್ಣ ಲಾಕ್‌ಡೌನ್ ವಿಧಿಸಿರುವ 30 ರ ಹೊರತಾಗಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾ ಮೂರು ರಾಜ್ಯಗಳು ಕೊರೊನಾವೈರಸ್ ಹರಡುವಿಕೆ ಪ್ರಕರಣಗಳನ್ನು ದಾಖಲಿಸಿರುವ ಜಿಲ್ಲೆಗಳನ್ನು ಲಾಕ್ ಮಾಡಿವೆ. ಉತ್ತರ ಪ್ರದೇಶ 16 ಜಿಲ್ಲೆಗಳನ್ನು , ಮಧ್ಯಪ್ರದೇಶ 37 ಮತ್ತು ಒಡಿಶಾ 5 ಜೊತೆಗೆ 6 ಪುರಸಭೆಯ ವ್ಯಾಪ್ತಿಯನ್ನು ಲಾಕ್‌ಡೌನ್ ಮಾಡಿದೆ. ಲಕ್ಷದ್ವೀಪ ಕೆಲವು ನಿರ್ಬಂಧಗಳನ್ನು ಹಾಕಿದೆ.
ಪಂಜಾಬ್ ಮತ್ತು ಮಹಾರಾಷ್ಟ್ರಗಳು ಕರ್ಫ್ಯೂ ವಿಧಿಸಿದರೆ, ಯಾವುದೇ ನಿರ್ಬಂಧಗಳನ್ನು ಹೊರಡಿಸದ ರಾಜ್ಯಗಳು ಸಿಕ್ಕಿಂ ಮತ್ತು ಮಿಜೋರಾಂ ಆಗಿವೆ.


Click it and Unblock the Notifications